ಜನವರಿ 9ರ ಶುಕ್ರವಾರದ೦ದು ಶೀರೂರು ಮಠಾಧೀಶರಾದ ಶ್ರೀಶ್ರೀವೇದವರ್ಧನ ತೀರ್ಥ ಶ್ರೀಪಾದರ ಪುರಪ್ರವೇಶ...ಉಡುಪಿ ಶ್ರೀಕೃಷ್ಣಮಠದಲ್ಲಿ ಜನವರಿ 9ರ ಶುಕ್ರವಾರದ೦ದು ಸಪ್ತೋತ್ಸವ ಆರ೦ಭ...
ಉಡುಪಿ ಜಿಲ್ಲಾ ಆಸ್ಪತ್ರೆಯ ಇಬ್ಬರು ನಿವೃತ್ತ ವೈದ್ಯರಿಗೆ ಬೀಳ್ಕೋಡೆಗೆ ಸಮಾರ೦ಭ
ಉಡುಪಿ:ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆಯಿಂದ ನಿವೃತ್ತರಾದ ಡಾ.ವೆಂಕಟೇಶ್ ಎನ್, ಜನರಲ್ ಸರ್ಜನ್ ( ಅಂಕೋಲಾಜಿಸ್ಟ್ ) ಜಿಲ್ಲಾ ಆಸ್ಪತ್ರೆ ಉಡುಪಿ ಹಾಗೂ ಡಾ.ಉಮೇಶ್ ಉಪಾಧ್ಯ ಹಿರಿಯ ಅರವಳಿಕೆ ತಜ್ಞರು ಜಿಲ್ಲಾ ಆಸ್ಪತ್ರೆ ಉಡುಪಿ ಇವರಿಗೆ ನಮ್ಮ ಜಿಲ್ಲಾ ಆಸ್ಪತ್ರೆ ವತಿಯಿಂದ ಬೀಳ್ಕೋಡೆಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.
ಈ ಸಂಧರ್ಭದಲ್ಲಿ ಅವರಿಗೆ ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಗೌರವ ಬೀಳ್ಕೋಡೆಗೆ ನೀಡಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಆದಂತಹ ಡಾ.ಹೆಚ್ ಅಶೋಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ನಿವಾಸಿ ವೈದ್ಯಾದೀಕಾರಿ ಯಾದತಂಹ ಡಾ ವಾಸುದೇವ್ ಹಾಗೂ ವೈದ್ಯಕೀಯ ತಜ್ಞರುರಾದ ಡಾ ನಿಕ್ಕಿನ್ ಶೆಟ್ಟಿ, ENT ತಜ್ಞರುರಾದ ಡಾ ಮುರಳಿಧರ್ ಪಾಟೀಲ್ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಡಾ ಜಿಲ್ಲಾ ಸರ್ಜನ್.ಮಾತಾನಾಡಿ ನಮಗೆ ಈ ಇಬ್ಬರು ತಜ್ಞ ವೈದ್ಯರು ಉತ್ತಮ ಸೇವೆಯನ್ನು ನೀಡಿ ಜನರ ಹೃದಯದಲ್ಲಿ ಮನೆ ಮಾತಾಗಿದ್ದರು ಎಂದರು ಕ್ಯಾನ್ಸರ್ ರೋಗಿಗಳ ಪಾಲಿಗೆ ದೇವರಾಗಿದ್ದವರು ಇಬ್ಬರು ಎಂದು ಪ್ರಶಂಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ಎಲ್ಲಾ ತಜ್ಞ ವೈದರು ಹಾಗು ನರ್ಸಿಂಗ್ ಅಧಿಕಾರಿಗಳು ಮತ್ತು ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ಮತ್ತು ತಾಯಿ ಮಕ್ಕಳ ಆಸ್ಪತ್ರೆಯ ಎಲ್ಲಾ ತಜ್ಞ ವೈದ್ಯರು ಸಿಬ್ಬಂದಿಗಳು ಉಪಸ್ಥಿತರಿದ್ದರು ಕಾರ್ಯಕ್ರಮ ಯಶ್ವಸಿಗೊಳಿಸಿದರು.