....ನಾಡಿನ ಎಲ್ಲೆಡೆಯಲ್ಲಿ ಇ೦ದಿನಿ೦ದ (ಭಾನುವಾರದಿ೦ದ)ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ...16ರ೦ದು ಶ್ರೀಶಾರದಾ ಪೂಜೆ...

ಬೈಕ್ ಸವಾರರೇ ಹುಷಾರ್, ಇನ್ಮುಂದೆ ಹಾಫ್ ಹೆಲ್ಮೆಟ್ ಬಳಸುವಂತಿಲ್ಲ! ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

ಬೆಂಗಳೂರು: ಬೈಕ್ ಸವಾರರೇ ಹುಷಾರ್, ಇನ್ಮುಂದೆ ರಾಜ್ಯದಲ್ಲಿ ಹಾಫ್ ಹೆಲ್ಮೆಟ್ ಬಳಸುವಂತಿಲ್ಲ. ಸುರಕ್ಷಿತವಲ್ಲದ ಅರ್ಧ ಹೆಲ್ಮೆಟ್ ಬಳಕೆಯನ್ನು ರಾಜ್ಯ ಸರ್ಕಾರ ನಿಷೇಧಿಸಿದೆ.

ಅಸುರಕ್ಷಿತ ಅರ್ಧ ಹೆಲ್ಮೆಟ್ ಉತ್ಪಾದನೆ ಮತ್ತು ತಯಾರಿಕೆಯನ್ನು ನಿಷೇಧಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ ಅಂತಾ ಸಾರಿಗೆ‌ ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದ್ದಾರೆ.

ವಿಕಾಸಸೌಧದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಸಾರಿಗೆ ಸಚಿವ ಬೈರತಿ ಸುರೇಶ್ ನೇತೃತ್ವದಲ್ಲಿ ನಡೆದ ರಸ್ತೆ ಸುರಕ್ಷತೆ, ಟ್ರಾಫಿಕ್ ನಿಯಮಗಳ ಉಲ್ಲಂಘನೆ ವಿಚಾರ ಕುರಿತ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇನ್ನೂ ಕೇವಲ ಸವಾರರ ಮೇಲೆ ಮಾತ್ರ ಅಲ್ಲದೇ, ತಯಾರಿಕ ಕಂಪನಿಗಳ ಮೇಲೂ ಕ್ರಮಕ್ಕೆ ಸರ್ಕಾರ ಮುಂದಾಗಿದೆ.

ಸಂಚಾರಿ ನಿಯಮದಡಿ ಹಾಫ್ ಹೆಲ್ಮೆಟ್ ಧರಿಸಿ ಸಂಚರಿಸುವ ಅವಕಾಶ ಇಲ್ಲದಿದ್ದರೂ, ಅವುಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದು, ಬಹುತೇಕರು ಈ ಹೆಲ್ಮೆಟ್ ಗಳನ್ನು ನಿಯಮಗಳಿಂದ ತಪ್ಪಿಸಿಕೊಳ್ಳಲು ಮಾತ್ರ ಬಳಕೆ ಮಾಡುತ್ತಿದ್ದಾರೆ.

ಇದು ನಿಯಮ ಉಲ್ಲಂಘನೆ ಅನ್ನೋದು ಗೊತ್ತಿದ್ದು ಮಾರಾಟವಾಗುತ್ತಿದ್ದು, ಇದೇ ಕಾರಣಕ್ಕೆ ತಯಾರಿಕಾ ಕಂಪನಿಗಳ ವಿರುದ್ಧವೂ ಕ್ರಮಕ್ಕೆ ಸರ್ಕಾರ ಮುಂದಾಗಲಿದೆ. ಕಾನೂನು ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳೋದಾಗಿ ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

No Comments

Leave A Comment