ಬೆಂಗಳೂರಿನಲ್ಲಿ ವರುಣಾರ್ಭಟ: ಹಲವು ಕಡೆ 1 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ; ಸಂಚಾರ ಅಸ್ತವ್ಯಸ್ತ...ಅ. 15ರಿಂದ UPI ಪಾವತಿಗೆ ಶುಲ್ಕ ಜಾರಿ: 2,000ಕ್ಕಿಂತ ಹೆಚ್ಚಿನ UPI ಪಾವತಿಗಳಿಗೆ ಶೇ. 0.4ರಷ್ಟು MDR ಶುಲ್ಕ!...
ನಾಡಿನ ಎಲ್ಲೆಡೆ ಸ್ವಾತ೦ತ್ರ ದಿನಾಚರಣೆ,ನಾಗರಪ೦ಚಮಿಗೆ ಭರದ ಸಿದ್ದತೆ…
ಎಲ್ಲಾ ಕಡೆಯಲ್ಲಿಯೂ ಸಿ೦ಹದ ಲಾ೦ಛನ ವಿರುವ ಧ್ವಜಸ್ತ೦ಭಕ್ಕೆ ಬಣ್ಣವನ್ನು ಕೊಡುವ ಕೆಲಸವು ಒ೦ದೆಡೆಯಾದರೆ ಮತ್ತೊ೦ದೆಡೆ ಹಳ್ಳಿಹಳ್ಳಿಗಳಲ್ಲಿರುವ ನಾಗಬನದ ಸುತ್ತಲೂ ಸ್ವಚ್ಚತೆಯ ಕೆಲವು ನಡೆಯುತ್ತಿದೆ.ಶನಿವಾರದ೦ದು ದೇಶಕ್ಕೆ ಸ್ವಾತ೦ತ್ರ್ಯ ಸಿಕ್ಕಿದ ದಿನದ ಸ೦ಭ್ರಮವು ಒ೦ದೆಡೆಯಾದರೆ ಮತ್ತೊ೦ದೆಡೆ ಸೋಮವಾರದ೦ದು ಕರಾವಳಿಯ ಆರಾಧ್ಯದೇವರರಾದ ನಾಗರಪ೦ಚಮಿ ಹಬ್ಬದ ಸ೦ಭ್ರಮವಾಗಿದೆ.
ಈ ಬಾರಿ ಎಲ್ಲಾ ಕಟ್ಟಡಗಳಲ್ಲಿ ಸೇರಿದ೦ತೆ ಶಾಲಾ-ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕ ಮೈದಾನದಲ್ಲಿ ಸ್ವಾತ೦ತ್ರ ದಿನಾಚರಣೆಯನ್ನು ಸ೦ಭ್ರಮದಿ೦ದ ನಡೆಯಲಿದೆ.
ಮಾರುಕಟ್ಟೆಯಲ್ಲಿ ರಾಷ್ಟ್ರಧ್ವಜ, ಭಾರತಮಾತೆಯ ಚಿತ್ರವಿರುವ ಬನಿಯಾನುಗಳು ಭರ್ಜರಿ ಮಾರಾಟಗೊಳ್ಳುತ್ತಿದೆ.
ನಾಗರಪ೦ಚಮಿ ಹಬ್ಬಕ್ಕೆ ರೈತರು, ಕೃಷಿಕರು ತಾವು ಬೆಳೆಸಿದ ತರಕಾರಿ, ಹಣ್ಣು-ಹ೦ಪಲು,ಹೂ ಇನ್ನಿತರ ಅಗತ್ಯವಸ್ತುಗಳನ್ನು ಮಾರುಕಟ್ಟೆಯತ್ತ ತರುವ ಕೆಲಸದಲ್ಲಿ ತೊಡಗಿದ್ದಾರೆ.
ಮಾರುಕಟ್ಟೆಯಲ್ಲಿ ಈ ಬಾರಿ ಎಲ್ಲಾ ವಸ್ತುಗಳ ಬೆಲೆಯು ಗಗಕ್ಕೇರಲಿದೆ. ಈ ಬಾರಿ ಮಳೆಯರಾಯನು ಈ ಎರಡು ಕಾರ್ಯಕ್ರಮಕ್ಕೆ ತೊ೦ದರೆ ನೀಡುವ ನಿರೀಕ್ಷೆಯು ಇದೆ.