..........ನಾಡಿನ ಎಲ್ಲೆಡೆಯಲ್ಲಿನ ದೇವಿದೇವಸ್ಥಾನ ಸೇರಿದ೦ತೆ ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಗೆ ಬಿರುಸಿನ ಸಿದ್ದತೆ........
ಮದುವೆಗೂ ಮುನ್ನವೇ ತಾಯಿಯಾಗಲು ಬಯಸಿದ್ದೆ, ಅದಕ್ಕೆ ಪೋಷಕರನ್ನೂ ಒಪ್ಪಿಸಿದ್ದೆ, ಆದ್ರೆ…: ನಟಿ ಸ್ವರಾ ಭಾಸ್ಕರ್
ಮುಂಬೈ: ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸದ್ದು ಮಾಡುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು ಈ ಬಾರಿ ತಮ್ಮ ತಾಯ್ತನದ ಬಗ್ಗೆ ಮಾತನಾಡಿದ್ದಾರೆ.
ನಟಿ ಸ್ವರಾ ಭಾಸ್ಕರ್ ಅವರು, ತಮ್ಮ ಜೀವನದ ಅತ್ಯಂತ ವೈಯಕ್ತಿಕ ಘಟ್ಟವೊಂದರ ಕುರಿತು ‘ರೈಸ್ ಅಂಡ್ ಫಾಲ್’ ಸೀಸನ್ 2ನಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
ಮದುವೆಗೂ ಮುನ್ನವೇ ನಾನು ಎರಡು ಬಾರಿ ಐವಿಎಫ್(IVF) ಮೂಲಕ ಮಗು ಪಡೆದುಕೊಳ್ಳಲು ಬಯಸಿದ್ದೆ, ಇದಕ್ಕೆ ನನ್ನ ಪೋಷಕರನ್ನೂ ಒಪ್ಪಿಸಿದ್ದೆ ಈ ಪ್ರಕ್ರಿಯೆಯಲ್ಲಿ ತಮಗೆ ಎದುರಾದ ಸವಾಲುಗಳ ಬಗ್ಗೆಯೂ ಅವರು ವಿವರಿಸಿದ್ದಾರೆ.
ನನಗೆ ಮದುವೆಯಾಗುತ್ತದೆ ಎನ್ನುವ ನಂಬಿಕೆ ಇರಲಿಲ್ಲ. ಹೀಗಾಗಿ ಎರಡು ಬಾರಿ ಐವಿಎಫ್‌ಗೂ ಒಳಗಾಗಿ, ಮಗು ಪಡೆಯಬೇಕೆಂದು ಪ್ರಯತ್ನಿಸಿದ್ದೆ. ಅದಕ್ಕೆ ನನ್ನ ಪೋಷಕರನ್ನೂ ಒಪ್ಪಿಸಿದ್ದೆ. ಅವರೂ ನನ್ನ ನಿರ್ಧಾರವನ್ನು ಬೆಂಬಲಿಸಿದ್ದರು. ಅಲ್ಲದೆ ಮಗುವನ್ನು ಬೆಳೆಸುವುದೆಂದರೆ ಸವಾಲುಗಳು ಇರುತ್ತವೆ ಎಂದೂ ಎಚ್ಚರಿಸಿದ್ದರು. ನನಗೂ ಒಂದು ಕುಟುಂಬ, ಮಗು ಇರಬೇಕು ಎಂದುಕೊಳ್ಳುತ್ತಿದ್ದೆ. ಆದರೆ ಅದು ಫಲಿಸಲಿಲ್ಲ’ ಎಂದಿದ್ದಾರೆ.
ಫಹಾದ್ ಅಹಮದ್ ಜತೆ ಪ್ರೀತಿ
ರಾಜಕೀಯ ಕಾರ್ಯಕರ್ತ ಫಹಾದ ಅಹಮದ್ ಜತೆಗೆ ಸ್ವರಾ ಅವರಿಗೆ ಪ್ರೀತಿಯಾಗಿತ್ತು. ಈ ಜೋಡಿ 2023ರ ಫೆ.16ರಂದು ಮದುವೆಯಾಗಿತ್ತು. ಮದುವೆಯ ಇತರ ಕಾರ್ಯಕ್ರಮ, ಸಂಭ್ರಮ ಮುಗಿದು ಒಂದು ತಿಂಗಳ ನಂತರ ಮದುವೆಯ ಬಗ್ಗೆ ಸ್ವರಾ ಬಹಿರಂಗಪಡಿಸಿದ್ದರು. ಈ ಜೊಡಿ 2023ರ ಸೆ.23ರಂದು ಮೊದಲ ಮಗುವನ್ನು ಬರಮಾಡಿಕೊಂಡಿದೆ. ಮಗಳಿಗೆ ರಾಬಿಯಾ ರಾಮ ಅಹಮದ್ ಎಂದು ಹೆಸರಿಟ್ಟಿದ್ದಾರೆ.