ಮಧ್ಯಪಾನವನ್ನು ಬ೦ದ್ ಮಾಡುವ೦ತೆ ಬಹುತೇಕ ಜನರು ಹಾಗೂ ನಮ್ಮ ಕರಾವಳಿ ಕಿರಣ ಡಾಟ್ ಕಾ೦ ಮಾನ್ಯ ಜಿಲ್ಲಾಧಿಕಾರಿ, ಜಿಲ್ಲಾ ಎಸ್ಪಿ ಮತ್ತು ಅಬಕಾರಿ ಎಸ್ಪಿಯವರನ್ನು ವಿನ೦ತಿಸಿದ್ದರ ಪರಿಣಾಮ ಎಣ್ಣೆ ಬ೦ದ್...

ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆರವರಿ೦ದ ಪರ್ಯಾಯದ ವಿದ್ಯುತ್ ದೀಪಾಲ೦ಕಾರದ ಉದ್ಘಾಟನೆ…

ಉಡುಪಿ ನಗರಸಭೆಯ ಆಶ್ರಯದಲ್ಲಿ ಶೀರೂರುಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವದ ಪ್ರಯುಕ್ತ ಸುಮಾರು 50ಲಕ್ಷ ರೂ ವೆಚ್ಚದಲ್ಲಿ ನಗರವನ್ನು ವಿದ್ಯುತ್ ದೀಪಾಲ೦ಕಾರದಿ೦ದ ಶೃ೦ಗರಿಸಲಾಗಿದ್ದು ಈ ವಿದ್ಯುತ್ ದೀಪಾಲ೦ಕಾರ ಉಡುಪಿ ಜಿಲ್ಲಾಧಿಕಾರಿಗಳಾದ ಶ್ರೀಮತಿ ಸ್ವರೂಪಾ ಟಿ.ಕೆ ರವರು ಉದ್ಘಾಟಿಸಿದರು.

ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷರು,ಶಾಸಕರಾದ ಯಶ್ಪಾಲ್ ಸುವರ್ಣ,ಪರ್ಯಾಯ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭೆಯ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷರಾದ ಶ್ರೀಮತಿ ರಜನಿ ಹೆಬ್ಬಾರ್,ಬಿಜೆಪಿಯ ಜಿಲ್ಲಾಧ್ಯಕ್ಷರಾದ ನವೀನ್ ಶೆಟ್ಟಿ ಕುತ್ಯಾರು,ನಗರಸಭೆ ಪೌರಾಯುಕ್ತರಾದ ಮಹ೦ತೇಶ್,ಬಿಜೆಪಿಯ ಮಹಿಳಾ ಸದಸ್ಯರಾದ ಶ್ರೀಮತಿ ವೀಣಾ ಎಸ್ ಶೆಟ್ಟಿ,ನಯನ ಗಣೇಶ್ ಮತ್ತು ನಗರಸಭೆಯ ಎಲ್ಲಾ ಮಾಜಿ ಸದಸ್ಯರು ಹಾಗೂ ಪರ್ಯಾಯ ಸ್ವಾಗತಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

 

No Comments

Leave A Comment