....ನಾಡಿನ ಎಲ್ಲೆಡೆಯಲ್ಲಿ ಇ೦ದಿನಿ೦ದ (ಭಾನುವಾರದಿ೦ದ)ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ...16ರ೦ದು ಶ್ರೀಶಾರದಾ ಪೂಜೆ...

ಬೇಡ ಬೇಡ ಹೀಗೆಲ್ಲಾ ಮಾಡಬೇಡಿ: ರಸ್ತೆಯಲ್ಲೇ ಗಳಗಳನೆ ಅತ್ತ ನಟಿ ರಮ್ಯಾ

ಬೆಂಗಳೂರು: ಬೆಂಗಳೂರಿನ ಕಗ್ಗದಾಸಪುರದಲ್ಲಿ ಬೀದಿನಾಯಿಗಳ ನಾಪತ್ತೆ ಕುರಿತಂತೆ ನಟಿ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಯಿಗಳ ಮೇಲಿನ ಹಿಂಸೆ ನೆನೆದು ರಮ್ಯಾ ರಸ್ತೆಯಲ್ಲೇ ಗಳಗಳನೆ ಅತ್ತಿದ್ದಾರೆ. ಫ್ರೀಡಂಪಾರ್ಕ್‌ನಲ್ಲಿ ಬೀದಿ ನಾಯಿಗಳ ಬಲವಂತದ ಸ್ಥಳಾಂತರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರಮ್ಯಾ ನಾಯಿಗಳನ್ನು ಚೀಲಗಳಲ್ಲಿ ಕಟ್ಟಿ ಸಾಗಿಸುತ್ತಿರುವುದು ಅಮಾನವೀಯ ಎಂದು ಹೇಳಿದರು.

ನಾಪತ್ತೆಯಾಗಿರುವ ನಾಯಿಗಳಿಗೆ ಏನಾಗಿರಬಹುದು ಎಂಬುದನ್ನು ಕಲ್ಪಿಸಿಕೊಂಡರೆ ನೋವಾಗುತ್ತದೆ. ಈ ರೀತಿ ಆಗಿದೆ ಎಂಬುದು ಗೊತ್ತಾಗಾದ ನನಗೆ ಆಘಾತ ಆಯಿತು ಎಂದು ರಮ್ಯಾ ಹೇಳಿದ್ದಾರೆ. ಸಂಸ್ಥೆಯೊಂದು ಇಷ್ಟು ಬೇಜವಾಬ್ದಾರಿಯಾಗಿ ನಡೆದುಕೊಂಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದ್ದು ಏಪ್ರಿಲ್ 16ರಂದು ಮುಂದಿನ ವಿಚಾರಣೆ ನಡೆಯಲಿದೆ.

No Comments

Leave A Comment