ಉಡುಪಿಯ ಶ್ರೀಕೃಷ್ಣಮಠದಲ್ಲಿ ಜರಗಲಿರುವ ಲಕ್ಷದೀಪೋತ್ಸವಕ್ಕೆ ಭರದ ಸಿದ್ದತೆ-ಉತ್ಥಾನ ದ್ವಾದಶಿಯಿ೦ದ ಲಕ್ಷದೀಪೋತ್ಸವ ಆರ೦ಭ.....ನವೆ೦ಬರ್ 26ರ ಗುರುವಾರ ಲಕ್ಷದೀಪೋತ್ಸವ ಮತ್ತು 27ರ ಶುಕ್ರವಾರದ೦ದು ಓಕುಳಿಯು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪತ್ರಿಯ ವಾಡಿಕೆಯ೦ತೆ ಲಕ್ಷದೀಪೋತ್ಸವವು ಜರಗಲಿದೆ....

ಬೆಂಗಳೂರು ಏರ್​​ಪೋರ್ಟ್​​​ನಲ್ಲಿ 38.60 ಕೋಟಿ ರೂ ಮೌಲ್ಯದ ಕೊಕೇನ್ ವಶಕ್ಕೆ

ದೇವನಹಳ್ಳಿ: ಜನವರಿ 22: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್​ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ 38.60 ಕೋಟಿ ರೂ ಮೌಲ್ಯದ 7.72 ಕೆಜಿ ಕೊಕೇನ್​​ ವಶಕ್ಕೆ ಪಡೆದುಕೊಂಡಿದ್ದಾರೆ.

ಬ್ರೆಜಿಲ್​ನ ಸೌಪಾಲೊ ಏರ್​​ಪೋರ್ಟ್​ನಿಂದ ಕೆಐಎಬಿಗೆ ಬಂದಿದ್ದ ವ್ಯಕ್ತಿ, ಮಕ್ಕಳ ಕಥೆ ಪುಸ್ತಕಗಳ ಮಾದರಿಯಲ್ಲಿ ಡ್ರಗ್ಸ್ ಅಡಗಿಸಿ ಸಾಗಾಟಕ್ಕೆ ಯತ್ನಿಸಿದ್ದಾನೆ. ಅನುಮಾನಗೊಂಡು ಲಗೇಜ್​ ಬ್ಯಾಗ್​ ಪರಿಶೀಲನೆ ನಡೆಸಿದಾಗ ಡ್ರಗ್ಸ್ ಪತ್ತೆ ಆಗಿದೆ.

ಬ್ರೆಜಿಲ್​ನ ಸೌಪಾಲೊ ಏರ್​​ಪೋರ್ಟ್​ನಿಂದ ಕೆಐಎಬಿಗೆ ಬಂದಿದ್ದ ಪ್ರಯಾಣಿಕ ಲಗೇಜ್ ಬ್ಯಾಗ್​​ನಲ್ಲಿ ಮಕ್ಕಳ ಕಥೆ ಪುಸ್ತಕಗಳ ಬುಕ್​ಗಳ ರಟ್ ಅಡಿಯಲ್ಲಿ ಡ್ರಗ್ಸ್​ ಇಟ್ಟಿದ್ದ. ಅನುಮಾನಗೊಂಡ ಏರ್​ಪೋರ್ಟ್​ ಕಸ್ಟಮ್ಸ್​ ಅಧಿಕಾರಿಗಳು ಲಗೇಜ್​ ಬ್ಯಾಗ್​ ಪರಿಶೀಲನೆ ನಡೆಸಿದಾಗ ಡ್ರಗ್ಸ್ ಪತ್ತೆ ಆಗಿದೆ.ಇನ್ನು ಡ್ರಗ್ಸ್ ಅಡಗಿಸಿ ಸಾಗಾಟಕ್ಕೆ ಯತ್ನಿಸಿದ್ದ ಪ್ರಯಾಣಿಕನನ್ನು ಇದೀಗ ವಶಕ್ಕೆ ಪಡೆದಿರುವ ಏರ್​ಪೋರ್ಟ್​ ಕಸ್ಟಮ್ಸ್​ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಜೊತೆಗೆ 38.60 ಕೋಟಿ ರೂ ಮೌಲ್ಯದ 7.72 ಕೆಜಿ ಕೊಕೇನ್​​ ವಶಕ್ಕೆ ಪಡೆದುಕೊಂಡಿದ್ದಾರೆ.

No Comments

Leave A Comment