Israel Iran war: ಭಾರತಕ್ಕೆ ಬಿಗ್ ಶಾಕ್, ಕತಾರ್ ನಿಂದ ಕೈಗಾರಿಕೆಗಳಿಗೆ ಅನಿಲ ಸರಬರಾಜು ಕಡಿತ!...ಇರಾನ್‌ನ ಮುಂದಿನ ಸರ್ವೋಚ್ಚ ನಾಯಕ ಯಾರೇ ಆದರೂ ಅವರನ್ನು ನಿರ್ಮೂಲನೆ ಮಾಡುತ್ತೇವೆ: ಇಸ್ರೇಲ್ ಬೆದರಿಕೆ...

ಉಡುಪಿ ಜಿಲ್ಲಾ ಆಸ್ಪತ್ರೆ ಯಲ್ಲಿ ವಿಶ್ವ ಮಹಿಳಾ ದಿನಾಚರಣೆ…

ಉಡುಪಿ ಜಿಲ್ಲಾ ಆಸ್ಪತ್ರೆ ಉಡುಪಿ ಎನ್.ಸಿ.ಡಿ ವಿಭಾಗ ವಾಮನ ವಿಠ್ಠಲ ಟ್ರಸ್ಟ್ ಶಿರೂರು ಮಠ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು .

ಈ ಕಾರ್ಯಕ್ರಮವನ್ನು ಕುಮಾರಿ ನಯನ ಇವರು ಪ್ರಾರ್ಥಸಿದರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಹೆಚ್ ಅಶೋಕ ಮಾರ್ಚ್ 8 ರಂದು ವಿಶ್ವ ಮಹಿಳಾ ದನಾಚರಣೆಯನ್ನು ಆಚರಿಸಲಾಗುತ್ತದೆ ಸಾಮಾಜಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಗೌರವಿಸಲು ಹಾಗೂ ಲಿಂಗ ಸಮಾನತೆಗಾಗಿ ಜಾಗೃತಿ ಮೂಡಿಸಲು ಆಚರಿಸಲಾಗುತ್ತದೆ. ಮಹಿಳಾ ಸಬಲೀಕರಣ, ಹಕ್ಕುಗಳ ರಕ್ಷಣೆ, ತಾರತಮ್ಯದ ನಿರ್ಮೂಲನೆ ಮತ್ತು ಸಮಾಜದಲ್ಲಿ ಮಹಿಳೆಯರ ಕೊಡುಗೆಯನ್ನು ಸ್ಮರಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ, ಹಾಗಾಗಿ ನಮ್ಮ‌ ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದ್ದು ಎಲ್ಲಾರು ಮಹಿಳೆಯರುನ್ನು ಗೌರವಿಸಿ ಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಜಿಲ್ಲಾ ಆಸ್ಪತ್ರೆಯ ರೇಡಿಯೋಲಾಜಿಸ್ಟ್ ಡಾ.ಆಮನ ಹೆಗ್ಡೆ ಇವರು, ಈ ಹಿಂದೆ ಅಬಲೆಯೆಂದು ಕರೆಸಿಕೊಂಡವರು ‘ಸಬಲೆ’ಯಾಗಿ, ಉತ್ತಮ ಶಿಕ್ಷಣವನ್ನು ಪಡೆದು ಹೊರಹೊಮ್ಮಿದು ಹಾದಿಯ ಸ್ಮರಣೆ. ಅದರಲ್ಲೂ ಇತಿಹಾಸದ ಪುಟವನ್ನೊಮ್ಮೆ ತಿರುವಿ ಹಾಕಿದರೆ, ನಮಗೆ ಕಾಣುವುದು ಪುರುಷರಷ್ಟೇ , ಮಹಿಳೆಯರ ತೀಕ್ಷ್ಣ ವಿಚಾರಗಳು, ಕಠಿಣ ನಿರ್ಧಾರಗಳು. ಮಹಿಳೆಯರು ಚಿತ್ರರಂಗದಿಂದ ಹಿಡಿದು ರಾಜಕೀಯದಲ್ಲಿ ಮಹಿಳೆಯರ ಗುರುತನ್ನು ನಾವಿಂದು ಸ್ಮರಿಸೋಣ.ಮಹಿಳೆಯರು ಸ್ಥಾನ‌ ಎಲ್ಲಾ ರಂಗದಲ್ಲಿ ಇದೆ ಎಂದರು.

