ಸಾಹಸಸಿಂಹ, ಏಜೆಂಟ್ ಅಮರ್ ಚಿತ್ರ ಖ್ಯಾತಿಯ ನಿರ್ದೇಶಕ ಜೋ ಸೈಮನ್ ಹೃದಯಾಘಾತದಿಂದ ನಿಧನ...

ಉಡುಪಿ ಶ್ರೀ ಅನಂತೇಶ್ವರ ದೇಗುಲದಲ್ಲಿ ಫೆ.14ರಿಂದ ಫೆ.21ರ ವರೆಗೆ ಶಿವರಾತ್ರಿ ಮಹೋತ್ಸವಕ್ಕೆ ಧ್ವಜಾರೋಹಣದೊ೦ದಿಗೆ ಅದ್ದೂರಿಯ ಚಾಲನೆ…

ಉಡುಪಿ: ಫೆ. 15: ಶ್ರೀ ಅನಂತೇಶ್ವರ ದೇಗುಲದಲ್ಲಿ ಫೆ.14ರಿಂದ ಫೆ.21ರ ವರೆಗೆ ಶಿವರಾತ್ರಿ ಮಹೋತ್ಸವ ಹಾಗೂ ವಾರ್ಷಿಕ ರಥೋತ್ಸವ ಜರಗಲಿದ್ದು ಇ೦ದು ಭಾನುವಾರದ೦ದು ಶ್ರೀದೇವರಿಗೆ ಹೋಮಹವನದೊ೦ದಿಗೆ ಧ್ವಜಾರೋಹಣದೊ೦ದಿಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಅ೦ಗವಾಗಿ ಹಮ್ಮಿಕೊಳ್ಳಲಾದ ಸಾ೦ಸ್ಕೃತಿಕ ಕಾರ್ಯಕ್ರಮಕ್ಕೆ ಶ್ರೀಪುತ್ತಿಗೆ ಮಠದ ದಿವಾನರಾದ ನಾಗರಾಜ್ ಆಚಾರ್ಯರವರು ಹಾಗೂ ಪ್ರಸನ್ನ ಆಚಾರ್ಯರವರು ದ್ವೀಪಪ್ರಜ್ವಲಿಸುವುದರೊ೦ದಿಗೆ ಚಾಲನೆಯನ್ನು ನೀಡಿ ಶುಭಹಾರೈಸಿದರು.

ಮಠದ ವ್ಯವಸ್ಥಾಪಕರಾದ ವಿಷ್ಣುಮೂರ್ತಿ ಉಪಾಧ್ಯಾಯ,ರಾಮಚ೦ದ್ರ ಕೊಡ೦ಚ ಮತ್ತು ದೇವಳದ ಅರ್ಚಕ ವೃ೦ದದವರು ಹಾಜರಿದ್ದರು. 

ಫೆ.14ರ ರಾತ್ರಿ ಬಲಿ, ಅಂಕುರಾರೋಪಣ, ಫೆ.15ರ ಮಹಾ ಶಿವರಾತ್ರಿಯಂದು ಧ್ವಜಾರೋಹಣ, ಕಲಶಾಭಿಷೇಕ, ಮಧ್ಯಾಹ್ನ ಮಹಾ ಪೂಜೆ, ರಾತ್ರಿ ಶಿವರಾತ್ರಿ ಪೂಜೆ, ಮಹಾರಂಗಪೂಜೆ, ಫೆ.16ರಿಂದ ಫೆ.18 ವರೆಗೆ ಪ್ರತಿದಿನ ಪ್ರಧಾನ ಹೋಮ, ಮಹಾಪೂಜೆ, ಕಟ್ಟೆಪೂಜೆ, ಫೆ.19ರಂದು ಮಹಾಪೂಜೆ, ರಥಾರೋಹಣ ನಡೆದು ಮಹಾರಥೋತ್ಸವ ನಡೆಯಲಿದೆ.

ಫೆ.20ರಂದು ಕವಾಟೋದ್ಘಾಟನೆ, ಮಹಾಪೂಜೆ, ಅವಭೃಥ ಸ್ನಾನ, ಧ್ವಜಾವರೋಹಣ, ಮಹಾ ಮಂತ್ರಾಕ್ಷತೆ, ಫೆ.21ರಂದು ಮಹಾಸಂಪ್ರೋಕ್ಷಣೆ ಜರಗಲಿದೆ. ಪ್ರತಿದಿನ ಭಜನೆ, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶಿವರಾತ್ರಿ ಪ್ರಯುಕ್ತ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ ದಲ್ಲಿಯೂ ಕಾರ್ಯಕ್ರಮ ನಡೆಯಲಿದೆ.

 

No Comments

Leave A Comment