ಟಿಬೆಟ್‌ನಲ್ಲಿ ಪ್ರಬಲ ಭೂಕಂಪ: ನೂರಾರು ಮನೆಗಳು ಧರಾಶಾಹಿ; ಕನಿಷ್ಟ 16 ಮಂದಿ ಸಾವು, 54ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ....ಅಕ್ಟೋಬರ್ 25ರವರೆಗೆ ಮಳೆ, ಗುಡುಗು ಮುಂದುವರಿಕೆ; ವಾರಾಂತ್ಯ ರಾಜ್ಯಾದ್ಯಂತ ಭಾರೀ ಮಳೆ; IMD...

ಬೆಂಗಳೂರಿನಲ್ಲಿ Miss Universe India 2026: ಸ್ವಿಮ್‌ಸೂಟ್ ಸುತ್ತಿನಲ್ಲಿ ಮಿಂಚಿದ 52 ಫೈನಲಿಸ್ಟ್‌ಗಳು

ಬೆಂಗಳೂರು: ಮಿಸ್ ಯೂನಿವರ್ಸ್ ಇಂಡಿಯಾ 2026 ಸ್ಪರ್ಧೆಯ ಸ್ವಿಮ್‌ಸೂಟ್ ಸುತ್ತು ಬುಧವಾರ ಬೆಂಗಳೂರಿನ ವಂಡರ್‌ಲಾದಲ್ಲಿ ಅದ್ದೂರಿಯಾಗಿ ನಡೆಯಿತು.

ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾಗಿರುವ 52 ಫೈನಲಿಸ್ಟ್‌ಗಳು ಪೂಲ್‌ಸೈಡ್ ರ್ಯಾಂಪ್‌ನಲ್ಲಿ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಿ ತೀರ್ಪುಗಾರರ ಗಮನ ಸೆಳೆದರು.

ಗ್ರ್ಯಾಂಡ್ ಫಿನಾಲೆಗೂ ಮುನ್ನ ಸ್ಪರ್ಧೆ ನಿರ್ಣಾಯಕ ಹಂತ ತಲುಪಿದ್ದು, ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳ ಮಾನದಂಡಗಳ ಆಧಾರದ ಮೇಲೆ ಸ್ಪರ್ಧಿಗಳ ಪ್ರದರ್ಶನವನ್ನು ಮೌಲ್ಯಮಾಪನ ಮಾಡಲಾಯಿತು.

ಸ್ವಿಮ್‌ಸೂಟ್ ಸುತ್ತು ಸ್ಪರ್ಧೆಯ ಪ್ರಮುಖ ಹಂತಗಳಲ್ಲಿ ಒಂದಾಗಿದ್ದು, ಸ್ಪರ್ಧಿಗಳ ಆತ್ಮವಿಶ್ವಾಸ, ವ್ಯಕ್ತಿತ್ವ, ವೇದಿಕೆ ಮೇಲಿನ ನಡಿಗೆ ಹಾಗೂ ಒಟ್ಟಾರೆ ಪ್ರಸ್ತುತಿಯನ್ನು ತೀರ್ಪುಗಾರರು ಸೂಕ್ಷ್ಮವಾಗಿ ಪರಿಶೀಲಿಸಿದರು.

ಈ ಬಾರಿ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದಿರುವ ಸ್ಪರ್ಧಿಗಳು ಭಾಗವಹಿಸಿದ್ದು, ಭಾರತದ ಸಾಂಸ್ಕೃತಿಕ ವೈವಿಧ್ಯತೆಯೂ ಕಾರ್ಯಕ್ರಮದಲ್ಲಿ ಪ್ರತಿಬಿಂಬಿತವಾಯಿತು.

ಇದಕ್ಕೂ ಮುನ್ನ ಸ್ಯಾಶಿಂಗ್ ಸಮಾರಂಭ, ಪರಿಚಯಾತ್ಮಕ ರ್ಯಾಂಪ್ ವಾಕ್, ಭಾಷಣ ಸುತ್ತು ಹಾಗೂ ಗಾಲಾ ಡಿನ್ನರ್ ಸೇರಿದಂತೆ ಹಲವು ಸುತ್ತುಗಳು ಯಶಸ್ವಿಯಾಗಿ ನಡೆದಿದ್ದವು.

ಗ್ರ್ಯಾಂಡ್ ಫಿನಾಲೆಗೂ ಮುನ್ನ ಇನ್ನೂ ಹಲವು ಮೌಲ್ಯಮಾಪನ ಸುತ್ತುಗಳು ನಡೆಯಲಿದ್ದು, ಬಳಿಕ ಎಲ್ಲ ಫೈನಲಿಸ್ಟ್‌ಗಳು ಆಗಸ್ಟ್ 23ರಂದು ಜೈಪುರದಲ್ಲಿ ನಡೆಯಲಿರುವ ಅಂತಿಮ ಸುತ್ತಿನಲ್ಲಿ ಭಾಗವಹಿಸಲಿದ್ದಾರೆ.

ಮಿಸ್ ಯೂನಿವರ್ಸ್ ಇಂಡಿಯಾ 2026 ಕಿರೀಟ ಗೆಲ್ಲುವ ಸ್ಪರ್ಧಿಗೆ ಭಾರತವನ್ನು ಪ್ರತಿನಿಧಿಸಿ ಅಂತಾರಾಷ್ಟ್ರೀಯ ಮಿಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಲಭಿಸಲಿದೆ.

No Comments

Leave A Comment