Israel Iran war: ಭಾರತಕ್ಕೆ ಬಿಗ್ ಶಾಕ್, ಕತಾರ್ ನಿಂದ ಕೈಗಾರಿಕೆಗಳಿಗೆ ಅನಿಲ ಸರಬರಾಜು ಕಡಿತ!...ಇರಾನ್‌ನ ಮುಂದಿನ ಸರ್ವೋಚ್ಚ ನಾಯಕ ಯಾರೇ ಆದರೂ ಅವರನ್ನು ನಿರ್ಮೂಲನೆ ಮಾಡುತ್ತೇವೆ: ಇಸ್ರೇಲ್ ಬೆದರಿಕೆ...

ಬೆಂಗಳೂರಿನಲ್ಲಿ CCB ಭರ್ಜರಿ ಕಾರ್ಯಾಚರಣೆ: 10 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ, ಇಬ್ಬರ ಬಂಧನ

ಬೆಂಗಳೂರು: ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಮಾದಕ ವಸ್ತು ವಿರೋಧಿ ವಿಭಾಗದ ಅಧಿಕಾರಿಗಳು ನಗರದಲ್ಲಿ ಭರ್ಜರಿ ಕಾರ್ಯಾಚರಣೆ ನಡಸಿದ್ದು, 10 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳ ವಶಕಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಮಂಗಳವಾರ ಬಂಧನಕ್ಕೊಳಪಡಿಸಿದೆ.

ಬಂಧಿತರನ್ನು ಶ್ವಿನ್ (27) ಮತ್ತು ಮುಬೀನಾ (25) ಎಂದು ಗುರ್ತಿಸಲಾಗಿದೆ. ಇಬ್ಬರೂ ಕೇರಳ ಮೂಲದವರಾಗಿದ್ದು, ಪ್ರೆಸ್ಟೀಜ್ ಪ್ಯಾನ್ಸ್‌ಬೆರಿ ಹೈಟ್ಸ್ ಅಪಾರ್ಟ್‌ಮೆಂಟ್’ನಲ್ಲಿ ವಾಸಿಸುತ್ತಿದ್ದರು.

ಇಬ್ಬರೂ ಬಿಬಿಎ ಪದವಿ ಕೋರ್ಸ್’ನ್ನು ಮಧ್ಯದಲ್ಲೇ ಬಿಟ್ಟಿದ್ದು, ಬಳಿಕ ಮಾದಕ ವಸ್ತು ವಿತರಣೆ ಜಾಲದಲ್ಲಿ ತೊಡಗಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಸಾಮಾಜಿಕ ಜಾಲತಾಣಗಳ ನಿಗಾದ ವೇಳೆ ಡ್ರಗ್ ಪೆಡ್ಲಿಂಗ್ ಕುರಿತು ಸುಳಿವು ದೊರೆತಿತ್ತು. ಅದರ ಆಧಾರದಲ್ಲಿ ದಾಳಿ ನಡೆಸಿ 8,335 ಎಲ್‌ಎಸ್‌ಡಿ ಸ್ಟ್ರಿಪ್‌ಗಳು (124 ಗ್ರಾಂ), 5 ಕೆಜಿ ಹೈಡ್ರೋ ಗಾಂಜಾ ಮತ್ತು 534 ಗ್ರಾಂ ಚರಸ್ ಜಪ್ತಿ ಮಾಡಲಾಗಿದೆ ಎಂದು ಹೇಳಿದರು.

ಕೇರಳ ಮೂಲದ ವಿನ್ಸೆಂಟ್ ಎಂಬ ವ್ಯಕ್ತಿ ಥಾಯ್ಲೆಂಡ್‌ನಲ್ಲಿ ನೆಲೆಸಿದ್ದು, ಅವನಿಂದಲೇ ಈ ಮಾದಕ ವಸ್ತುಗಳು ಬಂದಿದ್ದು, ಅವನ ಸೂಚನೆ ಮೇರೆಗೆ ಆರೋಪಿಗಳು ವಿತರಣೆ ಮಾಡುತ್ತಿದ್ದರು.

ಬಾಗಲೂರು ಪ್ರದೇಶದಲ್ಲಿ ಅನೇಕ ಶೈಕ್ಷಣಿಕ ಸಂಸ್ಥೆಗಳು ಇರುವ ಹಿನ್ನೆಲೆ, ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಕೆ ಆಗುತ್ತಿದ್ದದೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಇವುಗಳನ್ನು ಖರೀದಿ ಮಾಡುತ್ತಿದ್ದ ಗ್ರಾಹಕರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಒಂದೇ ಕಾರ್ಯಾಚರಣೆಯಲ್ಲಿ ಅತಿ ಹೆಚ್ಚು ಎಲ್‌ಎಸ್‌ಡಿ ಸ್ಟ್ರಿಪ್‌ಗಳನ್ನು ಜಪ್ತಿ ಮಾಡಿದ ಘಟನೆ ಇದಾಗಿದ್ದು, ಪ್ರತಿ ಸ್ಟ್ರಿಪ್ ಅನ್ನು ರೂ.3,000ಕ್ಕೆ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

No Comments

Leave A Comment