.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಉಡುಪಿಯ ಬನ್ನಂಜೆ ರಾಷ್ಟ್ರೀಯ ಹೆದ್ದಾರಿ 169 ಎ ಜಯಲಕ್ಷ್ಮಿ ಸಿಲ್ಕ್ ಎದುರು ಡಿವೈಡರ್ ಮತ್ತು ಎಲೆಕ್ಟ್ರಿಕ್ ಕಂಬಗಳನ್ನು ತುಂಡರಿಸಿ ಅಗಲಗೊಳಿಸಿದ ಬಗ್ಗೆ ಲೋಕಾಯುಕ್ತ ತನಿಖೆಗೆ ಒತ್ತಾಯ-ಸುರೇಶ್ ಶೆಟ್ಟಿ ಬನ್ನಂಜೆ

ಉಡುಪಿ:ಉಡುಪಿಯ ರಾಷ್ಟ್ರೀಯ ಹೆದ್ದಾರಿ 169A ಇಲ್ಲಿ ಇರುವ ಜಯಲಕ್ಷ್ಮಿ ಸಿಲ್ಕ್ ಇದರ ಎದುರುಗಡೆ ಇರುವ ದಿವೈಡರನ್ನು ಅಗಲಗೊಳಿಸಿ ಎಲೆಕ್ಟ್ರಿಕ್ ಕಂಬಗಳನ್ನು ಬೇರ್ಪಡಿಸಲು ಕಾರಣವೇನು.ಇದಕ್ಕೆ ಯಾರ ಕುಮ್ಮಕ್ಕು ಇತ್ತು. ಹಾಗೂ 169A ರಾಷ್ಟ್ರೀಯ ಹೆದ್ದಾರಿ ಬನ್ನಂಜೆ ಮತ್ತು ಸಿರಿಬೀಡು ವ್ಯಾಪ್ತಿಯಲ್ಲಿ ನಾರಾಯಣ ಗುರು ಮಂದಿರದ ಎದುರು ದೊಡ್ಡ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗುತ್ತಿದ್ದು ಇಲ್ಲಿ ಸರಿಯಾಗಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ ಮತ್ತು ಹೆಗ್ಡೆ ಗ್ಯಾರೇಜ್ ಬಳಿ ಲಾಡ್ಜಿಂಗ್ ಮತ್ತು ಬಾರ್ ರೆಸ್ಟೋರೆಂಟ್ ನೂತನವಾಗಿ ಪ್ರಾರಂಭಿಸುವ ಬಗ್ಗೆ ನಮಗೆ ಮಾಹಿತಿ ಇದ್ದು ಅದನ್ನು ಕೂಡ ತಡೆ ಹಿಡಿಯಬೇಕೆಂದು ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷರಿಗೆ ಲಿಖಿತ ಪತ್ರವನ್ನು ನೀಡಲಾಗಿದೆ.

ಇಲ್ಲಿ ಪಾರ್ಕಿಂಗ್ ಸಮಸ್ಯೆ ಇದ್ದು.ಅದನ್ನು ಕೂಡಲೆ ಸ್ಥಗಿತಗೊಳಿಸುವ ಬಗ್ಗೆ ಅವರಿಗೆ ಮನವರಿಕೆ ಮಾಡಿದ್ದರೂ ಕೂಡ ಅದಕ್ಕೆ ಪರ್ಮಿಷನ್ ನೀಡಿರುತ್ತಾರೆ ಈ ಬಗ್ಗೆ ಕೂಡಲೇ ತನಿಖೆ ನಡೆಸಬೇಕೆಂದು ಬನ್ನಂಜೆ ಮತ್ತು ಸಿರಿಬೀಡು ವಾರ್ಡಿನಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಬಗ್ಗೆ ಪ್ರಚಾರ ಮಾಡುತ್ತಿರುವ ಕಾರ್ಯಕರ್ತರನ್ನು ಜೊತೆಗೂಡಿಸಿ ಲೋಕಾಯುಕ್ತರನ್ನು ಭೇಟಿ ಮಾಡಿ ತನಿಖೆ ನಡೆಸಬೇಕೆಂದು ಒತ್ತಾಯಿಸಲಾಗುವುದು ಎಂದು ಉಡುಪಿ ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಹಾಗೂ ಉಡುಪಿ ನಗರಸಭೆಯ ನಾಮ ನಿರ್ದೇಶಕ ಸದಸ್ಯರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.

No Comments

Leave A Comment