ಶ್ರೀಶೀರೂರು ಪರ್ಯಾಯ: ಶ್ರೀವಾಸ ಹೆಲ್ತ್ ಕೇರ್, ಪರ್ಕಳ ಹಾಗೂ ಕ್ಷಾರಪಾಣಿ ಹೆಲ್ತ್ ಕೇರ್ ಆಯುರ್ವೇದ ವೈದ್ಯಕೀಯ ಸೇವೆ
ಶ್ರೀಶೀರೂರು ಪರ್ಯಾಯದ ಅಂಗವಾಗಿ ಶ್ರೀವಾಸ ಹೆಲ್ತ್ ಕೇರ್, ಪರ್ಕಳ ಹಾಗೂ ಕ್ಷಾರಪಾಣಿ ಹೆಲ್ತ್ ಕೇರ್, ಬ್ರಹ್ಮಗಿರಿ ಇವರ ಸಹಯೋಗದಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಸೇವೆ ಯಶಸ್ವಿಯಾಗಿ ಆಯೋಜಿಸಲಾಯಿತು. ಶಿಬಿರವನ್ನು 2026ರ ಜನವರಿ 15ರಂದು ಶ್ರೀ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಶಾಸಕರಾದ ಯಶಪಾಲ್ ಸುವರ್ಣ, ಉಡುಪಿ ಶ್ರೀ ರಾಘವೇ೦ದ್ರ ಮಠದ ಮ್ಯಾನೇಜರ್ ಜಯತೀರ್ಥ ಆಚಾರ್ಯ,ಉಡುಪಿ ಗಾ೦ಧೀ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಹರಿಶ್ಚಂದ್ರ ಎಂ ಇವರ ಶುಭ ಹಸ್ತದಿಂದ ಉದ್ಘಾಟಿಸಲಾಯಿತು.
ಈ ಶಿಬಿರದಲ್ಲಿ ಡಾ. ಶ್ರೀಲಕ್ಷ್ಮಿ ಆರ್, ಡಾ. ಅಶ್ವಿನ್ ಜಯರಾಮ ಶೆಟ್ಟಿ, ಡಾ. ಮಹಾಲಕ್ಷ್ಮಿ ಎಂಎಸ್ ಹಾಗೂ ಇತರ ಆಯುರ್ವೇದ ಸ್ವಯಂಸೇವಕರು, ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆ ನೀಡಿದರು. ಪೇಜಾವರ ಮಠದ ರಾಘುರಾಮ್ ಆಚಾರ್ಯ, ಕೆ.ವಿಷ್ಣುಮೂರ್ತಿ ಆಚಾರ್ಯ ಮೊದಲಾದವರು ಹಾಜರಿದ್ದರು.
ಕಾರ್ಯಕ್ರಮವನ್ನು ಡಾ. ಶ್ರೀಲಕ್ಷ್ಮಿ ಆರ್ ಅವರು ನಿರ್ವಹಿಸಿದರು. ಶಿಬಿರದ ಮೊದಲ ಎರಡು ದಿನಗಳಲ್ಲಿ, ಶಿಬಿರದ ಮೊದಲ ಎರಡು ದಿನಗಳಲ್ಲಿ ಮಾತ್ರವೇ 350ಕ್ಕೂ ಅಧಿಕ ಮಂದಿ ಶಿಬಿರದ ಸೌಲಭ್ಯವನ್ನು ಪಡೆದುಕೊಂಡು, ಅಭೂತಪೂರ್ವ ಸ್ಪಂದನೆ ವ್ಯಕ್ತಪಡಿಸಿದ್ದಾರೆ350ಕ್ಕೂ ಅಧಿಕ ಮಂದಿ ಶಿಬಿರದ ಸೌಲಭ್ಯವನ್ನು ಪಡೆದುಕೊಂಡು, ಅಭೂತಪೂರ್ವ ಸ್ಪಂದನೆ ವ್ಯಕ್ತಪಡಿಸಿದ್ದಾರೆ. ಇದಲ್ಲದೆ, ಶಿಬಿರದ ಭಾಗವಾಗಿ ಜನವರಿ 17 ಮತ್ತು 18, 2026ರಂದು ಉಚಿತ ಟಿಎಸ್‌ಎಚ್ (TSH) ಪರೀಕ್ಷೆ ಹಾಗೂ ಬಿಎಂಡಿ (BMD) ಪರೀಕ್ಷೆಗಳನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರಿಂದ ಹೆಚ್ಚಿನ ಪ್ರಯೋಜನ ದೊರೆಯುವ ನಿರೀಕ್ಷೆಯಿದೆ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಪಡೆದ ಈ ಶಿಬಿರವು ಶ್ರೀಶೀರೂರು ಪರ್ಯಾಯದ ಸೇವಾ ಮನೋಭಾವವನ್ನು ಪ್ರತಿಬಿಂಬಿಸಿ, ಆಯುರ್ವೇದ ಚಿಕಿತ್ಸೆಯ ಮಹತ್ವವನ್ನು ಜನತೆಗೆ ಪರಿಚಯಿಸಿತು.
