ಟಿಬೆಟ್ನಲ್ಲಿ ಪ್ರಬಲ ಭೂಕಂಪ: ನೂರಾರು ಮನೆಗಳು ಧರಾಶಾಹಿ; ಕನಿಷ್ಟ 16 ಮಂದಿ ಸಾವು, 54ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ....ಅಕ್ಟೋಬರ್ 25ರವರೆಗೆ ಮಳೆ, ಗುಡುಗು ಮುಂದುವರಿಕೆ; ವಾರಾಂತ್ಯ ರಾಜ್ಯಾದ್ಯಂತ ಭಾರೀ ಮಳೆ; IMD...
ವೈಭವದ ಶೋಭಾಯಾತ್ರೆಯೊ೦ದಿಗೆ ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ ಶ್ರೀಶಾರದಾ ಮಹೋತ್ಸವ ಸ೦ಪನ್ನ
ಉಡುಪಿ:ಅ. 23: ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಶ್ರೀ ಶಾರದಾ ಮಹೋತ್ಸವ ಸಮಿತಿ ಆಶ್ರಯ ದಲ್ಲಿ 24ನೇ ವರ್ಷದ ಶ್ರೀ ಶಾರದಾ ಮಾತೆಯ ವಿಸರ್ಜನ ಶೋಭಾಯಾತ್ರೆ ಅ. 22ರ ಗುರುವಾರದ೦ದು ನಡೆಯಿತು.
ವೆ೦ಕಟರಮಣ ದೇವಸ್ಥಾನದಿ೦ದ ತೆ೦ಕಪೇಟೆ,ಐಡಿಯಲ್ ಸರ್ಕಲ್,ಕೊಳದ ಪೇಟೆ,ಕವಿ ಮುದ್ದಣ್ಣ ಮಾರ್ಗ ತ್ರಿವೇಣಿ ಸರ್ಕಲ್, ಚಿತ್ತರಂಜನ್ ವೃತ್ತ, ತೆಂಕಪೇಟೆ ರಸ್ತೆಯಲ್ಲಿ ಸಾಗಿಬಂದು ದೇಗುಲಕ್ಕೆ ಬಂದು ಪದ್ಮ ಸರೋವರದಲ್ಲಿ ತೆಪ್ಪೋತ್ಸವ ನಡೆಸಿ ಶ್ರೀ ಶಾರದಾ ಮಾತೆಯ ವಿಗ್ರಹವನ್ನು ವಿಸರ್ಜನೆ ಮಾಡಲಾಯಿತು.
ಮೆರವಣಿಗೆಯಲ್ಲಿ ವಿವಿಧ ಬಗೆಯ ಟ್ಯಾಬ್ಲೊಗಳು, ಚಂಡೆ, ನಾಸಿಕ್ ಬ್ಯಾಂಡ್, ಮಂಗಲ ವಾದ್ಯದೊಂದಿಗೆ ನೂರಾರರು ಭಕ್ತರು ಸಮವಸ್ತ್ರ ಧರಿಸಿ ಪಾಲ್ಗೊಂಡರು. ವಿಶೇಷವಾಗಿ ಬೆಳ್ಳಿ ರಥದಲ್ಲಿ ಶ್ರೀಕೃಷ್ಣ ಅರ್ಜುನ, ವಿಠೋಬಾ ರುಖುಮಾಯಿ, ಶ್ರೀ ಪುರಂದರದಾಸ, ಶ್ರೀ ಕನಕದಾಸ ವೇಷ ಧರಿಸಿ ಮೆರುಗು ಹೆಚ್ಚಿಸಿತ್ತು
ಸಾವಿರಾರು ಪುರುಷರು, ಮಹಿಳೆಯರು, ಯುವಕ, ಯುವತಿಯರು ಭಜನೆ ಸಂಕೀರ್ತನೆ ಹಾಡಿ ಕುಣಿದರು. ಊರ ಪರಊರಿನ ಸಾವಿರಾರು ಭಕ್ತರು ಭಾಗವಹಿಸಿದ್ದರು.
ದೇವಸ್ಥಾನದ ಆಡಳಿತ ಮೊಕೇಸರ ಗುಜ್ಜಾಡಿ ಪ್ರಭಾಕರ್ ನಾಯಕ್, ಆಡಳಿತ ಮಂಡಳಿಯ ಸದಸ್ಯರಾದ ನಾರಾಯಣ ಪ್ರಭು, ಡಾ. ಕೈಲಾಸನಾಥ ಶೆಣೈ, ಉಮೇಶ ಪೈ, ಅಶೋಕ ಬಾಳಿಗ, ದಿನೇಶ್ ಪೈ, ಡಾ. ವಿನಾಯಕ ಶೆಣೈ, ಸುಭಾಸ್ ಮಧುಕರ್ಕಾಮತ್, ವೆಂಕಟೇಶ್ ಭಟ್, ಪ್ರಭಾಕರ್ಭಟ್, ಮಹೇಶ್ ಶೆಣೈ, ಮಟ್ಟಾರ್ವಸಂತ್ ಕಿಣೆ, ಚಿತ್ತರಂಜನ್ ಭಟ್, ಹರಿರಾಮ್ ಶೆಣೈ ಹಾಗೂ ಶ್ರೀ ಶಾರದಾ ಮಹೋತ್ಸವದ ಸಮಿತಿಯ ಅಧ್ಯಕ್ಷ ಪಿ. ಅಜಿತ್ ಕುಡ್ವ ಕಾರ್ಯದರ್ಶಿ ಶ್ಯಾಮ ಪ್ರಸಾದ್ ಕುಡ್ಡ,ಖಜಾಂಚಿ ನಾರಾಯಣ ಭಟ್, ಭಜನ ಮಹೋತ್ಸವದ ಅಧ್ಯಕ್ಷ ಮಟ್ಟಾರ್ಸತೀಶ್ ಕಿಣಿ, ಭಾಸ್ಕರ್ ಶೆಣೈ, ಪಿ. ವಿ. ಶೆಣೈ, ಅಲೆವೂರು ಗಣೇಶ್ ಕಿಣಿ, ಶಾಂತಾರಾಮ ಪೈ, ಯುವಕ ಮಂಡಳಿ ಜಿಎಸ್ಬಿ ಸದಸ್ಯರು, ಭಗಿನಿ ವೃಂದ, ಜಿಎಸ್ಬಿ ಮಹಿಳಾ ಮಂಡಳಿ ಸದಸ್ಯರು, ಭಜನ ಮಹೋತ್ಸವ ಸಮಿತಿಯ ಸದಸ್ಯರು, ವಿವಿಧ ಸಮಿತಿಯ ಸದಸ್ಯರು ಮತ್ತಿತರರಿದ್ದರು.
ಮೆರವಣಿಗೆಯ ಮಾರ್ಗದ ಉದ್ದಕ್ಕೂ ಸಿಡಿಮದ್ದು ಪ್ರದರ್ಶನ ನಡೆಯಿತು.ಮಳೆರಾಯನ ಅರ್ಭಟವು ಜೋರಾಗಿತ್ತು.