.....ದೇಶದೆಲ್ಲೆಡೆಯಲ್ಲಿ ಸ೦ಭ್ರಮದ ದೀಪಾವಳಿ ಹಬ್ಬ...ಗೂಡುದೀಪ,ಸಿಹಿತಿ೦ಡಿ,ಹೊಸಬಟ್ಟೆ ಯ ಖರೀದಿಯಲ್ಲಿ ನಾಡಿನ ಜನತೆ-ಎಲ್ಲೆಡೆಯಲ್ಲಿ ಪಟಾಕಿಯ ಸದ್ದು.......ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ,ಓದುಗರಿ ಬೆಳಕಿನ ಹಬ್ಬ ದೀಪಾವಳಿಯು ಶುಭವನ್ನು೦ಟುಮಾಡಲಿ ಎ೦ದು ಕರಾವಳಿಕಿರಣ ಡಾಟ್ ಶುಭವನ್ನು ಕೋರುತ್ತಿದೆ....

2012ರ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಗೆ ‘ಸುಪ್ರೀಂ’ ಅಸ್ತು!

ನವದೆಹಲಿ: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ನಿರ್ಧಾರ ಕೈಗೊಂಡಿದ್ದು ಮರುತನಿಖೆಗೆ ಅಸ್ತು ಅಂದಿದೆ. ಸೌಜನ್ಯ ತಾಯಿ ಕುಸುಮವತಿಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾ. ಸಂಜಯ್ ಕುಮಾರ್ ನೇತೃತ್ವದ ದ್ವಿಸದಸ್ಯ ಪೀಠ, ವಿಚಾರಣೆ ವೇಳೆ CBI ಅನ್ನು ತರಾಟೆಗೆ ತೆಗೆದುಕೊಂಡಿತು.

ತನಿಖಾಧಿಕಾರಿ ಘಟನಾ ಸ್ಥಳಕ್ಕೆ ಯಾಕೆ ಹೋಗಿಲ್ಲ ಎಂದು ಪ್ರಶ್ನಿಸಿತು. ಹದಿನಾಲ್ಕು ವರ್ಷ ಆಯಿತು. ಸರಿಯಾದ ತನಿಖೆಯಾಗಿಲ್ಲ. ಸಾಕ್ಷ್ಯಗಳಿಗೆ ಭದ್ರತೆ ಕೊಡಿ. ಆದೇಶ ಮಾಡಿದ ಬಳಿಕ ಮಧ್ಯಂತರ ವರದಿ ಕೇಳುತ್ತೇವೆ. ಎಸ್‌ಐಟಿ ರಚನೆಯ ಬಗ್ಗೆ ನಾವು ನಿರ್ಧರಿಸುತ್ತೇವೆ ಎಂದು ತಿಳಿಸಿದೆ.

No Comments

Leave A Comment