..........ನಾಡಿನ ಎಲ್ಲೆಡೆಯಲ್ಲಿನ ದೇವಿದೇವಸ್ಥಾನ ಸೇರಿದ೦ತೆ ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಗೆ ಬಿರುಸಿನ ಸಿದ್ದತೆ........ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪ್ರಸಕ್ತ ವರ್ಷ125ನೇ ವರ್ಷದ ಸಂಭ್ರಮಾಚರಣೆಗೆ ಕರಸೇವೆಯ ಮೂಲಕ ಗಾಂಧಿ ಜಯಂತಿ ಆಚರಣೆಯೊಂದಿಗೆ ಶುಕ್ರವಾರ ಚಾಲನೆ ನೀಡಲಾಯಿತು....

ಕಡಿಯಾಳಿ ಮಾತೃ ಮಂಡಳಿಯ ಆಶ್ರಯದಲ್ಲಿ 42 ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವೃತದ ಪೂಜೆ

ಉಡುಪಿ:ಅ 21 ; ಕಡಿಯಾಳಿ ಮಾತೃ ಮಂಡಳಿಯ ವತಿಯಿಂದ 42 ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವೃತ ಪೂಜಾ ಕಾರ್ಯಕ್ರಮ ವೇದ ಮೂರ್ತಿ ಪಾಡಿಗಾರ ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ ಶುಕ್ರವಾರ ಶ್ರೀ ಮಹಿಷಾಮರ್ದಿನಿ ದೇವರ ಸನ್ನಿಧಿಯಲ್ಲಿನ ಶ್ರೀಕಾತ್ಯಾಯನಿ ಮಂಟಪದಲ್ಲಿ ಜರಗಿತು .

ಶ್ರೀದೇವಿಯ ಸನ್ನಿಧಿಯಲ್ಲಿ  ಸಾಮೂಹಿಕ ಪ್ರಾರ್ಥನೆ , ಕಳಸ ಪ್ರತಿಷ್ಠಾಪನೆ , ಸಮೂಹಿಕ ಕುಂಕುಮ ಅರ್ಚನೆ , ಮಂಡಲ ಪೂಜೆ , ಮಹಾಮಂಗಳಾರತಿ ,ದೋರ ಗ್ರಂಥಿ ಸಹಿತ ಪ್ರಸಾದ ವಿತರಣೆ ನೆಡೆಯಿತು , ಧಾರ್ಮಿಕ ಪೂಜಾ ವಿಧಾನಗಳನ್ನು ಶ್ರೀಶ ಭಟ್ ಎಲ್ಲೂರ ಅರ್ಚಕ ವೃಂದದವರು ನಡೆಸಿಕೊಟ್ಟರು.

ಧಾರ್ಮಿಕ ಸಭಾ ಕಾರ್ಯದ ಮುಖ್ಯ ಅತಿಥಿಯಾಗಿ ನ್ಯಾಯವಾದಿ ಸುಪ್ರಸಾದ ಶೆಟ್ಟಿ , ಶೋಭಾ ಭಂಡಾರ್ಕರ್ , ಡಾ ಉಷಾ ಹೆಬ್ಬಾರ್ , ಮಾತೃ ಮಂಡಳಿಯ ಸ್ಥಾಪಕರಾದ ಸುಪ್ರಭಾ ಆಚಾರ್ಯ , ಅಧ್ಯಕ್ಷೆ ಪದ್ಮಾ ರತ್ನಾಕರ್ ,ಭಾರತಿ ಇಂದು ಶೇಖರ್ ಸ್ವಾಗತಿಸಿದರು , ಮಾತೃ ಮಂಡಳಿಯ ಸದಸ್ಯರು , 500 ರಕ್ಕೊ ಹೆಚ್ಚು ಸುಮಂಗಳೆಯರು ಉಪಸ್ಥಿತರಿದ್ದರು.

No Comments

Leave A Comment