ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಚಾಲನೆ: ತಾಯಿ ಚಾಮುಂಡೇಶ್ವರಿಗೆ CM ಡಿಕೆ ಶಿವಕುಮಾರ್ ಪುಷ್ಪಾರ್ಚನೆ...ನಾಳೆ (ಗುರುವಾರ)ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಶ್ರೀ ಶಾರದಾ ಮಾತೆಯ ವಿಸರ್ಜನೆ ಜರಗಲಿದೆ...

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ನವರಾತ್ರೆಯ ಚಂಡಿಕಾಯಾಗ ಸ೦ಪನ್ನ

ಉಡುಪಿ:ಉಡುಪಿಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶ್ರೀ ದೇವರ ಸನ್ನಿಧಿಯಲ್ಲಿ ನವರಾತ್ರಿಯ ದಶಮಿ ದಿನವಾದ ಬುಧವಾರದದಂದು ಚಂಡಿಕಾಯಾಗವು ಅದ್ದೂರಿಯಿ೦ದ ಸ೦ಪನ್ನ ಗೊ೦ಡಿತು.

ಅರ್ಚಕರಾದ ರವೀಂದ್ರ ಭಟ್ , ವಿನಾಯಕ ಭಟ್ ಚಂಡಿಕಾಯಾಗದ ಧಾರ್ಮಿಕ ಪೂಜಾ ವಿಧಿಗಳನ್ನ ನಡೆಸಿ ಕೊಟ್ಟರು. ಅರ್ಚಕರಾದ ದೀಪಕ್ ಭಟ್ , ದಯಾಘನ್ ಭಟ್ , ದೀಪಕ್ ಭಟ್, ಗಿರೀಶ್ ಭಟ್ ಸಹಕರಿಸಿದರು.

ಚಂಡಿಕಾ ಯಾಗದ ಪೂಜಾ ಕಾರ್ಯದಲ್ಲಿ ಆಡಳಿತ ಮುಕ್ತೇಸರಾದ ಗುಜ್ಜಾಡಿ ಪ್ರಭಾಕರ್ ದಂಪತಿಗಳು ಸಹಕರಿಸಿದರು.

ಶ್ರೀದೇವರಿಗೆ ವಿಶೇಷ ಅಲಂಕಾರ , ಸಮೂಹಿಕ ನಮಸ್ಕಾರ , ಪೂರ್ಣಾಹುತಿ , ಮಹಾಪೂಜೆ , ಪಲ್ಲ ಪೂಜೆ ನಡೆಸಿದ ಬಳಿಕ ಶ್ರೀ ಶಾರದಾ ದೇವಿಗೆ ಅರ್ಪಿಸಿದ ಸೀರೆಗಳನ್ನು ಏಲಂ ನಡೆಸಿ ಏಲ೦ನಲ್ಲಿ ಪಡೆದಭಕ್ತರಿಗೆ ವಿತರಣೆ ಮಾಡಲಾಯಿತು.

ದೇವಳದ ಆಡಳಿತ ಮೊಕ್ತೇಸರ ಗುಜ್ಜಾಡಿ ಪ್ರಭಾಕರ್ ನಾಯಕ , ಆಡಳಿತ ಮಂಡಳಿಯ ಸದಸ್ಯರಾದ ನಾರಾಯಣ ಪ್ರಭು , ಡಾ ಕೈಲಾಸನಾಥ ಶೆಣೈ , ಉಮೇಶ ಪೈ , ಅಶೋಕ ಬಾಳಿಗ , ದಿನೇಶ್ ಪೈ ,ಡಾ ವಿನಾಯಕ ಶೆಣೈ , ಸುಭಾಸ್ ಮಧುಕರ್ ಕಾಮತ್ , ವೆಂಕಟೇಶ್ ಭಟ್ , ಪ್ರಭಾಕರ್ ಭಟ್ , ಮಹೇಶ್ ಶೆಣೈ , ಮಟ್ಟಾರ್ ವಸಂತ್ ಕಿಣೆ , ಚಿತ್ತರಂಜನ್ ಭಟ್ , ಹರಿರಾಮ್ ಶೆಣೈ ಹಾಗೂ ಭಜನಾ ಮಹೋತ್ಸವದ ಅಧ್ಯಕ್ಷ ಮಟ್ಟಾರ್ ಸತೀಶ್ ಕಿಣಿ , ಭಾಸ್ಕರ್ ಶೆಣೈ , ಪಿ ವಿ ಶೆಣೈ , ಅಲೆವೂರು ಗಣೇಶ್ ಕಿಣಿ , ಶಾಂತರಾಮ ಪೈ ಜಿ ಎಸ್ ಬಿ ಯುವಕ ಮಂಡಳಿಸದಸ್ಯರು, ಭಗಿನಿ ವೃಂದ , ಜಿ ಎಸ್ ಬಿ ಮಹಿಳಾ ಮಂಡಳಿ ಸದಸ್ಯರು , ಭಜನಾ ಮಹೋತ್ಸವ ಸಮಿತಿಯ ಸದಸ್ಯರು , ವಿವಿಧ ಸಮಿತಿಯ ಸದಸ್ಯರು ಹಾಗೂ ಊರ-ಪರಊರ ನೂರಾರು ಸಮಾಜ ಬಾಂದವರು ಉಪಸ್ಥಿತರಿದ್ದರು.

No Comments

Leave A Comment