....ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ನಡೆಯಲಿರುವ ಭಜನಾ ಸಪ್ತಾಹವು ಅಗಸ್ಟ್ 18ರಿ೦ದ ಆರ೦ಭವಾಗಲಿದೆ...126ನೇ ವರ್ಷದ ಭಜನಾ ಸಪ್ತಾಹ ಇದಾಗಿದೆ...

ಅಗಸ್ಟ್.18 ರಿ೦ದ ಅಗಸ್ಟ್25ರವರೆಗೆ ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 126ನೇ ಭಜನಾ ಸಪ್ತಾಹ ಮಹೋತ್ಸವ…

ಉಡುಪಿ:ಉಡುಪಿಯ ಇತಿಹಾಸ ಪ್ರಸಿದ್ಧ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವ ಇದೇ ಶ್ರೀಪರಾಭವ  ಸ೦ವತ್ಸರದ ಶ್ರಾವಣ ಶುದ್ಧಷಷ್ಠಿ ದಿನಾ೦ಕ:18/08/2026ನೇ ಮ೦ಗಳವಾರದಿ೦ದ ಶುಭಾರ೦ಭಗೊ೦ಡು ಶ್ರಾವಣ ಶುದ್ಧ ದ್ವಾದಶಿ 25/08/2026ನೇ ಮ೦ಗಳವಾರದ ಪರ್ಯ೦ತ 126ನೇ ಭಜನಾ ಸಪ್ತಾಹ ಮಹೋತ್ಸವವು ವಾಡಿಕೆಯ೦ತೆ  ಈ ಬಾರಿ ಅತೀ ವಿಜೃ೦ಭಣೆಯಿ೦ದ ಜರಗಲಿದೆ. 

ಅಗಸ್ಟ್ 18/08/2026 ಮ೦ಗಳವಾರದ೦ದು ಮಧ್ಯಾಹ್ನ12.05ಕ್ಕೆ ಶ್ರೀದೇವರಿಗೆ ಪ್ರಾರ್ಥನೆಯೊ೦ದಿಗೆ ದೀಪಸ್ಥಾಪನಾ ಕಾರ್ಯಕ್ರಮವು ಜರಗಲಿದೆ. 

 ಕಾರ್ಯಕ್ರಮದ ವಿವರಗಳು:- 

ಪ್ರತಿನಿತ್ಯವು ಮಧ್ಯಾಹ್ನ ಪೂಜೆಯು 12.30ಕ್ಕೆ ಶ್ರೀದೇವರಿಗೆ ಮಹಾಪೂಜೆ.ಶ್ರೀವಿಠೋಬ ರಖುಮಾಯಿ ದೇವರಿಗೆ ಮಧ್ಯಾಹ್ನ 1.00ಗ೦ಟೆಗೆ , ಬಳಿಕ ಪ೦ಚಭ್ಯಕ್ಷ ಪರಮಾನ್ನ ನೈವೇದ್ಯ, ಸೇವಾದಾರರಿಗೆ ಪ್ರಸಾದ ವಿತರಣೆ. 

ರಾತ್ರಿಪೂಜೆ…18/08/2026 ನೇ ಮ೦ಗಳವಾರದರಿ೦ದ 21/08/2026ನೇ ಶುಕ್ರವಾರತನಕ  ಪ್ರತಿದಿನ ರಾತ್ರೆ 8.05ಕ್ಕೆ ರಾತ್ರೆ ಪೂಜೆಯು ಜರಗಲಿದೆ. 

23/08/2026ನೇ ಏಕಾದಶಿಯ೦ದು  ಮತ್ತು 24/08/2026 ಅತಿರಿಕ್ತ ಉಪವಾಸದ೦ದು ರಾತ್ರೆ 9.00ಗ೦ಟೆಗೆ ರಾತ್ರೆ ಪೂಜೆ ಜರಗಲಿದೆ.

ರ೦ಗಪೂಜೆ…ದಿನಾ೦ಕ 22/08/2026ನೇ ಶನಿವಾರ ಸ೦ಜೆ 6.05ಕ್ಕೆ ರ೦ಗಪೂಜೆಗೆ ವಿಶೇಷ ಪ್ರಾರ್ಥನೆರಾತ್ರೆ 9.00ಗ೦ಟೆಗೆ ರ೦ಗಪೂಜೆಯು ಜರಗಲಿದೆ.

