ಸಾಹಸಸಿಂಹ, ಏಜೆಂಟ್ ಅಮರ್ ಚಿತ್ರ ಖ್ಯಾತಿಯ ನಿರ್ದೇಶಕ ಜೋ ಸೈಮನ್ ಹೃದಯಾಘಾತದಿಂದ ನಿಧನ...
ಉಡುಪಿ ಪರ್ಯಾಯ ಹೊರೆ ಕಾಣಿಕೆ ವಿಚಾರದಲ್ಲಿ ಉಡುಪಿ ಶಾಸಕರಿಂದ ಗೊಂದಲ ಸೃಷ್ಟಿ: ಸುರೇಶ್ ಶೆಟ್ಟಿ ಬನ್ನಂಜೆ
ಉಡುಪಿ:ಅನಗತ್ಯವಾಗಿ ನಮ್ಮ ಉಡುಪಿಯ ಶಾಸಕರು ಮುಸ್ಲಿಂ ಸೌಹಾರ್ದ ಸಮಿತಿಯವರು ಪರ್ಯಾಯ ಮಹೋತ್ಸವಕ್ಕೆ ನೀಡುತ್ತಿರುವ ಹೊರೆ ಕಾಣಿಕೆಯ ಅವಶ್ಯಕತೆ ಇಲ್ಲ ಎಂಬುದನ್ನ ತಮ್ಮ ಪತ್ರಿಕೆ ಹೇಳಿಕೆ ಮೂಲಕ ನೀಡಿರುತ್ತಾರೆ.
ಆದರೆ ಶಾಸಕರು ಉಡುಪಿಯ ಪರ್ಯಾಯ ಮಠಾಧೀಶರೇ ಅಥವಾ ಮಠದ ದೀವಾನರೆ ಎಂಬುದನ್ನು ಸ್ಪಷ್ಟಪಡಿಸಬೇಕು ಈ ಬಗ್ಗೆ ಮಠಾಧೀಶರಾಗಲಿ ಮಠಕ್ಕೆ ಸಂಬಂಧಪಟ್ಟ ದಿವಾನರಾಗಲಿ ಯಾವುದೇ ಹೇಳಿಕೆಯನ್ನು ನೀಡದೆ ಇರುವಾಗ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ಯತ್ನಿಸುತ್ತಿರುವ ನಮ್ಮ ಉಡುಪಿಯ ಶಾಸಕರು ತಾನು ಉಡುಪಿಯ ಜನಪ್ರತಿನಿಧಿ ಎಂಬುದನ್ನು ಮರೆತಿದ್ದಾರೆಯೇ. ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ.
ಅನಗತ್ಯವಾಗಿ ಉಡುಪಿಯಲ್ಲಿ ಗೊಂದಲವನ್ನು ಸೃಷ್ಟಿಸುವ ನಿಮ್ಮ ಈ ಪ್ರಯತ್ನವನ್ನು ಕೈ ಬಿಟ್ಟು ಸೌಹಾರ್ದತೆಯಿಂದ ಎಲ್ಲರೂ ಒಂದಾಗಿ ಉಡುಪಿಯ ಪರ್ಯಾಯ ಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸೋಣ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರು ಉಡುಪಿಯ ನಗರಸಭೆ ಸದಸ್ಯರಾದ ಸುರೇಶ್ ಶೆಟ್ಟಿ ಬನ್ನಂಜೆ ತಿಳಿಸಿರುತ್ತಾರೆ.