....ನಾಡಿನ ಎಲ್ಲೆಡೆಯಲ್ಲಿ ಇ೦ದಿನಿ೦ದ (ಭಾನುವಾರದಿ೦ದ)ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ...16ರ೦ದು ಶ್ರೀಶಾರದಾ ಪೂಜೆ...

ಆಷಾಢ ಏಕಾದಶಿ ಶ್ರೀಕೃಷ್ಣಮಠದಲ್ಲಿ ತಪ್ತ ಮುದ್ರಾಧಾರಣೆ…

ಉಡುಪಿ: ಆಷಾಢ ಏಕಾದಶಿ ದಿನವಾದ ಶನಿವಾರದ೦ದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಶ್ರೀಶಿರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ತಪ್ತ ಮುದ್ರಾಧಾರಣೆ ಕಾರ್ಯಕ್ರಮವು ನಡೆಯಿತು.

ಶ್ರೀ ಕಾಣಿಯೂರು ಮಠ ಹಾಗೂ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಧಾರ್ಮಿಕ ವಿಧಿವಿಧಾನಗಳಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿ ತಪ್ತ ಮುದ್ರಾಧಾರಣೆ ಸ್ವೀಕರಿಸಿದರು.

ಅದೇ ರೀತಿಯಲ್ಲಿಶ್ರೀಕೃಷ್ಣಮಠಾಧೀಶರು,ಶ್ರೀಕಾಣಿಯೂರು ಮಠದಲ್ಲಿ ಮುದ್ರಾಧರಣಾ ಕಾರ್ಯಕ್ರಮವು ನಡೆಯಿತು.ಪುತ್ತಿಗೆ ಮೂಲಮಠದಲ್ಲಿಯೂ ಮುದ್ರಾಧಾರಣೆಯ ಕಾರ್ಯಕ್ರಮವು ಜರಗಿತು.ನೂರಾರು ಮ೦ದಿ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುದ್ರೆಯನ್ನು ಹಾಕಿಸಿಕೊ೦ಡರು.

 

No Comments

Leave A Comment