....ನಾಡಿನ ಎಲ್ಲೆಡೆಯಲ್ಲಿ ಇ೦ದಿನಿ೦ದ (ಭಾನುವಾರದಿ೦ದ)ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ...16ರ೦ದು ಶ್ರೀಶಾರದಾ ಪೂಜೆ...

Wayanad: ಭೂ ಕುಸಿತದ ರಭಸಕ್ಕೆ ಕೊಚ್ಚಿ ಬಂದ ಟ್ಯಾಂಕರ್! ನದಿಗೆ ಬಿದ್ದ ಬಸ್; 5 ಸಾವು, ಏಳು ಮಂದಿಗೆ ಗಾಯ, ಭಯಾನಕ

ವೈನಾಡು: ಕೇರಳದ ವೈನಾಡು ಜಿಲ್ಲೆಯ ಕಾಲಡಿ ಬಳಿ ಮಂಗಳವಾರ ಭಯಾನಕ ರೀತಿಯಲ್ಲಿ ಭೂ ಕುಸಿತ ಸಂಭವಿಸಿದೆ. ಮೆಪ್ಪಾಡಿಯ ಕಾಲಡಿ ಸಂಭವಿಸಿದ ಭೂ ಕುಸಿತದಲ್ಲಿ 5ವರು ಮೃತಪಟ್ಟಿದ್ದು, ಇತರ 7 ಮಂದಿ ಗಾಯಗೊಂಡಿದ್ದು, ಹಲವರು ನಾಪತ್ತೆಯಾಗಿದ್ದು, ಅವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

ಮಿನಾಕ್ಷಿ ಸೇತುವೆ ಬಳಿ ನಿರ್ಮಾಣ ಹಂತದ ವೈನಾಡು-ಮಲ್ಲಾಪುರಂ ಸುರಂಗ ರಸ್ತೆ ಯೋಜನೆ ನಡೆಯುತ್ತಿರುವ ಸ್ಥಳದಲ್ಲಿ ಸುನಾಮಿಯಂತೆ ಮಣ್ಣು ಮಿಶ್ರಿತ ಕೆಸರು ನುಗ್ಗಿಬಂದಿದ್ದು, ಭೂ ಕುಸಿತದ ರಭಸಕ್ಕೆ ಟ್ಯಾಂಕರ್ ಕೊಚ್ಚಿ ಬಂದಿದೆ. ಇದರಿಂದ ಭೀತಿಗೊಂಡ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ದಿಕ್ಕಾ ಪಾಲಾಗಿ ಓಡಿ ಹೋಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಭೂ ಕುಸಿತದಿಂದ ಖಾಸಗಿ ಬಸ್ ವೊಂದು ಮೀನಾಕ್ಷಿ ನದಿ ಬಿದಿದ್ದೆ. ನೀರಿನಲ್ಲಿ ಅರ್ಧಭಾಗ ಬಸ್ ಮುಳುಗಿದ್ದು, ಬಸ್ ನಲ್ಲಿದ್ದವರ ರಕ್ಷಣಾ ಕಾರ್ಯ ನಡೆಯುತ್ತಿದೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯ ಆರಂಭಿಸಿದೆ. ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸುತ್ತಿದೆ.

ಸುರಂಗ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಸ್ಥಳದಲ್ಲಿ ಉಂಟಾದ ಭೂಕುಸಿತದ ಅವಶೇಷಗಳಡಿ ಸಿಲುಕಿದ ಮೂವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ.

ಈ ಹಿಂದೆ 2024ರಲ್ಲಿ ವೈನಾಡಿನಲ್ಲಿ ಸಂಭವಿಸಿದ ಭೀಕರ ಭೂ ಕುಸಿತದಲ್ಲಿ 250ಕ್ಕೂ ಹೆಚ್ಚು ಸಾವನ್ನಪ್ಪಿದ್ದರು. ಈಗ ಅದೇ ರೀತಿಯಲ್ಲಿ ಮತ್ತೊಂದು ಭಯಾನಕ ಭೂ ಕುಸಿತ ಸಂಭವಿಸಿದೆ.ವೈನಾಡಿನಲ್ಲಿ ಭಾರತೀಯ ಹವಾಮಾನ ಇಲಾಖೆ ರೆಡ್ ಆಲರ್ಟ್ ಘೋಷಿಸಿದೆ.

No Comments

Leave A Comment