.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಕರ್ನಾಟಕದಲ್ಲಿ ಮತ್ತೊಂದು ಕಾಮಕಾಂಡ: ಮನೆಯಲ್ಲಿ ಯಾರೂ ಇಲ್ಲ ಬಾ; Love Me ಅಂತ ‘ಲೇಡಿ ಡಾನ್’ ಹಿಂದೆ ಬಿದ್ದ ಪೊಲೀಸ್​​ ಇನ್ಸ್​ಪೆಕ್ಟರ್

ಬೆಂಗಳೂರು: ಮೂಡುಬಿದಿರೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಂದೇಶ್ ಬಿ.ಜಿ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತೊಂದು ಪೊಲೀಸಪ್ಪನ ಕಾಮಕಾಂಡ ಬಯಲಾಗಿದೆ. ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಾಪಣ್ಣ ವಿರುದ್ಧ ಲೇಡಿ ರೌಡಿಶೀಟರ್​​ಗೆ ಕಿರುಕುಳದ ಆರೋಪ ಮಾಡಿದ್ದಾರೆ.

Love Me ಎಂದು ಇನ್ಸ್​ಪೆಕ್ಟರ್​​ ಪಾಪಣ್ಣ ಮಹಿಳಾ ರೌಡಿಶೀಟರ್ ಯಶಸ್ವಿನಿ ಗೌಡ ಹಿಂದೆ ಬಿದ್ದಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. ನಿತ್ಯ ವಾಟ್ಸಪ್ ಮೆಸೇಜ್ ಮತ್ತು ಕರೆ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಲೇಡಿ ಆರೋಪಿಸಿದ್ದಾರೆ. ಲವ್ ಮಾಡು ಅಂತ ಹಿಂದೆ ಬಿದ್ದಿದ್ದಾನೆ. ಮನೆಯಲ್ಲಿ ಯಾರೂ ಇಲ್ಲ ಬಾ ಅಂತ ಕರೀತಾರೆ ಎಂದು ಲೇಡಿ ರೌಡಿಟಶೀರ್ ಯಶಸ್ವಿನಿ ಗೌಡ ಕಮಿಷನರ್​​ಗೆ ದೂರು ಕೊಟ್ಟಿದ್ದಾರೆ.

No Comments

Leave A Comment