...ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 126ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಮ೦ಗಳವಾರದ೦ದು(ಇ೦ದು) ದೀಪ ಪ್ರಜ್ವಲಿಸುವುದರೊ೦ದಿಗೆ ಅದ್ದೂರಿಯ ಚಾಲನೆ...

No friendship only business: ತೈಲ ಬೇಕಾದರೆ..; ಸಂಕಷ್ಟದ ಸಮಯದಲ್ಲಿ ಕೈಹಿಡಿದಿದ್ದ ಭಾರತಕ್ಕೆ ಕೈ ಕೊಟ್ಟ ರಷ್ಯಾ!

ಮಾಸ್ಕೋ: ಇರಾನ್- ಇಸ್ರೇಲ್ ನಡುವಿನ ಯುದ್ಧ ಜಿಯೋಪೊಲಿಟಿಕ್ಸ್ ನಲ್ಲಿ ಹಲವು ಪಲ್ಲಟಗಳಿಗೆ ಕಾರಣವಾಗಿದೆ. ಈ ವರೆಗೂ ಯುಕ್ರೈನ್ ವಿರುದ್ಧದ ಯುದ್ಧದಿಂದ ಪಶ್ಚಿಮದ ಜಗತ್ತಿನ ಶತ್ರುವಾಗಿದ್ದ ಪುಟಿನ್ ಈಗ ಏಕಾಏಕಿ ಆಪತ್ಬಾಂಧವನಂತೆ ಕಾಣತೊಡಗಿದ್ದಾರೆ. ಇದರ ಪರಿಣಾಮ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ರಷ್ಯಾ ಪ್ರಾಬಲ್ಯ ಸಾಧಿಸಿ ಲಾಭ ಮಾಡಿಕೊಳ್ಳಲು ಮುಂದಾಗಿದೆ.

ಯುದ್ಧದ ಲಾಭಪಡೆಯುವುದಕ್ಕೆ ಮುಂದಾಗಿರುವ ರಷ್ಯಾ ರಿಯಾಯಿತಿ ದರದಲ್ಲಿ ತೈಲ ಮಾರಾಟವನ್ನು ಸ್ಥಗಿತಗೊಳಿಸಿದೆ. ಈ ವರೆಗೂ ಭಾರತಕ್ಕೆ ರಿಯಾಯಿತಿ ದರದಲ್ಲಿ ತೈಲ ಮಾರಾಟ ಮಾಡುತ್ತಿದ್ದ ರಷ್ಯಾ ಈಗ ರಿಯಾಯಿತಿಯನ್ನು ಸ್ಥಗಿತಗೊಳಿಸುತ್ತಿರುವುದಾಗಿ ವರದಿಯಾಗಿದೆ.

ಭಾರತ ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸುತ್ತಿದ್ದ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳಿಗೂ ಲಾಭವಾಗುತ್ತಿತ್ತು. ಈಗ ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿ ತೈಲ ಬೆಲೆಗಳು 2022 ರಿಂದ ಇದೇ ಮೊದಲ ಬಾರಿಗೆ ಪ್ರತಿ ಬ್ಯಾರೆಲ್ ಗೆ 100 ಡಾಲರ್ ಗೆ ತಲುಪಿದೆ.

ನೀವು ನಮಗೆ ಮಾಹಿತಿಯೇ ನೀಡದೆ ನಮ್ಮಿಂದ ತೈಲ ಖರೀದಿಯನ್ನು ಏಕಾಏಕಿ ಸ್ಥಗಿತಗೊಳಿಸಿದಿರಿ, ಈಗ ದಿಢೀರ್ ರಿಯಾಯಿತಿ ದರದಲ್ಲಿ ತೈಲ ಪೂರೈಕೆಗೆ ಕೇಳುತ್ತಿದ್ದೀರಾ? ಎಂದು ಭಾರತಕ್ಕೆ ವ್ಲಾದಿಮಿರ್ ಪುಟಿನ್ ಪ್ರಶ್ನಿಸಿದ್ದಾರೆ ಎಂಬುದನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮವೊಂದು ವರದಿ ಪ್ರಕಟಿಸಿದೆ.

ಭಾರತದೊಂದಿಗಿನ ಮುಂದಿನ ತೈಲ ವ್ಯಾಪಾರ ಸಂಪೂರ್ಣವಾಗಿ ವಾಣಿಜ್ಯ ನೆಲೆಯಲ್ಲಿ ನಡೆಯುತ್ತದೆಯೇ ಹೊರತು ಈ ಹಿಂದಿನ ರಿಯಾಯಿತಿ ದರದಲ್ಲಿ ಅಲ್ಲ ಎಂಬ ಸ್ಪಷ್ಟ ಸಂದೇಶವನ್ನು ಪುಟಿನ್ ರಷ್ಯಾ ಅಧಿಕಾರಿಗಳಿಗೆ ಕಳಿಸಿದ್ದಾರೆ ಎಂದು ತಿಳಿದುಬಂದಿದೆ.

ಇರಾನ್ ಯುದ್ಧ ಆರಂಭವಾದಾಗಿನಿಂದ ಭಾರತಕ್ಕೆ ರಷ್ಯಾ ತೈಲವನ್ನು ಖರೀದಿಸಲು ಅಮೆರಿಕ 30 ದಿನಗಳ ಅನುಮತಿ ನೀಡಿತ್ತು. ರಷ್ಯಾದಿಂದ ತೈಲ ಖರೀದಿಸಲು ನಮಗೆ ಯಾರ ಅನುಮತಿಯೂ ಬೇಡ ಎಂದು ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿತ್ತು.

No Comments

Leave A Comment