..........ನಾಡಿನ ಎಲ್ಲೆಡೆಯಲ್ಲಿನ ದೇವಿದೇವಸ್ಥಾನ ಸೇರಿದ೦ತೆ ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಗೆ ಬಿರುಸಿನ ಸಿದ್ದತೆ........

ಉಡುಪಿ ನಗರಸಭೆಯ ಸ್ಥಾಯಿಸಮಿತಿಯ ಮಾಜಿಧ್ಯಕ್ಷರಿಗೆ ಸ್ಕೂಟರ್ ಡಿಕ್ಕಿ

ಉಡುಪಿ: ದಿನಾಂಕ 26/07/2026 ರಂದು ಸಮಯ ಸುಮಾರು 12:00 ಗಂಟೆಗೆ ಉಡುಪಿ ತಾಲೂಕು 76 ನೇ ಬಡಗುಬೆಟ್ಟು ಗ್ರಾಮದ ಕಿನ್ನಿಮುಲ್ಕಿ ಶ್ರೀ ವೀರಭದ್ರ ಸಭಾ ಭವನ ಎದುರುಗಡೆ ಹಾದುಹೋಗಿರುವ ಉಡುಪಿ ಕಿನ್ನಿಮುಲ್ಕಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಆರೋಪಿ ಮೊಹಮ್ಮದ್‌ ಇರ್ಪಾನ್‌ ಎಂಬಾತನು KA19HR3284 ನೇ ಸ್ಕೂಟರಿನಲ್ಲಿ ಇನ್ನೊಬ್ಬ ಸಹಸವಾರರನ್ನು ಕುಳ್ಳಿರಿಸಿಕೊಂಡು ಉಡುಪಿ ಕಡೆಯಿಂದ ಕಿನ್ನಿಮುಲ್ಕಿ ಕಡೆಗೆ ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅದೇ ರಸ್ತೆಯನ್ನು ದಾಟುತ್ತಿದ್ದ ಶ್ರೀಶ ಕೊಡವೂರು ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಶ್ರೀಶ ಕೊಡವೂರು ರವರು ರಸ್ತೆಗೆ ಬಿದ್ದು, ಎಡಬದಿಯ ಸೊಂಟದ ಬಳಿ ಒಳಜಖಂ ಆಗಿದ್ದು, ಅಲ್ಲದೇ ಬೆನ್ನಿಗೆ ಹಾಗೂ ದೇಹದ ಇತರ ಭಾಗಗಳಿಗೆ ರಕ್ತಗಾಯವಾಗಿ ಚಿಕಿತ್ಸೆಯ ಬಗ್ಗೆ ಉಡುಪಿ ಡಾ.ಟಿ.ಎಂ.ಪೈ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.

ಈ ಬಗ್ಗೆ ಕೆ ಸುರೇಶ್‌ ಭಟ್‌ (58) ತಂದೆ: ದಿ. ಕೆ ರಾಮಕೃಷ್ಣ ಭಟ್‌ ವಾಸ: ಮನೆ ನಂಬ್ರ 20-36 ಮೂಡುಬೆಟ್ಟು ಕೋಡವೂರು ಗ್ರಾಮ ರವರು ದೂರು ನೀಡಿದ್ದು ಉಡುಪಿ ಸಂಚಾರ ಠಾಣೆ ಅಪರಾಧ ಕ್ರಮಾಂಕ: 54/2026 ಕಲಂ: 281,125(ಎ) ಬಿಎನ್‌ಎಸ್‌ ರಂತೆ ಪ್ರಕರಣ ದಾಖಲಾಗಿರುತ್ತದೆ.

No Comments

Leave A Comment