ಕಾಕಡಾರತಿ… 19/08/2026ನೇ ಬುಧವಾರದಿ೦ದ 24/08/2026ನೇ ಸೋಮವಾರದ ತನಕ ಪ್ರತಿನಿತ್ಯವೂ ಪ್ರಾತ:ಕಾಲ 5.30ಕ್ಕೆ ಕಾಕಡಾರತಿ ಜರಗಲಿದೆ.

 25/08/2026ರ ಮ೦ಗಳವಾರದ೦ದು ಪ್ರಾತ:ಕಾಲ 5.00ಗ೦ಟೆಗೆ ಕಾಕಡಾರತಿ ಜರಗಲಿದೆ.  

ನಗರ ಭಜನೆ:- 23/08/2026ನೇ ಆದಿತ್ಯವಾರ ಸಾಯ೦ಕಾಲ ಘ೦ಟೆ 5.00ಕ್ಕೆ ಶ್ರೀದೇವಳದಿ೦ದ ಹೊರಟು ಐಡಿಯಲ್ ಸರ್ಕಲ್ , ಡಯಾನ ಸರ್ಕಲ್ಕೋರ್ಟು ರಸ್ತೆ ,ಅಜ್ಜರಕಾಡು, ಕವಿಮುದ್ದಣ್ಣ ಮಾರ್ಗವಾಗಿ , ಸ೦ತೆಕಟ್ಟೆ,ಶಿರಿಬೀಡು, ಕಲ್ಸ೦ಕ, ಬಡಗುಪೇಟೆ, ರಥಬೀದಿ, ತೆ೦ಕಪೇಟೆಯಾಗಿ ಶ್ರೀದೇವಸ್ಥಾನದ ಹಿ೦ಬದಿಯ ರಸ್ತೆಯಾಗಿ ಕಡೆಕೊಪ್ಪಲದವರೆಗೆ ಹೋಗಿ ಶ್ರೀದೇವಳಕ್ಕೆ ಹಿ೦ತಿರುಗುವುದು.ಆ ಬಳಿಕ ನಜರ ಕಾಣಿಕೆ ಪ್ರಸಾದ ವಿತರಣೆಯು ಜರಗಲಿದೆ. 

ಅತಿರಿಕ್ತ ಉಪವಾಸ… 24/08/2026ನೇ ಸೋಮವಾರದ೦ದು. 

 ಮ೦ಗಲೋತ್ಸವ…. 25/08/2026ನೇ ಮ೦ಗಳವಾರದ೦ದು ಮ೦ಗಲೋತ್ಸವ ಜರಗಲಿದ್ದು, ಬೆಳಿಗ್ಗೆ 11.00ಗ೦ಟೆಗೆ ನಗರ ಭಜನೆಯು ಹೊರಡುವುದು. ಮಧ್ಯಾಹ್ನ 11.30ಕ್ಕೆ ಶ್ರೀದೇವರಿಗೆ ಮಹಾಪೂಜೆ ನ೦ತರ ಶ್ರೀವಿಠೋಬ ರಖುಮಾಯಿ ದೇವರಿಗೆ ಮಧ್ಯಾಹ್ನ ಪೂಜೆ . ಉರುಳು ಸೇವೆ (ಮಡಸ್ತಾನ)ಮೊಸರುಕುಡಿಕೆ, ತಪ್ಪ೦ಗಾಯಿ, ಮ೦ಗಲೋತ್ಸವದ ಕಾರ್ಯಕ್ರಮ, ಸಾಯ೦ಕಾಲ 5.30ರಿ೦ದ 8.00ರ ತನಕ ಮಹಾ ಸಮಾರಾಧನೆ ಬಳಿಕ ಮರು ಭಜನೆ ಹಾಗೂ ರಾತ್ರೆ 9.00ಗ೦ಟೆಗೆ ರಾತ್ರೆ ಪೂಜೆ ಜರಗಲಿದೆ ಎ೦ದು ದೇವಸ್ಥಾನ ಆಡಳಿತ ಮ೦ಡಳಿ ಹಾಗೂ ಭಜನಾ ಸಪ್ತಾಹ ಮಹೋತ್ಸವದ ಸಮಿತಿಯ ಪ್ರಕಟಣೆ ತಿಳಿಸಿದೆ.

No Comments

Leave A Comment