ಉಡುಪಿ: ರಸ್ತೆ ಅಪಘಾತದಲ್ಲಿ ಆರ್ಎಸ್ಎಸ್ ಮುಖಂಡ ಸಾವು!....ಅಕ್ಟೋಬರ್ 28ರಂದು ಆಂಧ್ರ ಕರಾವಳಿಗೆ 'ಅರ್ನಾಬ್' ಚಂಡಮಾರುತ, ತೀವ್ರ ಸ್ವರೂಪ, 3 ದಿನ ಮಳೆ ಸಾಧ್ಯತೆ IMD...
ಉಡುಪಿ: ಯುವಕನಿಗೆ ಹಲ್ಲೆ : ಅವಮಾನದಿಂದ ಆಸ್ಪತ್ರೆಯಲ್ಲೇ ಆತ್ಮಹತ್ಯೆ :10ಮಂದಿ ವಿರುದ್ಧ ಪ್ರಕರಣ ದಾಖಲು
ಉಡುಪಿ: ಪ್ರೇಮ ವಿಚಾರಕ್ಕೆ ಸಂಬಂಧಿಸಿ ಯುವಕನೊಬ್ಬನಿಗೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ ಪರಿಣಾಮ, ಮನನೊಂದ ಯುವಕ ಜಿಲ್ಲಾಸ್ಪತ್ರೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಪೆರ್ಡೂರಿನ ದಿಲೀಪ್ ಕುಮಾರ್ (30) ಅವರ ಸಹೋದರ ಪ್ರದೀಪ್ (ಪೆರ್ಡೂರು) 8 ವರ್ಷಗಳಿಂದ ಶ್ರಾವ್ಯ ಶೆಟ್ಟಿ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದರು.
ದೂರುದಾರರ ಪ್ರಕಾರ, ಅ.27 ರಂದು ರಾತ್ರಿ 10 ಗಂಟೆಗೆ ಪ್ರದೀಪ್ ನಾಯರ್ ಕೋಡಿನಲ್ಲಿರುವ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಶ್ರಾವ್ಯ ಶೆಟ್ಟಿಯ ಸಹೋದರರಾದ ಪ್ರಸನ್ನ ಶೆಟ್ಟಿ, ಸುಧೀರ್ ಶೆಟ್ಟಿ, ಶೈಲೇಶ್ ಶೆಟ್ಟಿ, ಸನತ್, ಕೃಷ್ಣ, ಸುಜಯ್ ಮತ್ತು ಇತರರು ಮೂರು ಕಾರುಗಳಲ್ಲಿ ಬಂದು ಪ್ರದೀಪ್ನನ್ನು ಶ್ರಾವ್ಯ ಶೆಟ್ಟಿ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪ್ರಸನ್ನ ಶೆಟ್ಟಿ ಬೆತ್ತದಿಂದ ಕಾಲು ಮತ್ತು ಬೆನ್ನಿಗೆ ಬಾಸುಂಡೆ ಬರುವಂತೆ ಹೊಡೆದಿದ್ದು, ಜೊತೆಗಿದ್ದವರು ಮರದ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ.
ವಿಷಯ ತಿಳಿದ ದೂರುದಾರರು ಸ್ನೇಹಿತರನ್ನು ಶ್ರಾವ್ಯ ಶೆಟ್ಟಿ ಮನೆಗೆ ಕಳುಹಿಸಿದಾಗ, ಆರೋಪಿಗಳು ಪ್ರದೀಪ್ಗೆ ಅವಾಚ್ಯವಾಗಿ ಬೈದು ಹೊಡೆಯುತ್ತಿದ್ದರು. ಸ್ನೇಹಿತರನ್ನು ಕಂಡು ಹಲ್ಲೆ ನಿಲ್ಲಿಸಿದ್ದಾರೆ.
ಮರುದಿನ ಅ.28 ರಂದು ಪ್ರದೀಪ್ ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದರು. ಅ.30 ರಂದು ಆಸ್ಪತ್ರೆಗೆ ಹೋದಾಗ ಪ್ರದೀಪ್ ನಡೆದ ಘಟನೆ ಮತ್ತು ಬೆದರಿಕೆಯ ಬಗ್ಗೆ ತಿಳಿಸಿದ್ದು, ತೀವ್ರ ದುಃಖದಲ್ಲಿದ್ದರು.
ಇದೇ ವಿಚಾರದಲ್ಲಿ ಮನನೊಂದು ಅ.30 ರಂದು ಸಂಜೆ 5:30ಕ್ಕೆ ಪ್ರದೀಪ್ ಸರ್ಕಾರಿ ಜಿಲ್ಲಾಸ್ಪತ್ರೆ ಅಜ್ಜರಕಾಡಿನ ಶೌಚಾಲಯದೊಳಗೆ ಬಿಳಿ ಬಣ್ಣದ ಟ್ಯಾಗ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಪ್ರದೀಪ್ ಸಾವಿಗೆ ಪ್ರಚೋದನೆ ನೀಡಿದ ಆರೋಪದಡಿ ಶ್ರಾವ್ಯ ಶೆಟ್ಟಿ, ಪ್ರಸನ್ನ ಶೆಟ್ಟಿ, ಸುಧೀರ್, ಶೈಲೇಶ್, ಶಶಾಂಕ್, ಕೃಷ್ಣ, ಸುಜಯ್, ಸನತ್, ಹೊರ ರಾಜ್ಯದ ಇಬ್ಬರು ಕಾರ್ಮಿಕರು ಸೇರಿದಂತೆ ಇತರರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.