ಬೆಂಗಳೂರಿನಲ್ಲಿ ವರುಣಾರ್ಭಟ: ಹಲವು ಕಡೆ 1 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ; ಸಂಚಾರ ಅಸ್ತವ್ಯಸ್ತ...ಅ. 15ರಿಂದ UPI ಪಾವತಿಗೆ ಶುಲ್ಕ ಜಾರಿ: 2,000ಕ್ಕಿಂತ ಹೆಚ್ಚಿನ UPI ಪಾವತಿಗಳಿಗೆ ಶೇ. 0.4ರಷ್ಟು MDR ಶುಲ್ಕ!...
‘ಪ್ಲೀಸ್ ಬಿಟ್ ಬಿಡಿ’; ಒಡಿಶಾದಲ್ಲೂ ಶಾಕಿಂಗ್ ಘಟನೆ, ಬೈಕ್ ನಲ್ಲಿ ತೆರಳುತ್ತಿದ್ದ ಜೋಡಿಗೆ ಹಲ್ಲೆ-ಕಿರುಕುಳ,
ಧೇಂಕನಾಲ್: ಬಿಹಾರದ ಜಮುಯಿಯಲ್ಲಿ ಅಪ್ರಾಪ್ತ ಬಾಲಕ ಮತ್ತು ಬಾಲಕಿಗೆ ಕಿರುಕುಳ ನೀಡಿದ ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಒಡಿಶಾದಲ್ಲೂ ಅಂತಹುದೇ ಘಟನೆ ವರದಿಯಾಗಿದೆ.
ಒಡಿಶಾದ ಧೇಂಕನಾಲ್ ಜಿಲ್ಲೆಯಲ್ಲಿ ಯುವ ಜೋಡಿಯೊಂದಕ್ಕೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ಹಾಗೂ ಕಿರುಕುಳ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಧೇಂಕನಾಲ್ ಜಿಲ್ಲೆಯ ಜನಪ್ರಿಯ ಪ್ರವಾಸಿ ತಾಣವಾದ ಕಪಿಲಾಶ್‌ಗೆ ತೆರಳುವ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಯುವಕ ಮತ್ತು ಯುವತಿ ಬೈಕ್‌ನಲ್ಲಿ ಅಲ್ಲಿಗೆ ತೆರಳುತ್ತಿದ್ದ ವೇಳೆ ಕೆಲವರು ಅವರನ್ನು ತಡೆದು ಕಿರುಕುಳ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಹಲವು ಮಂದಿ ಜೋಡಿಯನ್ನು ಸುತ್ತುವರಿದಿರುವುದು ಕಾಣಿಸುತ್ತದೆ. ಯುವಕನ ಮೇಲೆ ಕೆಲವರು ಹಲ್ಲೆ ನಡೆಸುತ್ತಿರುವುದು ಕಂಡುಬಂದಿದ್ದು, ಅಲ್ಲಿದ್ದ ಕೆಲವರು ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಲಾಗಿದೆ.
ಪ್ಲೀಸ್ ಬಿಟ್ಟುಬಿಡಿ ಎಂದು ಗೋಗರೆದ ಯುವತಿ
ತಮ್ಮನ್ನು ಬಿಟ್ಟುಬಿಡುವಂತೆ ಯುವತಿ ಸುತ್ತಲಿದ್ದವರ ಬಳಿ ಪದೇಪದೇ ಮನವಿ ಮಾಡುತ್ತಿರುವುದು ವಿಡಿಯೋದಲ್ಲಿ ಕೇಳಿಸುತ್ತದೆ. ಆದರೆ, ಆಕೆಯ ಮನವಿಯ ನಡುವೆಯೂ ಹಲ್ಲೆ ಮತ್ತು ಕಿರುಕುಳ ಮುಂದುವರಿದಿರುವಂತೆ ಕಂಡುಬರುತ್ತದೆ.
ಗುಂಪು ಜೋಡಿಯನ್ನು ಏಕೆ ತಡೆದಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಘಟನೆಯಲ್ಲಿ ಭಾಗಿಯಾಗಿರುವವರು ಜೋಡಿಗೆ ಪರಿಚಿತರೇ ಅಥವಾ ಅಲ್ಲವೇ, ಅಥವಾ ವಿಡಿಯೋ ಚಿತ್ರೀಕರಣಕ್ಕೂ ಮುನ್ನ ಅವರ ನಡುವೆ ಯಾವುದಾದರೂ ಮಾತಿನ ಚಕಮಕಿ ಅಥವಾ ವಿವಾದ ನಡೆದಿತ್ತೇ ಎಂಬುದೂ ಇನ್ನೂ ಖಚಿತವಾಗಿಲ್ಲ.
ಆರೋಪಿಗಳ ವಿರುದ್ಧ ಕಠಿಣ ಕ್ರಮ ಎಂದು ಪೊಲೀಸರು
ಘಟನೆ ಕುರಿತು ಗೋಂಡಿಯಾ ಬ್ಲಾಕ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಇನ್‌ಚಾರ್ಜ್ (IIC) ಪ್ರತಾಪ್ ದಲೇಯಿ ಅವರು ಪ್ರತಿಕ್ರಿಯಿಸಿದ್ದು, ಘಟನೆಯಲ್ಲಿ ಭಾಗಿಯಾಗಿರುವ ಕೆಲವರ ಗುರುತು ಪತ್ತೆಯಾಗಿದೆ. ತನಿಖೆಯ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಘಟನೆ ಬಿಹಾರದ ಜಮುಯಿಯಲ್ಲಿ ಅಪ್ರಾಪ್ತ ಬಾಲಕ ಮತ್ತು ಬಾಲಕಿಗೆ ಕಿರುಕುಳ ನೀಡಿದ ಆರೋಪದ ಘಟನೆ ನಡೆದ ಕೆಲವೇ ದಿನಗಳ ಬಳಿಕ ಬೆಳಕಿಗೆ ಬಂದಿದೆ.