...ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 126ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಮ೦ಗಳವಾರದ೦ದು ದೀಪ ಪ್ರಜ್ವಲಿಸುವುದರೊ೦ದಿಗೆ ಅದ್ದೂರಿಯ ಚಾಲನೆ...

ಉಡುಪಿ ನಗರದಲ್ಲಿ ಪಾರ್ಕಿಂಗ್ ಸರಿಯಾದ ವ್ಯವಸ್ಥೆ ಇಲ್ಲದ ಇರುವ ಜಾಗಕ್ಕೆ ಲಾಡ್ಜಿಂಗ್ ಮತ್ತು ಹೋಟೆಲಿಗೆ ಅವಕಾಶ ನೀಡಿದ್ದು ಎಷ್ಟು ಸರಿ: ಸುರೇಶ್ ಶೆಟ್ಟಿ ಬನ್ನಂಜೆ ಪ್ರಶ್ನೆ

ಉಡುಪಿ: ಬಿಜೆಪಿಯ ನಾಯಕರುಗಳು ವಿಧಾನಸಭೆಯಲ್ಲಿ ಸಚಿವರಾದ ನಾಗೇಂದ್ರ ಅವರ ಬಗ್ಗೆ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ ಅವರದೇ ಪಕ್ಷದ ಕಳೆದ ಐದು ವರ್ಷಗಳಿಂದ ಆಡಳಿತದಲ್ಲಿ ಇದ್ದ.ಉಡುಪಿ ನಗರಸಭಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅನಧಿಕೃತ ಅವೈಜ್ಞಾನಿಕ ಕಟ್ಟಡಗಳಿಗೆ ಲೈಸೆನ್ಸ್ ಅನ್ನು ನೀಡಲು ಕಾರಣ.ಇದೇ ನಮ್ಮ ಉಡುಪಿಯ ಸಂಸದರು,ಶಾಸಕರು,ಹಾಗೂ ಉಡುಪಿ ನಗರಸಭೆಯ ಆಡಳಿತ ಅಂದರೆ ಬಿಜೆಪಿಯ ಅಧ್ಯಕ್ಷರು ಹಾಗೂ ನಗರಸಭಾ ಸದಸ್ಯರುಗಳು,ಉಡುಪಿಯ ಬನ್ನಂಜೆ. ಶಿರಬೀಡು ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಕ್ಕದಲ್ಲಿ 5 ಅಂತಸ್ತಿನ ಲಾಡ್ಜಿಂಗ್ ಪಾರ್ಟಿ ಹಾಲ್ ಮತ್ತು ಹೋಟೆಲ್ ರೆಸ್ಟೋರೆಂಟ್ (Ayyukt viuw.) ಉದ್ಘಾಟನೆ ಆಗಲು ಸಜ್ಜಾಗಿದೆ.

ನಗರಸಭೆಯ ಅಧಿವೇಶನದಲ್ಲಿ ಈ ಬಗ್ಗೆ ನಾನು ಪ್ರಶ್ನಿಸಿದ್ದು ಅದಕ್ಕೆ ಲಿಖಿತ ಹೇಳಿಕೆ ನೀಡಿ ಎಂದು ಹೇಳಿದ ಆಗಿನ ನಗರಸಭಾ ಅಧ್ಯಕ್ಷರು
ಮತ್ತು ಶಾಸಕರು. ನಾನು ನಗರಸಭಾ ಅಧ್ಯಕ್ಷರಿಗೆ ಲಿಖಿತ ಹೇಳಿಕೆಯನ್ನು ನೀಡಿ ಅದರ ಪ್ರತಿಯೊಂದು ಪಡಕೊಂಡಿದ್ದರು.ನನಗೆ ಯಾವುದೇ ಉತ್ತರವನ್ನು ನೀಡದೆ ಇದೀಗ ಅಲ್ಲಿ ಹೋಟೆಲ್ ಉದ್ಘಾಟನೆಗೆ ರೆಡಿಯಾಗಿದೆ. ಸ್ಥಳೀಯವಾಗಿ ಪಾರ್ಕಿಂಗ್ ಸಮಸ್ಯೆ ತುಂಬಾ ಇರುವುದರಿಂದ.ಈ ಬಗ್ಗೆ ನಾನು ನಗರಸಭೆ ಅಧಿವೇಶನದಲ್ಲಿ ಎಚ್ಚರಿಸಿದ್ದು. ಇದನ್ನು ಗಣನೆಗೆ ತೆಗೆದುಕೊಳ್ಳದೆ ಪರವಾನಿಗೆ ನೀಡಿರುತ್ತಾರೆ.

ಉಡುಪಿ ಬಿಜೆಪಿಯ ಸಂಸದರು.ಸ್ಥಳೀಯ ಶಾಸಕರು. ನಗರಸಭೆ ಆಡಳಿತ ಬಿಜೆಪಿಯ ವೈಫಲ್ಯ ಇದನ್ನು ನಮ್ಮ ರಾಜ್ಯದ ಬಿಜೆಪಿ ನಾಯಕರು ಮೊದಲು ತಿಳಿದುಕೊಳ್ಳಲಿ ತದನಂತರ ನಾಗೇಂದ್ರ ಅವರ ರಾಜೀನಾಮೆಯ ಬಗ್ಗೆ ಪ್ರತಿಭಟಿಸಲಿ.ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಹಾಗೂ ಉಡುಪಿ ನಗರಸಭೆ ನಾಮ ನಿರ್ದೇಶಕ ಸದಸ್ಯರಾದ ಸುರೇಶ್ ಶೆಟ್ಟಿ ಬನ್ನಂಜೆ ಒತ್ತಾಯಿಸಿದ್ದಾರೆ.

No Comments

Leave A Comment