ಸಾಹಸಸಿಂಹ, ಏಜೆಂಟ್ ಅಮರ್ ಚಿತ್ರ ಖ್ಯಾತಿಯ ನಿರ್ದೇಶಕ ಜೋ ಸೈಮನ್ ಹೃದಯಾಘಾತದಿಂದ ನಿಧನ...

ಪ್ರೇಮಿಗಳ ದಿನಾಚರಣೆ: ರೋಸ್​​ ಡೇ ದಿನ ಗಂಡನಿಗೆ ಗುಲಾಬಿ ಹೂ ಕೊಟ್ಟ ಮಹಿಳೆ ವಿರುದ್ಧ ಬಿತ್ತು FIR

ಪಾಟ್ನಾ: ರೋಸ್​ ಡೇ ದಿನ ಗಂಡನಿಗೆ ಗುಲಾಬಿ ಕೊಟ್ಟ ಮಹಿಳೆ ವಿರುದ್ಧ ಎಫ್​ಐಆರ್ ದಾಖಲಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಕೇವಲ ಪತ್ನಿ ಮಾತ್ರವಲ್ಲ ಪತಿ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆಕೆ ಪತಿಗೆ ಗುಲಾಬಿ ನೀಡುವ ಮೊದಲು ಗಂಡನಿಗೆ ವೈನ್ ಬಾಟಲಿಯನ್ನು ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ. ಬಿಹಾರದಲ್ಲಿ ಮದ್ಯಪಾನ ನಿಷೇಧವಿರುವ ಕಾರಣ ಅವರಿಬ್ಬರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಕಾಂಚನ್ ಬ್ಯೂಟಿ ಪಾರ್ಲರ್ ಒಳಗೆ ಪಿಸ್ತೂಲ್ ಹಿಡಿದು ಪೋಸ್ ನೀಡುತ್ತಿರುವ ಪ್ರತ್ಯೇಕ ಫೋಟೋ ವಿಡಿಯೋ ಕಾಣಿಸಿಕೊಂಡಾಗ ಮತ್ತಷ್ಟು ಸಂಕಷ್ಟ ಎದುರಾಗಿದೆ. ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಮುಂಗರ್ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ನಂತರ ಪೊಲೀಸರು ಮಹಿಳೆಯ ಮನೆಯ ಮೇಲೆ ದಾಳಿ ನಡೆಸಿದ್ದಾರೆ.

ತನಿಖೆಯಲ್ಲಿ ಫೋಟೋದಲ್ಲಿರುವ ಪಿಸ್ತೂಲ್ ದೀನದಯಾಳ್ ಚೌಕ್ ನಿವಾಸಿ ವಿಶಾಲ್ ಕುಮಾರ್ ಅವರಿಗೆ ಸೇರಿದ ಪರವಾನಗಿ ಪಡೆದ ಗನ್ ಅದಾಗಿತ್ತು ಎಂದು ತಿಳಿದುಬಂದಿದೆ. ಪೊಲೀಸರು ಈಗ ಕಾಂಚನ್ ದೇವಿ ಮತ್ತು ಗನ್ ಮಾಲೀಕ ವಿಶಾಲ್ ಕುಮಾರ್ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.

ಕಾಂಚನ್ ದೇವಿ ಎಂಬ ಮಹಿಳೆ ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಸ್ವತಃ ಪೋಸ್ಟ್ ಮಾಡಿದ್ದರು. ವೀಡಿಯೊದಲ್ಲಿ, ಅವರು ತಮ್ಮ ಪತಿಗೆ ಗುಲಾಬಿಯನ್ನು ನೀಡಿ, ಅವರಿಗೆ ಒಂದು ಲೋಟ ವೈನ್ ನೀಡಿ ವೈನ್ ಬಾಟಲಿಯನ್ನು ಕೊಡುತ್ತಿರುವುದನ್ನು ಕಾಣಬಹುದು.

ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾದ ಈ ಕ್ಲಿಪ್ ಅನ್ನು ತೆಗೆದುಹಾಕುವ ಮೊದಲು ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ಆದಾಗ್ಯೂ, ನಂತರ ಮಹಿಳೆ ಪಿಸ್ತೂಲ್ ಹಿಡಿದು ಭೋಜ್‌ಪುರಿ ಹಾಡಿಗೆ ಲಿಪ್ ಸಿಂಕ್ ಮಾಡುತ್ತಿರುವುದನ್ನು ತೋರಿಸುವ ಮತ್ತೊಂದು ವೀಡಿಯೊ ಕಾಣಿಸಿಕೊಂಡಿತ್ತು.

No Comments

Leave A Comment