...ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 126ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಮ೦ಗಳವಾರದ೦ದು(ಇ೦ದು) ದೀಪ ಪ್ರಜ್ವಲಿಸುವುದರೊ೦ದಿಗೆ ಅದ್ದೂರಿಯ ಚಾಲನೆ...

ಕಾಂಗ್ರೆಸ್ ಪಕ್ಷ ಯಾವತ್ತೂ ಬಡವರ,ಮಧ್ಯಮ ವರ್ಗದವರ,ಕೂಲಿ ಕಾರ್ಮಿಕರ,ರೈತರ ಬಗ್ಗೆಅವರ ಬೆಂಬಲಕ್ಕೆ ಸದಾ ನಿಂತಿದೆ ಎಂಬುದನ್ನು ತೋರಿಸಿಕೊಟ್ಟಂತಹ ರಾಜ್ಯ ಸರ್ಕಾರದ ಬಜೆಟ್- ಸುರೇಶ್ ಶೆಟ್ಟಿ ಬನ್ನಂಜೆ

ಉಡುಪಿ: ಕರ್ನಾಟಕದ ಕಾಂಗ್ರೆಸ್ ಸರಕಾರ ಇಂದು ಮಂಡಿಸಿದ ಬಜೆಟ್ ಸರ್ವರ ಪಾಲಿಗೆ ಸಂತೋಷದಾಯಕ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರ ನೇತೃತ್ವದ ರಾಜ್ಯದ ಕಾಂಗ್ರೆಸ್ ಪಕ್ಷದ ಸರಕಾರದ ಬಜೆಟ್ ಜನಸಾಮಾನ್ಯರು ಮೆಚ್ಚುವಂತೆ ಮಾಡಿರುವುದು ಅಭಿನಂದನೀಯ.

ಕರಾವಳಿಗೆ ಮೆಡಿಕಲ್ ಕಾಲೇಜ್. ಮೀನುಗಾರರಿಗೆ ಸಂಪೂರ್ಣ ಬೆಂಬಲದ ಬಗೆ. ರೈತರ ಪಾಲಿಗೆ ಕಷ್ಟ ನಿವಾರಕ ಬಜೆಟ್. ಮಧ್ಯಮ ವರ್ಗದವರಿಗೆ ಕೂಲಿ ಕಾರ್ಮಿಕರಿಗೆ ಸಂತೋಷದಾಯಕ ಬಜೆಟ್. ಗ್ಯಾರೆಂಟಿ ಯೋಜನೆಯಿಂದ ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿಯಿಂದಾಗಿ ರಾಜ್ಯದ ಬಡ ಜನರನ್ನು ಬದುಕಿಸಿದ ಬಜೆಟ್ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಹಾಗೂ ಉಡುಪಿ ನಗರಸಭಾ ಸದಸ್ಯರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.

No Comments

Leave A Comment