..........ನಾಡಿನ ಎಲ್ಲೆಡೆಯಲ್ಲಿನ ದೇವಿದೇವಸ್ಥಾನ ಸೇರಿದ೦ತೆ ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಗೆ ಬಿರುಸಿನ ಸಿದ್ದತೆ........ಕಳಚಿ ಹೋಯಿತು ಉದುಪಿ ತೆ೦ಕಪೇಟೆಯ ವಾರ್ಡಿನ ಬಿಜೆಪಿಯ ಜಿ.ಎಸ್.ಜಿ ಸಮಾಜದ ನಗರ ಸಭೆಯ ಸದಸ್ಯತ್ವ ಸ್ಥಾನಮಾನ. ಬ್ರಾಹ್ಮಣ ಸಮಾಜದ ತೆಕ್ಕೆಗೆ. ಮಧುಕರ್ ಮುದ್ರಾಡಿ ಮು೦ದಿನ ನಗರ ಸಭೆಯ ಚುನಾಣೆಯ ಬಿ.ಜೆ.ಪಿ ಪಕ್ಷದ ಅಭ್ಯರ್ಥಿ...

ಚಿತ್ರದುರ್ಗ: ಚಲಿಸುತ್ತಿದ್ದ ಲಾರಿಯ ಟೈರ್ ಬ್ಲಾಸ್ಟ್, ಕಾರು ಡಿಕ್ಕಿ: ಭೀಕರ ಅಪಘಾತದಲ್ಲಿ ಮೂವರು ದುರ್ಮರಣ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೆಆರ್ ಹಳ್ಳಿ ಗೇಟ್ ಬಳಿ ಮಂಗಳವಾರ ಚಲಿಸುತ್ತಿದ್ದ ಲಾರಿಯ ಟೈರ್ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಗಿದ್ದು, ಹಿಂದೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಮೃತರನ್ನು ಕುಷ್ಟಗಿ ಮೂಲದ ಶಶಿಧರ್(22), ಮಂಜುನಾಥ್ (22) ಹಾಗೂ ಬಸವರಾಜ್(21) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಇತರ ಇಬ್ಬರು ಗಾಯಗೊಂಡಿದ್ದು, ಅವರನ್ನು ಹಿರಿಯೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮುಂದೆ ಚಲಿಸುತ್ತಿದ್ದ ಲಾರಿ ಟೈರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಪರಿಣಾಮ ಲಾರಿ ಚಾಲಕನ ನಿಯಂತ್ರಣ ತಪ್ಪಿ ಎಡಕ್ಕೆ ತಿರುಗಿದೆ. ಈ ವೇಳೆ ಹಿಂದೆ ಸಾಗುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರು ಲಾರಿಗೆ ಡಿಕ್ಕಿಯಾಗಿ ದುರಂತ ಸಂಭವಿಸಿದೆ.

ಈ ಸಂಬಂಧ ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment