ಶ್ವಾಸಕೋಶದ ಕ್ಯಾನ್ಸರ್ ಮಂಡ್ಯ ಜಿಲ್ಲೆಯ ಅಪರ ಪೊಲೀಸ್ ಅಧೀಕ್ಷಕ ಸಿ.ಇ.ತಿಮ್ಮಯ್ಯ ವಿಧಿವಶ
ಉಡುಪಿ:ಮಂಡ್ಯ ಜಿಲ್ಲೆಯ ಅಪರ ಪೊಲೀಸ್ ಅಧೀಕ್ಷಕರಾಗಿ (Addl SP) ಕರ್ತವ್ಯ ನಿರ್ವಹಿಸುತ್ತಿದ್ದ ಸಿ.ಇ. ತಿಮ್ಮಯ್ಯ (58 ವರ್ಷ) ಅವರು (ಇಂದು) ಶನಿವಾರ ಮುಂಜಾನೆ 1 ಗಂಟೆಗೆ ನಿಧನರಾಗಿದ್ದಾರೆ.
ಅವರು ಶ್ವಾಸಕೋಶದ ಕ್ಯಾನ್ಸರ್ (Lung Cancer) ನಿಂದ ಬಳಲುತ್ತಿದ್ದು, ಮಂಡ್ಯದ ಸ್ಪಂದನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.ಅತ್ಯಂತ ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿ ಹೆಸರುವಾಸಿಯಾಗಿದ್ದ ತಿಮ್ಮಯ್ಯ ಅವರು ಪೊಲೀಸ್ ಇಲಾಖೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.ಉಡುಪಿ ನಗರ ಠಾಣೆಯಲ್ಲಿ ಪಿಎಸೈಯಾಗಿಯೂ,ವೃತ್ತ ನಿರೀಕ್ಷರಾಗಿ ಸೇವೆಯನ್ನು ಸಲ್ಲಿಸಿದವರಾಗಿದ್ದರು.
ಅಂತಿಮ ದರ್ಶನ:
ಶನಿವಾರ ಮಧ್ಯಾಹ್ನ 3 ಗಂಟೆಯವರೆಗೆ ಮಂಡ್ಯದ ನೀರಾವರಿ ಇಲಾಖೆ ಕ್ವಾಟ್ರಸ್, ಅಶೋಕನಗರ, ವಿ.ವಿ. ರಸ್ತೆ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಗಿತ್ತು.
ಅಂತ್ಯಕ್ರಿಯೆ:
ಸಂಜೆ ಮೈಸೂರಿನ ವಿಜಯನಗರದ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.