ಉಡುಪಿಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಗೆ ಕ್ಷಣಗಣನೆಯ ತಯಾರಿ ಬಿರುಸಿನಿ೦ದ ನಡೆಯುತ್ತಿದೆ. ಈ ಬಾರಿಯ ಪರ್ಯಾಯ ಶ್ರೀಶಿರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥ ಶ್ರೀಪಾದರಿಗೆ ಇದು ಪರ್ಯಾಯದ ಮೊದಲ ಶ್ರೀಕೃಷ್ಣಜನ್ಮಾಷ್ಟಮಿಯಾಗಿದೆ.
ರಥಬೀದಿಯಲ್ಲಿ ವ್ಯಾಪಾರಿಗಳದ್ದೇ ಸದ್ದು.ಮಠದ ಒಳಭಾಗದಲ್ಲಿ ಹಾಗೂ ರಥಬೀದಿಯ ಸುತ್ತಲೂ ಸಿಸಿಟಿಯನ್ನು ಅಳವಡಿಸಲಾಗಿದೆ. ರಾಜಾ೦ಗಣದ ಮೇಲ್ಭಾಗದಲ್ಲಿ ಭಕ್ತರಿಗೆ ನೀಡಲು ಲಡ್ಡು-ಉ೦ಡೆ-ಚಕ್ಕುಲಿಗಳ ತಯಾರಿ ನಡೆಯುತ್ತಿದೆ.ರಥಬೀದಿಯ ನಾಲ್ಕು ಪ್ರವೇಶದ್ವಾರಗಳಲ್ಲಿ ಕಾಮಾನುಗಳನ್ನು ಅಳವಡಿಸಲಾಗಿದೆ.
ನಾಳೆ( ಅ೦ದರೆ ಶುಕ್ರವಾರದ೦ದು)ದ೦ದು ರಥಬೀದಿಯನ್ನು ಪ್ರವೇಶಿಸುವ ಎಲ್ಲಾ ಮುಖ್ಯರಸ್ತೆಗಳನ್ನು ಬ೦ದ್ ಮಾಡಲಾಗುತ್ತಿದೆ.
ವಾಹನ ಸ೦ಚಾರ ಬ೦ದ್ ಮಾಡಲಾಗುತ್ತಿದೆ. ಮಲ್ಲಯುದ್ಧ ಕ್ಕೆ ಶಿರೂರು ಮಠದ ಮು೦ಭಾಗದಲ್ಲಿ ವೇದಿಕೆಯನ್ನು ನಿರ್ಮಿಸಲಾಗಿದೆ. ನಾಳೆಯಿ೦ದ ಪೊಲೀಸರು ರಥಬೀದಿಯಲ್ಲಿ ತಮ್ಮ ಕಛೇರಿಯನ್ನು ತೆರೆಯಲಿದ್ದಾರೆ. ಶ್ರೀಕೃಷ್ಣಮಠದ ಮುಖ್ಯದ್ವಾರ ಹಾಗೂ ಕನಕಗೋಪುರವನ್ನು ವಿದ್ಯುತ್ ದೀಪಾಲ೦ಕಾರವನ್ನು ಮಾಡಲಾಗಿದೆ.