..........ನಾಡಿನ ಎಲ್ಲೆಡೆಯಲ್ಲಿನ ದೇವಿದೇವಸ್ಥಾನ ಸೇರಿದ೦ತೆ ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಗೆ ಬಿರುಸಿನ ಸಿದ್ದತೆ........
ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ: ಆರ್‌ಸಿಸಿ ಐಸಿರಿ ಸದಸ್ಯರಿಗೆ ಅಭಿನಂದನೆ
ಪರ್ಕಳ: ಉಡುಪಿ, ಶಿವಮೊಗ್ಗ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡ ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3182ರ 2025-26ನೇ ಸಾಲಿನ ಆರ್‌ಸಿಸಿ ಜಿಲ್ಲಾ ಸಮ್ಮೇಳನದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ರೋಟರಿ ಐಸಿರಿ ಪ್ರಾಯೋಜಿತ ಸಮುದಾಯದಳ ಐಸಿರಿಯ 50 ಸದಸ್ಯರನ್ನು ಆ.16ರಂದು ನಡೆದ ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.
ವಲಯ 4ರ ಸಹಾಯಕ ಗವರ್ನರ್ ರೊ. ಮೇಜರ್ ಡೋನರ್ ಹೇಮಂತ್ ಯು. ಕಾಂತ್ ಮಾತನಾಡಿ, ಆರ್‌ಸಿಸಿ ಐಸಿರಿ ಸದಸ್ಯರ ಒಗ್ಗಟ್ಟು, ಸಂಘಟನಾ ಸಾಮರ್ಥ್ಯ, ಕಾರ್ಯಕ್ರಮದ ಪ್ರಸ್ತುತಿ ಹಾಗೂ ಬಹುಮುಖ ಪ್ರತಿಭೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವುದು ತಂಡದ ಸಾಮೂಹಿಕ ಪ್ರಯತ್ನಕ್ಕೆ ದೊರೆತ ಗೌರವವಾಗಿದ್ದು, ಈ ಶ್ರೇಷ್ಠತೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಹಾರೈಸಿದರು. ಈ ಸಾಧನೆಯನ್ನು ಅಭಿನಂದಿಸಿ ತಮ್ಮ ವತಿಯಿಂದ ರೂ.10,000 ಕೊಡುಗೆ ನೀಡುವುದಾಗಿ ಅವರು ಘೋಷಿಸಿದರು.
ರೋಟರಿ ಐಸಿರಿ ಪರ್ಕಳ ಹಾಗೂ ಸಮುದಾಯದಳ ಐಸಿರಿಯ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.