....ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ನಡೆಯಲಿರುವ ಭಜನಾ ಸಪ್ತಾಹವು ಅಗಸ್ಟ್ 18ರಿ೦ದ ಆರ೦ಭವಾಗಲಿದೆ...126ನೇ ವರ್ಷದ ಭಜನಾ ಸಪ್ತಾಹ ಇದಾಗಿದೆ...

ಮಂಗಳೂರು: ಹಸಿರು ಸೀರೆ ಹಾಕೊಂಡು ಆಫೀಸ್​​ಗೆ ಬಾ ಎಂದ ಅಧಿಕಾರಿ; ಮಹಿಳಾ ಸಿಬ್ಬಂದಿ ಹಿಂದೆ ಬಿದ್ದವನಿಗೆ ಚಳಿ ಬಿಡಿಸಿದ ಗ್ರೀನ್​ ಗ್ಯಾಂಗ್!

ಮಂಗಳೂರು: ಮಂಗಳೂರಿನ ಎಪಿಎಂಸಿ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಮಹಿಳೆ ಸಿಬ್ಬಂದಿಗೆ ಅಧಿಕಾರಿಯೊಬ್ಬರು ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.

ಗ್ರೂಪ್ ‘ಡಿ’ ಉದ್ಯೋಗಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಯೊಬ್ಬರಿಗೆ ಸೋಮವಾರ ಹಸಿರು ಸೀರೆ ಹಾಕೊಂಡು ಆಫೀಸ್​​ಗೆ ಬಾ ಎಂದಿದ್ದ ಅಧಿಕಾರಿಗೆ ಚಳಿ ಬಿಡಿಸಲು ಗ್ರೀನ್​ ಗ್ಯಾಂಗ್ ಎಂಟ್ರಿ ಕೊಟ್ಟಿದೆ. ಹಸಿರು ಸೀರೆಯುಟ್ಟು ಬಂದ ಹೆಣ್ಮಕ್ಕಳ ದಂಡು ನೋಡಿ ಅಧಿಕಾರಿ ಶಾಕ್ ಆಗಿದ್ದಾರೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಸಿಎಚ್ ಮೋಹನ್ ಅವರು ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ನೇತೃತ್ವದ ಮಹಿಳಾ ನಿಯೋಗ ಬೈಕಂಪಾಡಿಯಲ್ಲಿರುವ ಎಪಿಎಂಸಿ ಕಚೇರಿಗೆ ಇಂದು (ಸೋಮವಾರ) ದಾಳಿ ನಡೆಸಿ ತರಾಟೆಗೆ ತೆಗೆದುಕೊಂಡಿದೆ.

ಮೋಹನ್ ಅವರು ಮಹಿಳೆಗೆ ಹಸಿರು ಸೀರೆ ಹಾಕೊಂಡು ಬಾ ಎಂದು ಹೇಳಿದ್ದರು ಎನ್ನಲಾಗಿದೆ. ಈ ವಿಚಾರ ತಿಳಿದ ರಾಜ್ಯ ಹಿಂದುಳಿದ ವರ್ಗ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ನೇತೃತ್ವದಲ್ಲಿ, ಮಹಿಳೆಯರು ಗ್ರೀನ್​ ಸೀರೆಯುಟ್ಟು ಕಚೇರಿಗೆ ಎಂಟ್ರಿ ಕೊಟ್ಟಿದ್ದರು. ಈ ಗ್ರೀನ್​ ಗ್ಯಾಂಗ್ ಕಂಡು ಅಧಿಕಾರಿ ಶೇಕ್ ಆಗಿದ್ದು, ಮಾತಾಡಲು ಆಗದೆ ತಡವರಿಸಿದ್ದಾರೆ.

