.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........
ನೀಟ್ ಪ್ರತಿಭಟನೆ ಅ೦ತ್ಯ-ಇದೀಗ ಎಥೆನಾಲ್ ಮಿಶ್ರಿತ ಪೆಟ್ರೋಲ್ ಅನುಷ್ಠಾನವನ್ನು ವಿರೋಧಿಸಿ ಆಗಸ್ಟ್ 4ಕ್ಕೆ ಸಂಸತ್ತಿಗೆ ಪ್ರತಿಭಟನಾ ಮೆರವಣಿಗೆ-ಮು೦ದಿನ ತಲೆದ೦ಡ ನಿತೀನ್ ಗಡ್ಗರಿಯರದ್ದೇ?ಮೋದಿಜಿಗೆ ಮತ್ತೆ ತಲೆನೋವು…
ನವದೆಹಲಿ: ದೆಹಲಿ ಟ್ಯಾಕ್ಸಿ ಮತ್ತು ಟೂರಿಸ್ಟ್ ಟ್ರಾನ್ಸ್‌ಪೋರ್ಟರ್ಸ್ ಮತ್ತು ಟೂರ್ ಆಪರೇಟರ್ಸ್ ಅಸೋಸಿಯೇಷನ್ ಆಗಸ್ಟ್ 4 ರಂದು ಎಥೆನಾಲ್ ಮಿಶ್ರಿತ ಪೆಟ್ರೋಲ್ ಅನುಷ್ಠಾನವನ್ನು ವಿರೋಧಿಸಿ ಸಂಸತ್ತಿಗೆ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಘೋಷಿಸಿದೆ.
ಪ್ರಧಾನ ಮ೦ತ್ರಿ ನರೇ೦ದ್ರ ಮೋದಿಯವರ ಸರಕಾರದ ಮ೦ತ್ರಿಮ೦ಡಲದ ಸಚಿವರಾಗಿದ್ದ
ಧರ್ಮೇ೦ದ್ರ ಪ್ರಧಾನ್ ರವರನ್ನು ದೇಶದಲ್ಲಿ ನೀಟ್ ಪರೀಕ್ಷೆಯ ಪ್ರಶ್ನಾಪತ್ರಿಕೆ ಸೋರಿಕೆಯಿ೦ದಾಗಿ ವಿದ್ಯಾರ್ಥಿಗಳ ಸಾವಿಗೆ ಕಾರಣವಾಗಿದೆ ಎ೦ದು ಕಾಕ್ರೋಚ್ ಸ೦ಘಟನೆಯು ಪ್ರತಿಭಟನೆಯನ್ನು ನಡೆಸುವುದರೊ೦ದಿಗೆ ಮ೦ತ್ರಿಮ೦ಡಲದ ಮೊದಲ ತಲೆದ೦ಡ ಕೇ೦ದ್ರ ಸರಕಾರ ಶಿಕ್ಷಣ ಸಚಿವರ ಧರ್ಮೇ೦ದ್ರ ಪ್ರಧಾನ್ ರವರನ್ನು ರಾಜೀನಾಮೆಯನ್ನು ಕೊಡುವವರೆಗೂ ಹೋರಾಟನಡೆಸಿ ಕೊನೆಗೂ ರಾಜೀನಾಮೆಯನ್ನು ಕೊಡುವ೦ತಾಯಿತು.
ಇದೀಗ ಮೋದಿ ಸರಕಾರಕ್ಕೆ ಎಥೆನಾಲ್ ಮಿಶ್ರಿತ ಪೆಟ್ರೋಲ್ ಅನುಷ್ಠಾನವನ್ನು ವಿರೋಧಿಸಿ ಆಗಸ್ಟ್ 4ಕ್ಕೆ ಸಂಸತ್ತಿಗೆ ಪ್ರತಿಭಟನಾ ಮೆರವಣಿಗೆಯು ಮತ್ತೊ೦ದು ತಲೆಬಿಸಿಯನ್ನು ಹುಟ್ಟಿಹಾಕಿದೆ. ದೇಶದ ಎಲ್ಲಾ ಕಡೆಯಿ೦ದ ಟ್ಯಾಕ್ಸಿ ಮತ್ತು ಟೂರಿಸ್ಟ್ ಟ್ರಾನ್ಸ್‌ಪೋರ್ಟರ್ಸ್ ಮತ್ತು ಟೂರ್ ಆಪರೇಟರ್ಸ್ ಅಸೋಸಿಯೇಷನ್ ಸದಸ್ಯರು ದೆಹಲಿಯಲ್ಲಿ ನಡೆಯುವ ಈ ಪ್ರತಿಭಟನೆಯಲ್ಲಿ ಭಾಗವಹಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.ಅತ್ತ ರೈತರೂ ಸಹ ಸರಕಾರದ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.ಒಟ್ಟಾರೆ ಮೋದಿ ಸರಕಾರದ ಮು೦ದಿನ ತಲೆದ೦ಡವಾಗಲಿರುವ ಮ೦ತ್ರಿ ನಿತೀನ್ ಗಡ್ಗರಿಯವರೆ ಎ೦ದು ಕಾದು ನೋಡಬೇಕಾಗಿದೆ.
ಒಟ್ಟಾರೆ ಸ೦ಘಟನೆಯ ಮು೦ದೆ ಯಾವ ರಾಜಕೀಯ ಪಕ್ಷಗಳ ಆಟನಡೆಯುವುದಿಲ್ಲ ಎನ್ನುವುದಕ್ಕೆ ವಿದ್ಯಾರ್ಥಿಗಳ ಪ್ರತಿಭಟನೆ ಪ್ರತ್ಯಕ್ಷ ಸಾಕ್ಷಿ…