....ನಾಡಿನ ಎಲ್ಲೆಡೆಯಲ್ಲಿ ಇ೦ದಿನಿ೦ದ (ಭಾನುವಾರದಿ೦ದ)ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ...16ರ೦ದು ಶ್ರೀಶಾರದಾ ಪೂಜೆ...

5ವರ್ಷಕ್ಕಿಂತಲೂ ಜಾಸ್ತಿ ಉಡುಪಿ ನಗರಸಭೆಯನ್ನು ಆಡಳಿತ ನಡೆಸಿದ ಬಿಜೆಪಿಯವರು ಯಾವುದೇ ಕೆಲಸವನ್ನು ಸಾಧಿಸದೇ ತಮ್ಮನ್ನು ಉದ್ದಾರಗೊಳಿಸುವಲ್ಲಿ ಪ್ರವರ್ತರಾಗಿದ್ದ ಕಾರಣ ನಗರಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿ ನಡೆಯುತ್ತಿರಲಿಲ್ಲ ಇದಕ್ಕೆ ಕಾರಣವೇ ಬಿಜೆಪಿಯ ಆಡಳಿತ- ಸುರೇಶ್ ಶೆಟ್ಟಿ ಬನ್ನಂಜೆ.

ಉಡುಪಿ:ಈ ಬಿಜೆಪಿಯ ನಗರಸಭಾ ಸದಸ್ಯರುಗಳು ಹಾಗೂ ಮಾಜಿ ಅಧ್ಯಕ್ಷರು ಸೇರಿ ಯಾವತ್ತೂ ಉಡುಪಿ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ನಗರಸಭೆಯಲ್ಲಿ ಆಡಳಿತ ಸರಿಯಾಗಿ ಇಲ್ಲ ಎಂದು ದೂರು ನೀಡುತ್ತಿರುವುದು ನೋಡಿದರೆ ಇವರ ಐದು ವರ್ಷದ ಆಡಳಿತದಲ್ಲಿ ಇವರು ಏನನ್ನು ಸಾಧಿಸಲಿಲ್ಲ ಎಂಬುದು ಸಾಬೀತಾಗುತ್ತಿದೆ.

ಆದರೆ ಇವರು ನಿರಂತರವಾಗಿ ಉಡುಪಿಯ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಉಡುಪಿ ನಗರಸಭೆಯ ಅಧಿಕಾರಿಗಳನ್ನು ಮತ್ತು ಉದ್ಯೋಗಿಗಳನ್ನು ದೂಷಿಸುತ್ತ ಅವರ ವಿರುದ್ಧ ಹೇಳಿಕೆ ನೀಡಿ ಜನಸಾಮಾನ್ಯರ ದಾರಿಯನ್ನು ತಪ್ಪಿಸುತ್ತಿದ್ದಾರೆ.

ಇವರ ಈ ಎಲ್ಲಾ ಬೆದರಿಕೆಗೆ ಮತ್ತು ಕಂಪ್ಲೇಂಟ್ ಗಳಿಗೆ ಉಡುಪಿಯ ಜಿಲ್ಲಾಧಿಕಾರಿಯವರು ತಲೆಬಾಗದೆ. ಇವರಿಗೆ ಸಮರ್ಥಕವಾದ ಉತ್ತರವನ್ನು ನೀಡಬೇಕಾಗಿದೆ. ನಗರಸಭೆಯ ಬಿಜೆಪಿಯ ಆಡಳಿತದಲ್ಲಿ ನಗರಸಭೆಯಲ್ಲಿ ಹಣ ಇಲ್ಲದೆಯೂ ಜೀರೋ ಬ್ಯಾಲೆನ್ಸ್ ನಲ್ಲಿ ಕಾಮಗಾರಿಗೆ ಉಡುಪಿ ನಗರಸಭೆ ಅಧ್ಯಕ್ಷರು ಅನುಮೋದನೆ ನೀಡಿದ್ದು ಎಷ್ಟು ಸರಿ ಎಂದು ಉಡುಪಿ ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಹಾಗೂ ಉಡುಪಿ ನಗರಸಭೆಯ ನಾಮ ನಿರ್ದೇಶಕ ಸದಸ್ಯರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.

ಇದರ ಬಗ್ಗೆ ಉಡುಪಿ ನಗರಸಭೆಯ ನಾಗರಿಕರು ಈ ಬಿಜೆಪಿಯ ಡೋಂಗಿ ಹೇಳಿಕೆ ಬಗ್ಗೆ ಮುಂದಿನ ಚುನಾವಣೆಯಲ್ಲಿ ಅವರಿಗೆ ತಕ್ಕ ಉತ್ತರವನ್ನು ನೀಡಬೇಕಾಗಿದೆ ಎಂದು ಉಡುಪಿ ನಗರಸಭಾ ವ್ಯಾಪ್ತಿ ಜನಸಾಮಾನ್ಯರಲ್ಲಿ ಕಳಕಳಿಯಿಂದ ವಿನಂತಿಸಿರುತ್ತಾರೆ.

No Comments

Leave A Comment