....ನಾಡಿನ ಎಲ್ಲೆಡೆಯಲ್ಲಿ ಇ೦ದಿನಿ೦ದ (ಭಾನುವಾರದಿ೦ದ)ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ...16ರ೦ದು ಶ್ರೀಶಾರದಾ ಪೂಜೆ...

ಕುಂಜಾರುಗಿರಿ:ಬಾಣತೀರ್ಥ ಶ್ರೀಉಮಾಮಹೇಶ್ವರ ಸನ್ನಿಧಿಯ ಜೀರ್ಣೋದ್ಧಾರ- ಸೇವಾಪತ್ರ ಅದಮಾರು ಮಠದ ಕಿರಿಯ ಶ್ರೀಪಾದರಾದ ಶ್ರೀ ಈಶಪ್ರಿಯತೀರ್ಥರಿ೦ದ ಅನಾವರಣ

ಉಡುಪಿ: ಕುಂಜಾರುಗಿರಿ ಶ್ರೀದುರ್ಗೆಯ ಸನ್ನಿಧಾನದಲ್ಲಿ ಶ್ರೀ ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಶ್ರೀಬಾಣತೀರ್ಥ ಶ್ರೀಉಮಾಮಹೇಶ್ವರ ಸನ್ನಿಧಿಯ ಜೀರ್ಣೋದ್ಧಾರದ ಸೇವಾಪತ್ರದ ಭಾನುವಾರದ೦ದು ಅನಾವರಣ ಮಾಡಿದರು.

ಜೀರ್ಣೋದ್ಧಾರ ಪ್ರಕ್ರಿಯೆ ನಿಮಿತ್ತ ಪ್ರತೀ ಭಾನುವಾರದಂದು ನಡೆಯಲಿರುವ ಸುತ್ತಮುತ್ತಲಿನ ಪರಿಸರ ಶುಚಿತ್ವ ಕಾರ್ಯಕ್ರಮಕ್ಕೆ ಶ್ರೀಪಾದರು ಚಾಲನೆ ನೀಡಿ ಮನೋ ನಿಯಮಕರಾದ ರುದ್ರ ದೇವರ ಸೇವೆ ಮಾಡುವುದರೊಂದಿಗೆ ಪರಿಸರ ಶುಚಿತ್ವದೊಂದಿಗೆ ಪರಿಸರ ರಕ್ಷಣೆ ಮಾಡಬೇಕು. ನಾವು ಇರುವ ಪರಿಸರ ಶುದ್ಧಿಯಾಗಿದ್ದರೆ ಮಾತ್ರ ನಮ್ಮ ಮನಸ್ಸು ಶುದ್ಧಿಯಿಂದ ಇರುತ್ತದೆ.ಇದರಿಂದ ದೇವಾ ಸೇವೆ ದೇಶ ಸೇವೆ ಮಾಡಿದಂತಾಗುತ್ತದೆ ಎಂದು ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಅದಮಾರು ಮಠದ ಪ್ರಧಾನ ವ್ಯವಸ್ಥಾಪಕರಾದ ಗೋವಿಂದರಾಜ್ , ಶ್ರೀ ಮಠದ ಅಧಿಕಾರಿಗಳಾದ ನಾಗರಾಜ್ ರಾವ್ ಮತ್ತು ನಾಗರಾಜ ತಂತ್ರಿ, ಅರ್ಚಕರಾದ ಗೋಪಾಲಕೃಷ್ಣ ಭಟ್ , ಇಂಜಿನಿಯರ್ ಲಕ್ಷ್ಮೀನಾರಾಯಣ ಉಪಾಧ್ಯಯ, ಕುರ್ಕಾಲು ಪಟ್ಟಾಚಾವಡಿ ದಿನೇಶ್ ಶೆಟ್ಟಿ , ಪರಶುರಾಮ ಭಜನಾ ಮಂಡಳಿಯ ಅಧ್ಯಕ್ಷರಾದ ಕುಳೇದು ಪ್ರಶಾಂತ ಶೆಟ್ಟಿ , ಪಾಜೈ ಫ್ರೆಂಡ್ಸ್ ಅಧ್ಯಕ್ಷರಾದ ಸಂತೋಷ್ ಆಚಾರ್ಯ , ಸುಮಾ ಶೆಟ್ಟಿ, ವಿಶ್ವ ಹಿಂದೂ ಪರಿಷತ್ತಿನ ಮುಖಂಡರಾದ ರಾಕೇಶ್ ಆಚಾರ್ಯ, ಮಾಜಿ ಪಂಚಾಯತ್ ಸದಸ್ಯರಾದ ಸುದರ್ಶನ್ ರಾವ್, ವಿಶ್ವನಾಥ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

No Comments

Leave A Comment