....ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ನಡೆಯಲಿರುವ ಭಜನಾ ಸಪ್ತಾಹವು ಅಗಸ್ಟ್ 18ರಿ೦ದ ಆರ೦ಭವಾಗಲಿದೆ...126ನೇ ವರ್ಷದ ಭಜನಾ ಸಪ್ತಾಹ ಇದಾಗಿದೆ...

ಐಷಾರಾಮಿ ರೆಸ್ಟೋರೆಂಟ್ ಗಳ ಅಧ್ವಾನ: UB ಸಿಟಿ ಫೈವ್ ಸ್ಟಾರ್ ಹೋಟೆಲ್‌ಗಳ ಮೇಲೆ ದಾಳಿ; ಕೊಳೆತ ಗೋಮಾಂಸ ಪತ್ತೆ

ಬೆಂಗಳೂರು: ಸ್ಟಾರ್‌ ಹೋಟೆಲ್‌ಗ‌ಳ ಮೇಲಿನ ದಾಳಿಯನ್ನು ಮುಂದುವರಿಸಿರುವ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು, ದಾಳಿಯ ಮೂರನೇ ದಿನವಾದ ಭಾನುವಾರ ರಾತ್ರಿ ಕಾರ್ಯಾಚರಣೆಯಲ್ಲಿ ಒಟ್ಟಾರೆ 132 ಕೆ.ಜಿ. ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.

ಯುಬಿ ಸಿಟಿ, ಎಂಜಿ ರಸ್ತೆ, ಬ್ರಿಗೇಡ್‌ ರಸ್ತೆಗಳಲ್ಲಿರುವ ಪ್ರತಿಷ್ಠಿತ ಪಂಚತಾರ ಹೋಟೆಲ್‌ಗ‌ಳಲ್ಲಿ ಪರಿಶೀಲಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಒಟ್ಟಾರೆ 132 ಕೆ.ಜಿ. ಆಹಾರ ಪದಾರ್ಥ ಹಾಗೂ ಬಳಸಿದ ಅಡುಗೆ ಎಣ್ಣೆ 15 ಲೀಟರ್‌ ಜಪ್ತಿ ಮಾಡಲಾಗಿದೆ ಎಂದು ಇಲಾಖೆಯು ತಿಳಿಸಿದೆ. ಐದು ಹೋಟೆಲ್‌ಗಳ ಮೇಲೆ ನಡೆದ ಕಾರ್ಯಾಚರಣೆಯಲ್ಲಿ ಕೊಳೆತ ಮಾಂಸ, ಅವಧಿ ಮೀರಿದ ಆಹಾರ ಪದಾರ್ಥಗಳು ಸೇರಿದಂತೆ ಹಲವು ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಯುಬಿ ಸಿಟಿಯಲ್ಲಿರುವ ಐದು ಹೋಟೆಲ್‌ಗಳ ಮೇಲೆ ಸುಮಾರು 15 ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಸ್ಕೈ ಹೋಟೆಲ್, ರಾಯಲ್ ಚೈನ್, ಮದ್ರಾಸ್ ಕಿಚನ್, ಟೆಸ್ಕಾನ್ ಹೋಟೆಲ್ ಹಾಗೂ ಸೆಂಚೆಜ್ ಹೋಟೆಲ್‌ಗಳ ಅಡುಗೆಮನೆಗಳನ್ನು ಪರಿಶೀಲಿಸಲಾಗಿದೆ.

ಈ ವೇಳೆ 45 ಕೆ.ಜಿ. ಕೊಳೆತ ಕೋಳಿ ಮತ್ತು ದನದ ಮಾಂಸ, 15 ಲೀಟರ್ ಬಳಸಿದ ಅಡುಗೆ ಎಣ್ಣೆ ಹಾಗೂ 6 ಕೆ.ಜಿ. ವೆಜಿಟೇಬಲ್ ಕಟ್ಲೆಟ್ ಸೇರಿದಂತೆ ಒಟ್ಟು 51 ಕೆ.ಜಿ. ಆಹಾರ ಪದಾರ್ಥಗಳನ್ನು ಸ್ಕೈ ಹೋಟೆಲ್‌ನಲ್ಲಿ ವಶಕ್ಕೆ ಪಡೆಯಲಾಗಿದೆ. ಕೊಳೆತ ಮಾಂಸ ಮತ್ತು ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾದ ಹಿನ್ನೆಲೆಯಲ್ಲಿ ಹೋಟೆಲ್‌ನ ಅಡುಗೆಮನೆಗೆ ಅಧಿಕಾರಿಗಳು ಬೀಗ ಹಾಕಿ ಸೀಲ್ ಮಾಡಿದ್ದಾರೆ.

ಇನ್ನು ಯುಬಿ ಸಿಟಿಯ ರಾಯಲ್ ಚೈನ್ ಹೋಟೆಲ್‌ನಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, 50 ಕೆ.ಜಿ. ಬಾತುಕೋಳಿ ಮಾಂಸ ಹಾಗೂ 5 ಕೆ.ಜಿ. ಮೀನು ಸೇರಿದಂತೆ ಒಟ್ಟು 55 ಕೆ.ಜಿ. ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.

ಮದ್ರಾಸ್ ಕಿಚನ್‌ನಲ್ಲಿ 5 ಕೆ.ಜಿ. ಹಸಿ ಬಟಾಣಿ, ಟೆಸ್ಕಾನ್ ಹೋಟೆಲ್‌ನಲ್ಲಿ 5 ಕೆ.ಜಿ. ಅಣಬೆ ವಶಕ್ಕೆ ಪಡೆಯಲಾಗಿದೆ. ಸೆಂಚೆಜ್ ಹೋಟೆಲ್‌ನಲ್ಲಿ 3 ಕೆ.ಜಿ. ಮೀನು, 7 ಕೆ.ಜಿ. ಕೇಕ್, ಆಲೂಗಡ್ಡೆ ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲ್ಯಾಖೆಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತೆ ವಿಭಾಗದಿಂದ ಆರೋಗ್ಯ ಸಚಿವ ಯು.ಟಿ.ಖಾದರ್‌ಮಾರ್ಗದರ್ಶನದಲ್ಲಿ ಕಳೆದ 3 ದಿನಗಳಿಂದ ಬೆಂಗಳೂರಿನ 3-ಸ್ಟಾರ್‌ ಹಾಗೂ 5-ಸ್ಟಾರ್‌ ಹೋಟೆಲ್‌ಗ‌ಳಲ್ಲಿ ತಪಾಸಣೆ ನಡೆಸಲಾಗುತ್ತಿದೆ.

No Comments

Leave A Comment