ಖ್ಯಾತ ಗಾಯಕಿ ಎಸ್ ಜಾನಕಿಗೆ ಪುತ್ರ ಶೋಕ: ಹಠಾತ್ ಹೃದಯಾಘಾತಕ್ಕೆ ಬಲಿಯಾದ ಮುರಳಿ ಕೃಷ್ಣ!......

ಶ್ರೀಭಗವಾನ್ ನಿತ್ಯಾನ೦ದ ಸ್ವಾಮಿ ಮ೦ದಿರ ಮಠ ತೃತೀಯ ವರ್ಧ೦ತ್ಯುತ್ಸವ,ಸಮ್ಮಾನ

ಉಡುಪಿ: ನಗರದ ಮುದ್ದಣ ಮಾರ್ಗದಲ್ಲಿರುವ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದ ತೃತೀಯ ವರ್ಧಂತ್ಯುತ್ಸವ ಸಂದರ್ಭ ಮಂದಿರ ಮಠದ ಕಾರ್ ನಿರ್ವಾಹಕ ಟ್ರಸ್ಟಿ ಕೆ. ದಿವಾಕರ ಶೆಟ್ಟಿ ತೋಟದಮನೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಂದಿರ ಮಠದ ಆಡಳಿತ ಟ್ರಸ್ಟಿ ಕೆ.ಕೆ. ಆವರ್ಶೇಕರ್ ಮುಂಬಯಿ ಮತ್ತು ಉದ್ಯಮಿ ಶಾರದಾ ಸೂರು ಕರ್ಕೇರ ಮುಂಬಯಿ ಅವರನ್ನು ಸಮ್ಮಾನಿಸಲಾಯಿತು.

ಆಶಿಶ್ ಆವರ್ಶೇಕರ್, ತನಿಷಾ ಆವರ್ಶೇಕರ್, ಸಾಯಿರಾಧಾ ಗ್ರೂಪ್‌ನ ರವಿ ಶೆಟ್ಟಿ ಮುಂಬಯಿ, ಮನೋಹರ ಎಸ್.ಶೆಟ್ಟಿ, ಶೆಟ್ಟಿ ಉಜ್ವಲ್ ಡೆವಲಪರ್ಸ್‌ನ ಪ್ರವರ್ತಕ ಪುರುಷೋತ್ತಮ ಪಿ. ಶೆಟ್ಟಿ ಹರ್ಷದ ಪ್ರಕಾಶ್ ರೀಟೇಲ್ ಪೈ.ಲಿ.ನ ಆಡಳಿತ ನಿರ್ದೇಶಕ ಕೆ. ಸೂರಪ್ರಕಾಶ್, ಮಂದಿರ ಮಠದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಬನ್ನಂಜೆ, ಕಾರ್ಯದರ್ಶಿ ಈಶ್ವರ್ ಚಿಟ್ಪಾಡಿ, ಜಂಟಿ ಕಾರನಿರ್ವಾಹಕ ಟ್ರಸ್ಟಿಕೆ. ಮೋಹನಚಂದ್ರನ್ ನಂಬಿಯಾರ್, ಪ್ರಮುಖರಾದ ಮಾಜಿ ಸಚಿವರಾದ ನಾಗರಾಜ್ ಶೆಟ್ಟಿ, ವಾಸುದೇವ ಶೆಟ್ಟಿ, ರಾಮಪ್ಪ ಬೆಂಗಳೂರು, ವಾಸುದೇವ ಶೆಟ್ಟಿ ಕಾಪು, ರಘುವೀರ್ ಪೈ, ನಾಗರಾಜ ಶೆಟ್ಟಿ ನವೀನ್ ಶೆಟ್ಟಿತೋನ್ಸೆ, ವಿ.ಜಿ. ಶೆಟ್ಟಿ ವಿಶ್ವನಾಥ ಸನಿಲ್, ನರೇಶ್, ಬಿಂದು ಶೆಟ್ಟಿ ಮಣಿಪುರ, ಟಿ. ರವಿರಾಜನ್, ಮೋಹನದಾಸ ಪಡಿಯಾರ್, ಗಿರೀಶ್, ಸಮಿತಿ ಪದಾಧಿಕಾರಿಗಳು, ಸದಸ್ಯರು, ಭಕ್ತರು ಉಪಸ್ಥಿತರಿದ್ದರು.

ಬೆಳಿಗ್ಗೆಯಿ೦ದ ಮಧ್ಯಾಹ್ನದ ವರೆಗೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆದವು ನ೦ತರ ಮಧ್ಯಾಹ್ನ ಅನ್ನ ಸ೦ರ್ಪಣೆಯು ಜರಗಿತು.ಸ೦ಜೆ ಪಲ್ಲಕಿ ಪೇಟೆ ಉತ್ಸವವು ನಡೆಯಿತು. ನ೦ತರ ರಾತ್ರೆ ಉತ್ಸವ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ಜರಗಿತು.

No Comments

Leave A Comment