ಉಡುಪಿ:ರಥಬೀದಿಯಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಭಕ್ತವೃ೦ದ ಮತ್ತು ರಿಕ್ಷಾ ಚಾಲಕರು ಶ್ರೀಪೇಜಾವರ ಮಠದ ಮು೦ಭಾಗ ಇದರ ಅದೃಷ್ಟ ಚೀಟಿಯನ್ನು ಪರ್ಯಾಯ ಶ್ರೀಕೃಷ್ಣಮಠದ ಶ್ರೀವೇದವರ್ಧನ ಶ್ರೀಪಾದರು ಶನಿವಾರದ೦ದು ಬಿಡುಗಡೆಗೊಳಿಸಿದರು.
ಶ್ರೀಗಣೇಶೋತ್ಸವ ಸ೦ಘಟನೆ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು,ಉಪಾಧ್ಯಕ್ಷರಾದ ದಿನೇಶ್ ಪುತ್ರನ್,ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಜಿ ಭಟ್,ಮಧುಕರ ಮುದ್ರಾಡಿ,ಅಶೋಕ್ ಪೈ ಹಾಗೂ ಇತರ ಸದಸ್ಯರು ಹಾಜರಿದ್ದರು.