ಸಾರ್ವಜನಿಕ ಶಾರದೋತ್ಸವ ಸಮಿತಿ-ಉಡುಪಿ ದಸರಾಕ್ಕೆ ಇ೦ದು ಚಾಲನೆ…
ಉಡುಪಿ: ಅ. 11: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಉಡುಪಿ ವತಿಯಿಂದ ಶ್ರೀಕೃಷ್ಣ ಮಠ, ಪರ್ಯಾಯ ಶೀರೂರು ಮಠದ ಸಹಯೋಗದಲ್ಲಿ ಉಡುಪಿ ದಸರಾ ಅ. 11ರಿಂದ 20ರ ವರೆಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಲಿದೆ.
11ರಂದು ಬೆಳಗ್ಗೆ 10ಕ್ಕೆ ಶ್ರೀ ಶಾರದೆ, ನವದುರ್ಗೆಯರ ಪ್ರತಿಷ್ಠಾಪನೆ ನಡೆಯಲಿದ್ದು, ಸಂಜೆ 5.30ಕ್ಕೆ ಮಹಾರಾಷ್ಟ್ರದ ಸಂಸದ ಡಾ। ಶ್ರೀಕಾಂತ್ ಏಕನಾಥ್ ಶಿಂಧೆ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಪ್ರತಿ ದಿನ ಸಭಾ ಕಾರ್ಯಕ್ರಮದಲ್ಲಿ ಪರ್ಯಾಯ ಶ್ರೀ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಡಾ. ಜಿ. ಶಂಕರ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬೆಂಗಳೂರು
ಎ.ಜಿ.ಆರ್. ಗ್ರೂಪಿನ ಕೆ. ಪ್ರಕಾಶ್ ಶೆಟ್ಟಿ ಶುಭಾಶಂಸನೆ ಮಾಡಲಿದ್ದಾರೆ.
12ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ, 13ರಂದು ಸಂಸದ ಬಿ. ವೈ. ರಾಘವೇಂದ್ರ, 14ರಂದು ಉದ್ಯಮಿ ಶಾಂತಾರಾಮ ಶೆಟ್ಟಿ 15ರಂದು ಉದ್ಯಮಿ ಆನಂದ್ ಸಿ. ಕುಂದರ್, 16ರಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, 17ರಂದು ಶಾಸಕ ಎ.
ಉಡುಪಿ ದಸರಾಕ್ಕೆ ಇಂದು ಚಾಲನೆ ಕಿರಣ್ ಕುಮಾರ್ ಕೊಡ್ಡಿ 18ರಂದು ಸಂಸದ ಬ್ರಿಜೇಶ್ ಚೌಟ, 19ರಂದು ಶಾಸಕ ಯಶ್‌ಪಾಲ್ ಸುವರ್ಣ, 20ರಂದು ಉದ್ಯಮಿ ರವಿನಾಥ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ನಿತ್ಯವೂ ಧಾರ್ಮಿಕ, ವೈವಿಧ್ಯಮಯ ಸಾಂಸ್ಕೃತಿಕ, ಭಜನೆ, ವಿವಿಧ ಸ್ಪರ್ಧೆಗಳು, ದುರ್ಗಾಹೋಮ ಸಹಿತ ಅ. 20ರಂದು ಚಂಡಿಕಾಹೋಮ, ಸಭಾ ಕಾರ್ಯಕ್ರಮಗಳೊಂದಿಗೆ ದಸರಾ ಸಂಪನ್ನಗೊಳ್ಳಲಿದೆ.
20ರಂದು ಉಡುಪಿಯ ಶ್ರೀಕೃಷ್ಣ ಸಾನ್ನಿಧ್ಯದಿಂದ ಮಲ್ಪೆಯ ರಾಮನ ಸಾನ್ನಿಧ್ಯದವರೆಗೆ ವೈಭವದ ಶೋಭಾಯಾತ್ರೆ ನಡೆಯಲಿದೆ. ಮಲ್ಪೆ ಸಮುದ್ರದಲ್ಲಿ ವಿಗ್ರಹಗಳ ಜಲಸ್ತಂಭನ ನೆರವೇರಲಿದೆ ಎಂದು ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಬೈಕಾಡಿ ಸುಪ್ರಸಾದ್ ಶೆಟ್ಟಿ ಪ್ರಕಟನೆ ಮೂಲಕ ತಿಳಿಸಿದ್ದಾರೆ.