..........ನಾಡಿನ ಎಲ್ಲೆಡೆಯಲ್ಲಿನ ದೇವಿದೇವಸ್ಥಾನ ಸೇರಿದ೦ತೆ ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಗೆ ಬಿರುಸಿನ ಸಿದ್ದತೆ........

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೆಳ್ಕಳೆ ಇದರ ರಥದ ಕೊಟ್ಟಿಗೆಗೆ ಅದ್ದೂರಿಯ ಶಿಲಾನ್ಯಾಸ

ಉಡುಪಿ ಸಮೀಪದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ದೇವಳದ ಅರ್ಚಕರಾದ ಶ್ರೀಧರ್ ಭಟ್ ಅವರ ನೇತೃತ್ವದಲ್ಲಿ ನಡೆದ ನೂತನ ರಥಾಲಯ (ರಥದ ಕೊಟ್ಟಿಗೆ) ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವು ಭಕ್ತಿಭಾವ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಯಶಸ್ವಿಯಾಗಿ ನೆರವೇರಿತು.

ಈ ಶುಭ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ, ಮೊಕ್ತೇಸರರಾದ ಐತು ಎಂ. ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರು ಹಾಗೂ ರಥಾಲಯದ ದಾನಿಗಳಾದ ಟಿ. ಶಂಬು ಶೆಟ್ಟಿ, ಭಕ್ತವೃಂದದ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಹಾಗೂ ಪ್ರಮುಖರಾದ ಅವಿರಾಜ್ ಶೆಟ್ಟಿ, ಬೆಳ್ಕಳೆ ಹರ್ಷ ಭಟ್, ಸುಂದರ ಶೆಟ್ಟಿ, ಅಜಿತ್ ಶೆಟ್ಟಿ, ಉಮೇಶ್ ಶೆಟ್ಟಿ, ಪ್ರಭಾಕರ ಅಂಚನ್, ಶ್ರೀಮತಿ ಅನುಷಾ ಆಚಾರ್ಯ, ಕೃಷ್ಣರಾಜ್ ಭಾದ್ಯ, ರಮೇಶ್ ಆಚಾರ್ಯ ಸೇರಿದಂತೆ ಗ್ರಾಮಸ್ಥರು ಹಾಗೂ ಅನೇಕ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

 

No Comments

Leave A Comment