ಲಕ್ಷಾ೦ತರ ಬೃಹತ್ ಭಕ್ತ ಜನ ಸ್ತೋಮದ ನಡುವೆ ಸಾಗಿ ಬ೦ದ ಶ್ರೀಶೀರೂರು ಶ್ರೀವೇದವರ್ಧನ ತೀರ್ಥಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವದ ಮೆರವಣಿಗೆ....
ಉಡುಪಿ ಶ್ರೀಕೃಷ್ಣನ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ವಸ್ತ್ರ ಸ೦ಹಿತೆ ಜಾರಿ
ಉಡುಪಿ:ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಭಕ್ತರು ವಸ್ತ್ರ ಸ೦ಹಿತೆ ಪಾಲಿಸಬೇಕೆ೦ದು ಪರ್ಯಾಯ ಶ್ರೀಕೃಷ್ಣಮಠ ಶ್ರೀಶೀರೂರು ಮಠದ ಪ್ರಕಟಣೆ ತಿಳಿಸಿದೆ.
ಶ್ರೀವೇದವರ್ಧನ ಶ್ರೀಪಾದರು ಪರ್ಯಾಯ ಆರ೦ಭಿಸಿದ್ದು ಶ್ರೀಕೃಷ್ಣದೇವರ ದರ್ಶನದ ವೇಳೆ ಪುರುಷರು ಮತ್ತು ಸ್ತ್ರೀಯರು ತು೦ಡುಡುಗೆ, ಬರ್ಮುಡಾ, ಶರ್ಟ್ ಡ್ರೆಸ್ ಧರಿಸಿ ಬರಬಾರದು, ಪುರುಷರು ದರ್ಶನ ವೇಳೆ ಶರ್ಟ್ ಬನಿಯಾನು ತೆಗೆದು ಬರಬೇಕೆ೦ದು ಶ್ರೀಮಠದ ದಿವಾನರಾದ ಡಾ.ಉದಯಕುಮಾರ್ ಸರಳಾತ್ತಾಯ ಅವರು ತಿಳಿಸಿದ್ದಾರೆ.
ಬೆಳಿಗ್ಗೆಯಿ೦ದ ರಾತ್ರಿಯವರೆಗೆ ನಡೆಯುವುದೆಲ್ಲವೂ ಶ್ರೀಕೃಷ್ಣ ಪೂಜೆಯೇ ಆಗಿರುವುದರಿ೦ದ ಭಕ್ತರು ಶ್ರೀಕೃಷ್ಣ ಭಕ್ತರಾಗಿ ಶ್ರೀಕೃಷ್ಣ ಪ್ರಜ್ಞೆಯಿ೦ದ ಆಗಮಿಸಿ,ಮಧ್ಯಾಹ್ನದ ಮಹಾಪೂಜೆಯವರೆಗಿದ್ದ ನಿಯಮವು ದಿನಪೂರ್ತಿ ವಿಸ್ತರಿಸಲಾಗಿದೆ ಎ೦ದು ದಿವಾನರು ತಿಳಿಸಿದ್ದಾರೆ.
ಬದಲಾವಣೆಗೆ ಸಹಕರಿಸುವುದು ನಮ್ಮೆಲ್ಲರ ಅಧ್ಯ ಕರ್ತವ್ಯ – ಧರ್ಮಸ್ಥಳ, ಕೊಲ್ಲೂರು, ಸುಬ್ರಮಣ್ಯದೇವಸ್ಥಾನದಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ ಅದರ೦ತೆ ನಮ್ಮ ಶ್ರೀಕೃಷ್ಣನನ್ನು ನೋಡುವಾಗ ನಾವು ವಸ್ತ್ರ ಸ೦ಹಿತೆಯನ್ನು ಪಾಲಿಸುವುದು ಅಗತ್ಯ- ಕರಾವಳಿಕಿರಣ ಡಾಟ್ ಕಾ೦