ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; ಸೋಮವಾರದಿಂದ ದರ ಏರಿಕೆ ಇಲ್ಲ- ಸಂಸದ ತೇಜಸ್ವಿ ಸೂರ್ಯ ಮಾಹಿತಿ.....ಭಾರತ–ಅಮೆರಿಕ ಮಧ್ಯಂತರ ಒಪ್ಪಂದದಲ್ಲಿ ರೈತರಿಗೆ ಹಾನಿಯಾಗುವ ಯಾವುದೇ ವಸ್ತುಗಳಿಲ್ಲ: ಸಚಿವ ಪಿಯೂಷ್ ಗೋಯಲ್...
IPLನಲ್ಲಿ ಇಲ್ಲ ಚಾನ್ಸ್: ಪಾಕಿಸ್ತಾನ್ ಸೂಪರ್ ಲೀಗ್ಗೆ 47 ವಿದೇಶಿ ಆಟಗಾರರು ಆಯ್ಕೆ
PSL 2026 Foreign Players: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅವಕಾಶ ವಂಚಿತರಾಗಿದ್ದ ಹಲವು ಆಟಗಾರರು ಪಾಕಿಸ್ತಾನ್ ಸೂಪರ್ ಲೀಗ್ಗೆ ಆಯ್ಕೆಯಾಗಿದ್ದಾರೆ. ಅದರಲ್ಲೂ ಕಳೆದ ಸೀಸನ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿದ್ದ ಡೆವೊನ್ ಕಾನ್ವೆ, ಈ ಹಿಂದೆ ಎಸ್ಆರ್ಹೆಚ್ ತಂಡವನ್ನು ಮುನ್ನಡೆಸಿದ್ದ ಡೇವಿಡ್ ವಾರ್ನರ್, ಹಾಗೆಯೇ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ಈ ಬಾರಿಯ ಪಿಎಸ್ಎಲ್ನಲ್ಲಿ ಕಣಕ್ಕಿಳಿಯಲಿದ್ದಾರೆ.
PSL 2026: ಪಾಕಿಸ್ತಾನ್ ಸೂಪರ್ ಲೀಗ್ನ 11ನೇ ಸೀಸನ್ಗಾಗಿ ಸಿದ್ಧತೆಗಳು ಶುರುವಾಗಿದೆ. ಇದರ ಮೊದಲ ಹೆಜ್ಜೆಯಾಗಿ ಇದೀಗ ಹರಾಜು ಪ್ರಕ್ರಿಯೆ ನಡೆದಿದೆ. ಈ ಹರಾಜಿನ ಮೂಲಕ ಹಲವು ವಿದೇಶಿ ಆಟಗಾರರು ಪಾಕಿಸ್ತಾನ್ ಸೂಪರ್ ಲೀಗ್ಗೆ ಎಂಟ್ರಿ ಕೊಟ್ಟಿದ್ದಾರೆ. ಅದರಂತೆ ಮುಂಬರುವ ಪಿಎಸ್ಎಲ್ನಲ್ಲಿ ಕಾಣಿಸಿಕೊಳ್ಳಲಿರುವ ವಿದೇಶಿ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…
ಇಸ್ಲಾಮಾಬಾದ್ ಯುನೈಟೆಡ್ ತಂಡ: ಡೆವೊನ್ ಕಾನ್ವೇ (ನ್ಯೂಝಿಲೆಂಡ್), ಆಂಡ್ರೀಸ್ ಗೌಸ್ (ಅಮೆರಿಕ) ಮಾರ್ಕ್ ಚಾಪ್ಮನ್ (ನ್ಯೂಝಿಲೆಂಡ್), ಮ್ಯಾಕ್ಸ್ ಬ್ರ್ಯಾಂಟ್ (ಆಸ್ಟ್ರೇಲಿಯಾ), ಶಮರ್ ಜೋಸೆಫ್ (ವೆಸ್ಟ್ ಇಂಡೀಸ್), ರಿಚರ್ಡ್ ಗ್ಲೀಸನ್ (ಇಂಗ್ಲೆಂಡ್), ದೀಪೇಂದ್ರ ಸಿಂಗ್ ಐರೀ (ನೇಪಾಳ).
ಕರಾಚಿ ಕಿಂಗ್ಸ್: ಮೊಯಿನ್ ಅಲಿ (ಇಂಗ್ಲೆಂಡ್), ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ), ಆ್ಯಡಂ ಝಂಪಾ (ಆಸ್ಟ್ರೇಲಿಯಾ), ಜಾನ್ಸನ್ ಚಾರ್ಲ್ಸ್ (ವೆಸ್ಟ್ ಇಂಡೀಸ್), ಅಕಿಬ್ ಇಲ್ಯಾಸ್ (ಒಮಾನ್), ಮುಹಮ್ಮದ್ ವಸೀಮ್ (ಯುಎಇ).