ಈ ಕಾರ್ಯಕ್ರಮದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸ್ತ್ರೀ ರೋಗ ತಜ್ಞರುರಾದ ಡಾ‌.ಉಷಾ ಹಾಗು ನರ್ಸಿಂಗ್ ಅಧಿಕಾರ ಶ್ರೀಮತಿ ಅರುಣ ಇವರು ಮಹಿಳಾ ದಿನಾಚರಣೆಯ ಬಗ್ಗೆ ಮತಾನಾಡಿದರು.ವೈದ್ಯಕೀಯ ತಜ್ಞರುರಾದ ಡಾ.ದೆಯಮಣಿ ಡಾ.ದಿವ್ಯ,ಪೆಥಲಾಜಿಸ್ಟ್ ಹಾಗು ,ಬ್ಲಡ್ ಬ್ಯಾಂಕ್ ಮೆಡಿಕಲ್ ಆಪಿಸರ್ ಡಾ. ವೀಣಾ ಕಮಾರಿ ಮತ್ತು MCKS Food for the Hungry Foundation ನ ಶ್ರೀಮತಿ,ನಿಧಿ ಹಾಗು ಆಸ್ಪತ್ರೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಶ್ರೀಮತಿ.ರತ್ನವತಿ ವೇದಿಕೆಮೇಲೆ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಸುಮಾರು 500 ಸಿಬ್ಬಂದಿಗಳು ಭಾಗವಸಿದರು ಈ ಮಹಿಳಾ ದಿನಾಚರಣೆಯ ನಮ್ಮ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳಿಗೆ ಉಡುಪಿಯ ವಾಮನ ವಿಠ್ಠಲ ಟ್ರಸ್ಟ್ ಶಿರೂರು ಮಠ ಇವರಿಂದ 500 ರಿಂದ 600 ಸಿಬ್ಬಂದಿಗಳಿಗೆ ಬೆಳಗಿನ ಉಪಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು ಹಾಗು ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿದರ್ಶಕರಾದ ಡಾ.ಜಿ.ಎಸ್ ಚಂದ್ರಶೇಖರ ಇವರು ಜಿಲ್ಲಾ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗಳಿಗೆ lunch Box ಉಡುಗೊರೆ ಯಾಗಿ ನೀಡಿದ್ದರು ಹಾಗು ಈ ಕಾರ್ಯಕ್ರಮದಲ್ಲಿ ಎಲ್ಲಾ ಮಹಿಳಾ ಸಿಬ್ಬಂದಿಗಳಿಗೆ Mcks food for the hungry foundation ನಿಂದ ಪ್ರಾಣಿಕ್ ಹೀಲಿಂಗ್ ಮೆಡಿಟೇಸನ್ ಕಾರ್ಯಕ್ರಮವನ್ನು ನಡಿಸಿಕೋಡಲಾಯಿತು.

ಈ ಕಾರ್ಯಕ್ರಮದಲ್ಲಿ ಎನ್.ಸಿ.ಡಿ ಯ ಜಿಲ್ಲಾ ಸಮಾಲೋಚಕಿ ಡಾ.ಅಂಜಲಿ ಹಾಗೂ ಎನ್. ಸಿ.ಡಿ ಯ ಆಪ್ತ ಸಮಾಲೋಚಕ ರಾದ ಮನು. ಎಸ.ಬಿ ಇವರು ಕಾರ್ಯಕ್ರಮ ನಿರೂಪಿಸಿದರು ಹಾಗೂ ಉಪಸ್ಥಿತರಿದ್ದರು.

No Comments

Leave A Comment