..........ನಾಡಿನ ಎಲ್ಲೆಡೆಯಲ್ಲಿನ ದೇವಿದೇವಸ್ಥಾನ ಸೇರಿದ೦ತೆ ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಗೆ ಬಿರುಸಿನ ಸಿದ್ದತೆ........

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 126ನೇ ಭಜನಾ ಸಪ್ತಾಹ ಮಹೋತ್ಸವದ ದೀಪ ಪ್ರಜ್ವಲನೆಯೊ೦ದಿಗೆ ಅದ್ದೂರಿಯ ಚಾಲನೆ—(1st day 163pic)

 

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 126ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಮ೦ಗಳವಾರದ೦ದ ದೇವತಾ ಪ್ರಾರ್ಥನೆಯೊ೦ದಿಗೆ ದೇವಳದ ಅರ್ಚಕರಾದ ದಯಾಘನ್ ಭಟ್ ರವರು ದೀಪ ಪ್ರಜ್ವಲನೆಯನ್ನು ಮಾಡುವುದರೊ೦ದಿಗೆ ಅದ್ದೂರಿಯ ಚಾಲನೆಯನ್ನು ನೀಡಿದರು.

ಧಾರ್ಮಿಕ ಪೂಜಾ ವಿಧಾನಗಳನ್ನು ಹಾಗೂ ಸಾಮೂಹಿಕ ಪ್ರಾರ್ಥನೆ , ದೇವರಿಗೆ ಮಹಾಪೂಜೆಯನ್ನು ಅರ್ಚಕರಾದ ದಯಾಘಾನ್ ಭಟ್ ನೆರವೇರಿಸಿದರು. ವಿನಾಯಕ ಭಟ್ , ದೀಪಕ್ ಭಟ್ , ಗಿರೀಶ್ ಭಟ್ ಸಹಕರಿಸಿದರು. ಶ್ರೀ ದೇವರಿಗೆ ವಿಶೇಷ ಅಲಂಕಾರ , ನೂರಾರು ಭಕ್ತರೂ ಭಕ್ತಿಯಿಂದ ಜೈ ವಿಠಲ್ ಹರಿ ವಿಠಲ್ ನಾಮ ಸ್ಮರಣೆ ಹಾಡುತ್ತ ಭಜನಾ ಸೇವೆ ಯಲ್ಲಿ ಪಾಲ್ಗೊಂಡರು. ಆಡಳಿತ ಮಂಡಳಿಯ ಸದಸ್ಯರಾದ ಪ್ರಭಾಕರ್ ಭಟ್. ಅಶೋಕ್ ಬಾಳಿಗಾ , ಕೈಲಾಸನಾಥ ಶೆಣೈ , ಉಡುಪಿ ಆಭರಣ ಸಂಸ್ಥೆಯ ಸುಭಾಸ್ ಕಾಮತ್ , ಪ್ರಕಾಶ್ ಭಕ್ತ , ಡಾ. ವಿನಾಯಕ ಶೆಣೈ , ನಾರಾಯಣ ಪ್ರಭು , ವಸಂತ್ ಕಿಣಿ , ಮಹೇಶ್ ಶೆಣೈ , ವೆಂಕಟೇಶ್ ಭಟ್ , ಶಾಂತಾರಾಮ್ ಪೈ , ಭಜನಾ ಮೊಹೋತ್ಸವದ ಅಧ್ಯಕ್ಷ ಮಟ್ಟಾರ್ ಸತೀಶ್ ಕಿಣಿ , ಭಾಸ್ಕರ ಶೆಣೈ , ಪಾಂಡುರಂಗ ಪೈ , ಹರಿರಾಮ್ ಶೆಣೈ , ಗಣೇಶ್ ಕಿಣಿ ,  ವಿಶಾಲ್ ಶೆಣೈ,  ವಿಶ್ವನಾಥ್ ಭಟ್ ,  ಪಿ ವಿ ಶೆಣೈ ಹಾಗೂ ದೇವಳದ ಆಡಳಿತ ಮಂಡಳಿ ಸದಸ್ಯರು , ಜಿ ಎಸ್ ಬಿ ಮಹಿಳಾ ಹಾಗೂ ಯುವಕ ಮಂಡಳಿ ಸದಸ್ಯರು , ಶ್ರಾವಣ ಶನಿವಾರ ಭಜನಾ ಮಂಡಳಿ , ಭಗಿನಿ ವೃಂದದ ಸದಸ್ಯರು ಹಾಗೂ ಭಜನಾ ಸಪ್ತಾಹ ಸಮಿತಿಯ ಸದಸ್ಯರು ಊರ ಪರ ಊರ ಭಜನಾ ಮಂಡಳಿ ಸದಸ್ಯರು ,  ನೂರಾರು ಸಮಾಜ ಭಾಂದವರು ಉಪಸ್ಥಿತರಿದ್ದರು.

 

No Comments

Leave A Comment