ಉಡುಪಿಯ ಬಡಗುಪೇಟೆಯಲ್ಲಿನ ಪ್ರಸಿದ್ಧ ಬಟ್ಟೆಮಳಿಗೆ "ಗಿರಿಜಾ ಸಿಲ್ಕ್ "ನಲ್ಲಿ ಜೂನ್ 15ರಿ೦ದ ಗ್ರಾಹಕರಿಗಾಗಿ ಭಾರೀ ರಿಯಾಯಿತಿ ದರದಲ್ಲಿ ಮಕ್ಕಳ, ಮಹಿಳೆಯರ ಹಾಗೂ ಪುರುಷರ ಬಟ್ಟೆಗಳ ಮಾರಾಟ ಆರ೦ಭ-ಗ್ರಾಹಕರ ಅನುಕೂಲಕ್ಕಾಗಿ ಭಾನುವಾರವು ತೆರೆದಿದೆ.ತಕ್ಷಣವೇ ಭೇಟಿ ನೀಡಿ ಬಟ್ಟೆಗಳನ್ನು ಖರೀದಿಸಿ.ಎಲ್ಲಾ ಬಟ್ಟೆಗಳು ಹೊಸ ಸ್ಟಾಕ್....

Karnataka MLC Election Results: ಅಡ್ಡ ಮತದಾನದ ನಡುವೆಯೇ ಕಾಂಗ್ರೆಸ್ 5, ಬಿಜೆಪಿ ತೆಕ್ಕೆಗೆ 2 ಸ್ಥಾನ; JDS ಆಘಾತಕಾರಿ ಸೋಲು

ಬೆಂಗಳೂರು: ಭಾರಿ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್​​ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಅಡ್ಡ ಮತದಾನ ಆರೋಪಗಳ ನಡುವೆಯೇ ಕಾಂಗ್ರೆಸ್ 5, ಬಿಜೆಪಿಗೆ ತೆಕ್ಕೆಗೆ 2 ಸ್ಥಾನ ಲಭಿಸಿವೆ.

ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್​​ನ ಐವರು ಮತ್ತು ಬಿಜೆಪಿಯ ಎರಡು ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಆದರೆ ಈ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿ ಪಕ್ಷ ಜೆಡಿಎಸ್ ಗೆ ಭಾರಿ ಆಘಾತ ಎದುರಾಗಿದ್ದು, ಜೆಡಿಎಸ್​​ನಿಂದ ಸ್ಪರ್ಧಿಸಿದ್ದ ಏಕೈಕ ಅಭ್ಯರ್ಥಿ ಸೋಲುಂಡಿದ್ದಾರೆ.

ಬಿಜೆಪಿ ಮತ್ತು ಜೆಡಿಎಸ್​​ನಿಂದ ಅಡ್ಡ ಮತದಾನ​​ ಆಗಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಒಂದು ಮತ ಅಸಿಂಧು

ವಿಧಾನಪರಿಷತ್ ಚುನಾವಣೆ ಹಿನ್ನೆಲೆ ಚಲಾವಣೆಗೊಂಡಿದ್ದ 222 ಮತಗಳ ಪೈಕಿ ಒಂದು ಮತ ಅಸಿಂಧುವಾಗಿದೆ. ನಂಬರ್ ಸರಿಯಾಗಿ ಬರೆಯದಿದ್ದಕ್ಕೆ 1 ಮತವನ್ನು ತಿರಸ್ಕರಿಸಲಾಗಿದೆ.

ಯಾರಿಗೆಷ್ಟು ಮತಗಳು?

ಕಾಂಗ್ರೆಸ್ ಪಕ್ಷ

ಬಿ.ಕೆ. ಹರಿಪ್ರಸಾದ್​​ -30 ಮತಗಳು, ತಿಪ್ಪಣ್ಣಪ್ಪ ಕಮಕನೂರು-30 ಮತಗಳು, ಪಿ.ವಿ.ಮೋಹನ್​-29 ಮತಗಳು, ಬಿ.ಎಸ್.ಶಿವಣ್ಣ-30 ಮತಗಳು ಮತ್ತು 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್​ಗೆ 32 ಮತಗಳು ಲಭಿಸಿವೆ ಎಂದು ತಿಳಿದುಬಂದಿದೆ.

ಇತ್ತ ಬಿಜೆಪಿಯ ಅಭ್ಯರ್ಥಿಗಳಾದ ಆರ್.ರಘುಗೆ 29 ಮತಗಳು ಮತ್ತು ಲಿಂಗರಾಜು ಪಾಟೀಲ್​ಗೆ 27 ಮತಗಳು ಲಭಿಸಿವೆ. ಅಂತೆಯೇ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜುಗೆ 14 ಮತಗಳನ್ನು ಪಡೆದಿದ್ದಾರೆ.

No Comments

Leave A Comment