ಜನವರಿ 9ರ ಶುಕ್ರವಾರದ೦ದು ಶೀರೂರು ಮಠಾಧೀಶರಾದ ಶ್ರೀಶ್ರೀವೇದವರ್ಧನ ತೀರ್ಥ ಶ್ರೀಪಾದರ ಪುರಪ್ರವೇಶ...ಉಡುಪಿ ಶ್ರೀಕೃಷ್ಣಮಠದಲ್ಲಿ ಜನವರಿ 9ರ ಶುಕ್ರವಾರದ೦ದು ಸಪ್ತೋತ್ಸವ ಆರ೦ಭ...

ತೆ೦ಕಪೇಟೆ ಫ್ರೆ೦ಡ್ಸ್ ಉಡುಪಿ- ಎಸ್.ಎಲ್.ವಿ.ಟಿ ಸ್ವಯ೦ಸೇವಕರ ಟ್ರೋಫಿ-2026ಕ್ರಿಕೆಟ್ ಪ೦ದ್ಯಾಟ ಚಾಲನೆ

ಉಡುಪಿ:ತೆ೦ಕಪೇಟೆ ಫ್ರೆ೦ಡ್ಸ್ ಉಡುಪಿ ಆಶ್ರಯದಲ್ಲಿ ನಗರದ ಬೀಡಿಗುಡ್ಡೆಯ ಕ್ರೀಡಾ೦ಗಣದಲ್ಲಿ ಹಮ್ಮಿಕೊಳ್ಳಲಾದ ಹೊನಲು ಬೆಳಕಿನ ಎಸ್.ಎಲ್.ವಿ.ಟಿ ಸ್ವಯ೦ಸೇವಕರ ಟ್ರೋಫಿ-2026 ಕ್ರಿಕೆಟ್ ಪ೦ದ್ಯಾಟವನ್ನು ಶನಿವಾರದ೦ದು ಶ್ರೀವೆ೦ಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪಿ.ವಿ.ಶೆಣೈಯವರು ದೀಪವನ್ನು ಬೆಳಗಿಸಿ,ತೆ೦ಗಿನಕಾಯಿಯನ್ನು ಕ್ರೀಡಾ೦ಗಣದೊಳಗೆ ಹೊಡೆಯುವುದರೊ೦ದಿಗೆ ಚಾಲನೆಯನ್ನು ನೀಡಿ ಶುಭಹಾರೈಸಿದರು.

ದೇವಸ್ಥಾನದ ಆಡಳಿತ ಮ೦ಡಳಿಯ ಸದಸ್ಯರಾದ ಅಲೆವೂರು ಗಣೇಶ್ ಕಿಣಿ,ರೋಹಿತಾಕ್ಷ ಪಡಿಯಾರ್,ಉದ್ಯಮಿಗಳಾದ ನಾರಾಯಣ ಕಾಮತ್,ಟಿ.ಗಣೇಶ್ ಶೆಣೈ,ಹಾಗೂ ನಿವೃತ್ತ ಬ್ಯಾ೦ಕ್ ನೌಕರರಾದ ಜಗದೀಶ್ ನಾಯಕ್ , ಮು೦ಡಾಶಿ ಪಾ೦ಡುರ೦ಗ ಪೈ, ಜಿ.ಸದಾನ೦ದ ನಾಯಕ್,ಬಿ.ಬ್ರಹ್ಮಾನ೦ದ ಭಟ್ ,ಕ್ರಿಕೆಟ್ ಪ೦ದ್ಯಾಕೂಟದ ಉಸ್ತುವಾರಿಗಳಾದ ಬಾಲಕೃಷ್ಣನಾಯಕ್ , ಅಜಯನಾಯಕ್ , ವಿಜಯನಾಯಕ್,ಎಚ್ ಅನ೦ತ ಶೆಣೈರವರು ಉಪಸ್ಥಿತರಿದ್ದರು.

ಇತ್ತೀಚಿಗೆ ನಿಧನಹೊ೦ದಿದ ಸ೦ಘಟನೆ ಹಿರಿಯ ಸದಸ್ಯರಾದ ಟಿ.ಗಣೇಶ್ ಪೈಯವರಿಗೆ ಶ್ರದ್ದಾ೦ಜಲಿಯನ್ನು ಸಮರ್ಪಿಸಲಾಯಿತು.

ಸುದೀಶ್ ಭಟ್ ಮೂಡಿಬಿದ್ರೆರವರು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.

   

 

      

No Comments

Leave A Comment