..........ನಾಡಿನ ಎಲ್ಲೆಡೆಯಲ್ಲಿನ ದೇವಿದೇವಸ್ಥಾನ ಸೇರಿದ೦ತೆ ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಗೆ ಬಿರುಸಿನ ಸಿದ್ದತೆ........ಕಳಚಿ ಹೋಯಿತು ಉದುಪಿ ತೆ೦ಕಪೇಟೆಯ ವಾರ್ಡಿನ ಬಿಜೆಪಿಯ ಜಿ.ಎಸ್.ಜಿ ಸಮಾಜದ ನಗರ ಸಭೆಯ ಸದಸ್ಯತ್ವ ಸ್ಥಾನಮಾನ. ಬ್ರಾಹ್ಮಣ ಸಮಾಜದ ತೆಕ್ಕೆಗೆ. ಮಧುಕರ್ ಮುದ್ರಾಡಿ ಮು೦ದಿನ ನಗರ ಸಭೆಯ ಚುನಾಣೆಯ ಬಿ.ಜೆ.ಪಿ ಪಕ್ಷದ ಅಭ್ಯರ್ಥಿ...
ಉಡುಪಿ ಕಡಿಯಾಳಿ ಮಹಿಷಮರ್ದಿನೀ ದೇವಸ್ಥಾನ ದಲ್ಲಿ ಅ.11ರಿಂದ ಅ. 21ರ ವರೆಗೆ ನವರಾತ್ರಿ ಮಹೋತ್ಸವ
ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಅ. 11ರಿಂದ ಅ. 21ರ ವರೆಗೆ ನವರಾತ್ರಿ ಮಹೋತ್ಸವ ನಡೆಯಲಿದೆ. ವೈಭವದಿಂದ
ಪ್ರತಿದಿನ ಬೆಳಗ್ಗೆ 5.30ಕ್ಕೆ ಸುಪ್ರಭಾತ, ಗಣಪತಿ ಯಾಗ, ಚಂಡಿಕಾ ಯಾಗ, ಮಹಾಪೂಜೆ, ಸಂಜೆ 5ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 7.30ರಿಂದ ಮಹಾಪೂಜೆ, ಹೂವಿನ ಪೂಜೆ ಇತರ ಸೇವಾ ಪೂಜೆಗಳು, ರಾತ್ರಿ 9ರಿಂದ ಕಲೋಕ್ತ ಪೂಜೆ, ಬಲಿ, ರಾತ್ರಿ ಪೂಜೆ, ವಾಹನೋತ್ಸವ ನಡೆಯಲಿದೆ.
12ರಂದು ಬೆಳಗ್ಗೆ 7ಕ್ಕೆ ಕದಿರು ಕಟ್ಟುವುದು, ಅ. 15ರಂದು ಲಲಿತಾ ಪಂಚಮಿ, ಅ. 17ರಂದು ಶಾರದಾ ಪೂಜೆ ಆರಂಭ, 19ರಂದು ದುರ್ಗಾಷ್ಟಮಿ, ಮಹಾ ಚಂಡಿಕಾ ಯಾಗ, ಸಾರ್ವಜನಿಕ ಅನ್ನ ಸಂತರ್ಪಣೆ, ಅ.20ರಂದು ನವಮಿ ಕನ್ನಿಕಾ ಪೂಜೆ, ಅ. 21ರಂದು ಶಾರದಾ ವಿಸರ್ಜನೆ, ಮಹಾಮಂತ್ರಾಕ್ಷತೆ ನಡೆಯಲಿದೆ.
ಪರ್ಕಳ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ, ಕಡಿಯಾಳಿ ಶ್ರೀ ಮಹಿಷಮರ್ದಿನಿ ಯಕ್ಷಗಾನ ಮಂಡಳಿ, ಗುಂಡಿಬೈಲು `ಯಕ್ಷಗಾನ ಕಲಾ ಕ್ಷೇತ್ರದವ ರಿಂದ ಯಕ್ಷಗಾನ, ರಾಧಾಕೃಷ್ಣ ನೃತ್ಯ ನಿಕೇತನ, ಸೃಷ್ಟಿಶ್ರೀ ಭರತನಾಟ್ಯ ಕಲಾ ನೃತ್ಯಾಲಯ, ಶ್ರುತಿನಾಟ್ಯ ಕೂಟದಿಂದ ಭರತನಾಟ್ಯ, ಪವಿತ್ರಾ ಭಟ್ ಅವರಿಂದ ಶಾಸ್ತ್ರಿಯ ಸಂಗೀತ, ಮಧೂರು ಬಾಲಸುಬ್ರಹ್ಮಣ್ಯ ಅವರಿಂದ ಸಂಗೀತ, ಕಡಿಯಾಳಿ ಮಹಿಷಮರ್ದಿನೀ ಯಕ್ಷ ಕೂಟದಿಂದ ತಾಳಮದ್ದಳೆ, ದರ್ಪಣ ತಂಡದಿಂದ ನೃತ್ಯ ಕಲಾ ವೈಭವ, ಡಾ. ಶ್ರೀಪತಿ ರಾವ್, ಅಮ್ಮ ಡ್ರಮ್ಸ್ ಮೆಲೋಡಿಸ್‌ನಿಂದ ಭಕ್ತಿಸಂಗೀತ, ಪ್ರಭಾಕರ ಶೇರಿಗಾರ ಅವರಿಂದ ಸ್ಯಾಕ್ರೋಫೋನ್, ಜಯರಾಮ ಮಣಿಪಾಲ ತಂಡದಿಂದ ಬಿಕ್ರಮ ಭಜರಂಗಿ ನಾಟಕ ನಡೆಯಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಿಜಯ ರಾಘವ ರಾವ್ ತಿಳಿಸಿದ್ದಾರೆ.