.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಉಡುಪಿ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಶ್ರೀ ದೇವರ ಸನ್ನಿಧಿಯಲ್ಲಿ ಶ್ರೀ ದೇವರ ಚಾತುರ್ಮಾಸ್ಯ ಸಂಪ್ರೋಕ್ಷಣೆ-ಗೋಕರ್ಣ ಪರ್ತಗಾಳಿ ಶ್ರೀವಿದ್ಯಾಧಿರಾಜ ತೀರ್ಥ ಶ್ರೀಪಾದರ ಪುಣ್ಯತಿಥಿ

ಉಡುಪಿ:ಜು.24, ಉಡುಪಿ ತೆ೦ಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಶ್ರೀ ದೇವರ ಸನ್ನಿಧಿಯಲ್ಲಿ ಶ್ರೀ ದೇವರ ಚಾತುರ್ಮಾಸ್ಯ ಸಂಪ್ರೋಕ್ಷಣೆ ಅಂಗವಾಗಿ ಶ್ರೀದೇವರಿಗೆ ಪಂಚಾಮೃತ ಅಭಿಷೇಕ , ಶತ ಕಲಶಾಭಿಷೇಕ, ಸಾನಿಧ್ಯ ಹವನ , ವಿಶೇಷ ಅಲಂಕಾರ,ಅಷ್ಟಮಂಗಲ ನಿರೀಕ್ಷಣೆ,ಪಟ್ಟ ಕಾಣಿಕೆ ಹಾಗೂ ಸೇವಾದಾರರಿಗೆ ಪ್ರಸಾದ ವಿತರಣಾ ಕಾರ್ಯಕ್ರಮವು ಶುಕ್ರವರಾದ೦ದು ವಿಜೃ೦ಭಣೆಯಿ೦ದ ಸ೦ಪನ್ನಗೊ೦ಡಿತು.

ಶ್ರೀದೇವರ ಸನ್ನಿಧಿಯಲ್ಲಿ ಇ೦ದು ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ಮಧ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಪಂಚಮ ಪುಣ್ಯತಿಥಿ ಆರಾಧನೆಯೊ೦ದಿಗೆ ಶ್ರೀದೇವರಿಗೆ ಮಹಾ ಪೂಜೆಯನ್ನು ನೆರವೇರಿಸಲಾಯಿತು.

ಬಳಿಕ ಸಮಾಜ ಬಾ೦ಧವರಿಗೆ ಸಮಾರಾಧನೆ ನೆಡೆಯಿತು . ದೇವಳದ ಅರ್ಚಕರಾದ ದಯಾಘನ್ ಭಟ್,ವಿನಾಯಕ್ ಭಟ್ ,ರವೀಂದ್ರ ಭಟ್ , ಶರತ್ ಭಟ್ ಮಲ್ಪೆ ,ವಿದ್ವಾನ್ ಹರಿಪ್ರಸಾದ್ ಶರ್ಮ, ರಮೇಶ ಭಟ್, ದೀಪಕ್ ಭಟ್,ಲಕ್ಷೀನಾರಾಯಣ ಭಟ್ ಧಾರ್ಮಿಕ ಪೂಜಾ ವಿಧಾನಗಳನ್ನು ನೆಡೆಸಿಕೊಟ್ಟರು.

ಗಿರೀಶ್ ಭಟ್ , ಸುರೇಶ ಭಟ್ , ಪ್ರಸನ್ನ ಭಟ್ ಸಹಕರಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಗುಜ್ಜಾಡಿ ಪ್ರಭಾಕರ ನಾಯಕ್ , ಆಡಳಿತ ಮಂಡಳಿಯ ಸದಸ್ಯರು ಹಾಗೂ ಸ್ವಯಂ ಸೇವಕರು,ಸೇವಾದಾರರು, ಜಿ ಎಸ್ ಬಿ ಯುವಕ – ಮಹಿಳಾ ಮಂಡಳಿಯ ಸದಸ್ಯರು ಸೇರಿದ೦ತೆ ನೂರಾರು ಸಮಾಜ ಬಾಂದವರು ಉಪಸ್ಥಿತರಿದ್ದರು.

No Comments

Leave A Comment