ಸಂತ್ರಸ್ತ ಮಹಿಳೆಯು ಕಳೆದ ಎರಡೂವರೆ ವರ್ಷಗಳಿಂದ ಎಪಿಎಂಸಿ ಕಚೇರಿಯಲ್ಲಿ ಗ್ರೂಪ್ ‘ಡಿ’ ನೌಕರರಾಗಿ ಕೆಲಸ ಮಾಡುತ್ತಿದ್ದು, ಇಬ್ಬರು ಮಕ್ಕಳನ್ನು ಹೊಂದಿರುವ ಪೋಷಕಿಯಾಗಿದ್ದಾರೆ. ಎಪಿಎಂಸಿ ಅಧಿಕಾರಿ ಸುದೀರ್ಘ ಅವಧಿಯಿಂದ ಮಹಿಳಾ ಸಿಬ್ಬಂದಿಗೆ ಮೈಕೈ ಮುಟ್ಟುವುದು, ಅಸಹ್ಯವಾಗಿ ವರ್ತಿಸುವುದು ಹಾಗೂ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಪ್ರತಿಭಾ ಕುಳಾಯಿ ಹೇಳಿದ್ದಾರೆ.

ಸಂತ್ರಸ್ತೆಯು ತಿಂಗಳಿಗೆ 15,000 ರೂಪಾಯಿ ಸಂಬಳಕ್ಕೆ ದುಡಿಯುತ್ತಿದ್ದು, ತನ್ನ ಬೇಡಿಕೆಗೆ ಸಮ್ಮತಿಸಿದರೆ ವೇತನವನ್ನು 25,000 ರೂಪಾಯಿಗೆ ಏರಿಸುವುದಾಗಿ ಆರೋಪಿ ಆಮಿಷ ಒಡ್ಡಿದ್ದರು. ಆತನ ಅಸಭ್ಯ ಬೇಡಿಕೆಗೆ ಒಪ್ಪದಿದ್ದಾಗ, ಕಚೇರಿಯ ಒಳಗಿನ ಕೆಲಸದಿಂದ ತೆಗೆದು ಶೌಚಾಲಯ ಶುಚಿಗೊಳಿಸುವ ಹಾಗೂ ಗುಡಿಸುವ ಕೆಲಸಕ್ಕೆ ಹಾಕಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಕಳೆದ ಶನಿವಾರ ಆರೋಪಿಯು ಸಂತ್ರಸ್ತೆಗೆ ಕರೆ ಮಾಡಿ, ತನ್ನೊಂದಿಗೆ ಸಹಕರಿಸಲು ಸಮ್ಮತಿ ಇದ್ದರೆ ಸೋಮವಾರ ಹಸಿರು ಬಣ್ಣದ ಸೀರೆ ಅಥವಾ ಉಡುಪು ಧರಿಸಿ ಬರಬೇಕು. ಹಸಿರು ಉಡುಪು ಧರಿಸಿದರೆ ಸಮ್ಮತಿ ಎಂದು ತಿಳಿಯುವುದಾಗಿ ಷರತ್ತು ವಿಧಿಸಿದ್ದನೆಂದು ಕುಳಾಯಿ ಆರೋಪಿಸಿದ್ದಾರೆ.

ಆರೋಪಿಯ ಈ ವರ್ತನೆಯ ವಿರುದ್ಧ ಪ್ರತಿಭಟಿಸುವ ಸಲುವಾಗಿ, ಸೋಮವಾರ ಪ್ರತಿಭಾ ಕುಳಾಯಿ ಹಾಗೂ ಹಲವು ಮಹಿಳಾ ಮುಖಂಡರು ಮುನ್ನೆಚ್ಚರಿಕೆಯಾಗಿ ಹಸಿರು ಬಣ್ಣದ ಸೀರೆ ಧರಿಸಿ ಎಪಿಎಂಸಿ ಕಚೇರಿಗೆ ಆಗಮಿಸಿದರು. ಕಚೇರಿಯಲ್ಲಿದ್ದ ಅಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

No Comments

Leave A Comment