ಶೀರೂರು ಮಠದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯಕ್ಕೆ ಭರದ ಸಿದ್ದತೆ…ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ
ಮೈಸೂರು: ಸೆರೆ ಸಿಕ್ಕಿದ್ದ 4 ಹುಲಿ ಮರಿಗಳ ನಿಗೂಢ ಸಾವು!
ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ಗೌಡನಕಟ್ಟೆ ಬಳಿ ಸೆರೆ ಸಿಕ್ಕಿದ್ದ ನಾಲ್ಕು ಹುಲಿ ಮರಿಗಳು ಸಾವನ್ನಪ್ಪಿವೆ. ತಾಯಿಯಿಂದ ದೂರವಾಗಿ 2 ದಿನ ಆಹಾರವಿಲ್ಲದೇ ಬಳಲಿದ್ದ ಮರಿಗಳು ನಿತ್ರಾಣಗೊಂಡಿದ್ದವು.
ಹುಲಿ ಮರಿಗಳನ್ನು ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿದ್ದಲ್ಲಿರಿಸಲಾಗಿತ್ತು. ನಾಲ್ಕು ದಿನಗಳ ಅಂತರದಲ್ಲಿ ಸಾವಿಗೀಡಾಗಿವೆ. ಹುಲಿ ಮರಿಗಳ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಗೌಡನಕಟ್ಟೆಯ ಪ್ರಕಾಶ್ ಜೋಳದ ಹೊಲದಲ್ಲಿ ನ. 28ರಂದು ನಾಲ್ಕು ಮರಿಗಳೊಂದಿಗೆ ತಾಯಿ ಹುಲಿ ಕಾಣಿಸಿಕೊಂಡಿತ್ತು.
ಮಧ್ಯರಾತ್ರಿ ತಾಯಿ ಹುಲಿ ಸೆರೆಯಾಗಿತ್ತು. ಎರಡು ದಿನಗಳ ನಂತರ ನ. 30ರಂದು ನಾಲ್ಕು ಹುಲಿ ಮರಿಗಳು ಪತ್ತೆಯಾಗಿದ್ದವು. ಸೆರೆ ಹಿಡಿಯುವ ವೇಳೆ ಜನರ ಕಿರುಚಾಟದಿಂದ ಹುಲಿ ಮರಿಗಳು ಗಾಬರಿಯಾಗಿದ್ದವು. ಎರಡು ದಿನ ತಾಯಿಯಿಂದ ದೂರವಾಗಿದ್ದ ಮರಿಗಳು ಆಹಾರವಿಲ್ಲದೇ ಬಳಲಿದ್ದವು. ಜನರ ಕೂಗಾಟದಿಂದ ಅತ್ತಿಂದಿತ್ತ ಓಡಾಡಿ ಸೆರೆ ಹಿಡಿಯುವ ವೇಳೆ ನಿತ್ರಾಣಗೊಂಡಿದ್ದವು.
ತಕ್ಷಣವೇ ಸೂಕ್ತ ಚಿಕಿತ್ಸೆಗಾಗಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಗಾಬರಿಗೊಳಗಾಗಿದ್ದ ಮರಿಗಳು ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ. ಅಸ್ವಸ್ಥಗೊಂಡಿದ್ದ ಹುಲಿ ಮರಿಗಳು ಸಾವನ್ನಪ್ಪಿವೆ.
ಪಶುವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ತಾಯಿ ಹುಲಿ ಆರೋಗ್ಯದಿಂದಿದೆ. ಹುಲಿ ಮರಿಗಳ ಅಂಗಾಂಗಗಳನ್ನು ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಹುಲಿ ಮರಿಗಳ ಸಾವಿನ ಬಗ್ಗೆ ಅರಣ್ಯ ಇಲಾಖೆ ಯಾರಿಗೂ ಮಾಹಿತಿ ನೀಡಿಲ್ಲ.
ಗೌಡನಕಟ್ಟೆ ಪ್ರದೇಶದಲ್ಲಿ ಕಳೆದ ಕೆಲ ತಿಂಗಳಲ್ಲಿ ಹುಲಿ ಸಂಚಲನ ಹೆಚ್ಚಿದ್ದು, ಹಳ್ಳಿಗಳತ್ತ ಬೇಟೆಗಾರ ಹುಲಿಗಳು ಬರುತ್ತಿರುವುದು ಆತಂಕ ಹೆಚ್ಚಿಸಿದೆ. ಈ ಘಟನೆಯು ಸೆರೆ ಕಾರ್ಯಾಚರಣೆಯಲ್ಲಿ ಮರಿಗಳ ತಾಯಿಯಿಂದ ಪ್ರತ್ಯೇಕತೆ ಮತ್ತು ಮಾನವ ಸಂಚಲನದ ಒತ್ತಡ ವನ್ಯಜೀವಿಗಳ ಬದುಕಿನಲ್ಲಿ ಎಷ್ಟು ಗಂಭೀರ ಪರಿಣಾಮ ಬೀರುತ್ತದೆ ಎಂಬುದನ್ನು ಮತ್ತೊಮ್ಮೆ ನೆನಪಿಸಿದೆ.